ಬ್ರೈಟ್ ಎಂಡ್ ಕಾರ್ನರ್, ಅಲ್ಮೋರಾದಿಂದ 2 ಕಿ. ಮೀ ದೂರದಲ್ಲಿರುವ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಸ್ಥಳದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟಗಳು, ಹಿಮದಿಂದ ಆವೃತವಾದ ಶಿಖರಗಳ ಹಿನ್ನಿಲೆಯಲ್ಲಿ ಅತ್ಯಂತ ಅದ್ಭುತವಾಗಿ ಗೋಚರಿಸುತ್ತವೆ. ಅಲ್ಲದೆ, ಈ ಸ್ಥಳದಲ್ಲಿ ಅದ್ಭುತ ಚಂದ್ರೋದಯವನ್ನೂ ಕೂಡ ನೋಡಿ ಆನಂದಿಸಬಹುದು. ಈ ಸ್ಥಳದಲ್ಲಿ ನೋಡಿದ ಸೂರ್ಯಾಸ್ತ, ಸೂರ್ಯೋದಯ ಮತ್ತು ಚಂದ್ರೋದಯದ ಅತ್ಯಾಶ್ಚರ್ಯಕರವಾದ ದೃಶ್ಯಗಳು ಜೀವಮಾನದಲ್ಲೆ ಮರೆಯಲಾಗದ ಅನುಭವವೆಂದರೆ ತಪ್ಪಾಗಲಾರದು.
ಈ ಸ್ಥಳಕ್ಕೆ ಭಗವಾನ್ ಬ್ರೈಟಾನ್ ನ ನಂತರ ಈ ಹೆಸರನ್ನು ಇಡಲಾಗಿದೆ ಮತ್ತು ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಅಲ್ಮೋರಾದಲ್ಲಿನ ಮಾಲ್ ರಸ್ತೆ ಆರಂಭದಲ್ಲಿದೆ. ಶ್ರೀ ರಾಮಕೃಷ್ಣ ಕುಟೀರ ಆಶ್ರಮ ಎಂದು ಪ್ರಸಿದ್ಧಿಯಾದ ಧ್ಯಾನ ಕೇಂದ್ರ ಈ ಸ್ಥಳದ ಹತ್ತಿರ ಇದೆ. ಧ್ಯಾನದಲ್ಲಿ ಆಸಕ್ತಿಯುಳ್ಳ ಪ್ರವಾಸಿಗರು ಏಪ್ರಿಲ್ ತಿಂಗಳಿನಿಂದ ಜೂನ್ ವರೆಗೆ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಈ ಸ್ಥಳಕ್ಕೆ ಭೇಟಿ ಮಾಡಬಹುದು. ವಿವೇಕಾನಂದ ಲೈಬ್ರರಿ ಮತ್ತು ವಿವೇಕಾನಂದ ಸ್ಮಾರಕ ಇಲ್ಲಿಯೇ ಹತ್ತಿರದದಲ್ಲಿರುವ ಮೌಲ್ಯಯುತ ಭೇಟಿ ತಾಣಗಳು. ದಾಖಲೆಗಳ ಪ್ರಕಾರ, ಸ್ವಾಮಿ ವಿವೇಕಾನಂದ ಬೃಹತ್ ಹಿಮಾಲಯಕ್ಕೆ ಹೋಗುವಾಗ ದಾರಿಯಲ್ಲಿ ಕೆಲ ಕಾಲ ಇಲ್ಲಿ ತಂಗಿದ್ದರು ಎಂದು ಹೇಳಲಾಗಿದೆ.


Click it and Unblock the Notifications