ಸಂಗಮ, ಇದು ಸಂಸ್ಕೃತದ ಪದ. ಹೆಸರೇ ಸೂಚಿಸುವಂತೆ ಮೂರು ಪವಿತ್ರ ನದಿಗಳು ಬಂದು ಸೇರುವ ಸ್ಥಳ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಮಿಲನಕ್ಕೆ ತ್ರಿವೇಣಿ ಸಂಗಮ ಎಂದು ಕರೆಯುತ್ತಾರೆ. ಸರಸ್ವತಿ ನದಿ ಈ ನಿರ್ದಿಷ್ಟ ಸ್ಥಳದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆ ಎಂದು ಜನರು ಹೇಳುತ್ತಾರೆ. ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಸ್ಥಳವನ್ನು ಹಿಂದೂಗಳು ಮತ್ತು ಅರ್ಚಕರು ಪವಿತ್ರ ಕ್ಷೇತ್ರವೆಂದು ಪರಿಗಣಿಸಿದ್ದಾರೆ. ಈ ತ್ರಿವೇಣಿ ಸಂಗಮದಲ್ಲಿ ಒಂದು ಬಾರಿ ಮುಳುಗಿ ಎದ್ದರೆ ಮನುಷ್ಯ ತಾನು ಮಾಡಿದ ಎಲ್ಲ ಪಾಪಗಳನ್ನು ಕಳೆದುಕೊಂಡು ಮೋಕ್ಷ ಪಡೆದುಕೊಳ್ಳುತ್ತಾನೆ ಎಂದು ನಂಬಿದ್ದಾರೆ.
ಇಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳಕ್ಕೆ ಪ್ರಸಿದ್ಧಿಯಾಗಿದೆ. ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳವೂ ನಡೆಯುತ್ತದೆ. ವರ್ಷಕ್ಕೊಮ್ಮೆ ಜನವರಿ ತಿಂಗಳಲ್ಲಿ ಮಾಘ ಮೇಳವು ಜರುಗುತ್ತದೆ. ಭಕ್ತರು ನಡುಗುವ ಚಳಿಯಲ್ಲೇ ಪವಿತ್ರ ಸಂಗಮದಲ್ಲಿ ಮುಳುಗೇಳುತ್ತಾರೆ. 1948ರಲ್ಲಿ ಮಹಾತ್ಮಾ ಗಾಂಧಿ ಸೇರಿದಂತೆ ಹಲವಾರು ರಾಷ್ಟ್ರೀಯ ಮುಖಂಡರ ಅಸ್ತಿಯನ್ನು ಈ ಪವಿತ್ರ ಸಂಗಮದಲ್ಲಿ ವಿಸರ್ಜಿಸಲಾಗಿದೆ.


Click it and Unblock the Notifications