ಸರ್ ಸೈಯದ್‍ರವರು ಒಬ್ಬ ಮಹಾನ್ ಮುಸ್ಲಿಂ ದಾರ್ಶನಿಕ. ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವರ ಕೊಡುಗೆ ಅಪಾರ. ಈಗಿನ ಅಕಾಡೆಮಿಯ ಕಟ್ಟಡವು ಅವರ ತಂದೆಯ ಮನೆಯಾಗಿತ್ತು. ಮೊದಲಿಗೆ ಇದೊಂದು ಮಿಲಿಟರಿ ಮೆಸ್ ಆಗಿತ್ತು ನಂತರ ಇದನ್ನು ಅವರ ನೆನಪಿಗಾಗಿ ಅಕಾಡೆಮಿಯಾಗಿ ಪರಿವರ್ತಿಸಲಾಯಿತು.
ಈ ಕಟ್ಟಡದಲ್ಲಿನ ಸಂಗ್ರಹಾಲಯದಲ್ಲಿ ಸರ್ ಸೈಯದರಿಗೆ ಸೇರಿದ ವಸ್ತುಗಳಿವೆ. ಈ ಸಂಗ್ರಹಾಲಯದಲ್ಲಿ ವಿವಿಧ ವಿಭಾಗಗಳಿವೆ. ಇದರಲ್ಲಿನ ಒಂದು ಭಾಗ ಸರ್ ಸೈಯದರ ಬದುಕು ಮತ್ತು ಭೋದನೆಗಳಿಗೆ ಮತ್ತೊಂದು ಭಾಗ ಅವರು ಸ್ಥಾಪಿಸಿದ ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಇತಿಹಾಸಕ್ಕೆ ಸಂಬಂಧಿಸಿದೆ.


Click it and Unblock the Notifications