Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ರೀಕ್

ರೀಕ್, ಐಜಾಲ್

1

ಐಜಾಲ್ ನ ಪಶ್ಚಿಮ ಭಾಗದಿಂದ 10 ಕಿ.ಮೀ. ದೂರದಲ್ಲಿ ರಿಕ್ ಎಂಬ ಹಳ್ಳಿಯಿದೆ. ಇದು ಬಹಳ ಜನಪ್ರಿಯ ಪ್ರವಾಸಿ ತಾಣವಾಗಿದೆ. ಹಳ್ಳಿಯ ಪೂರ್ವ ಭಾಗಕ್ಕೆ ಅನೇಕ ಬೃಹತ್ತಾದ ಬಂಡೆಗಲ್ಲುಗಳು, ಗುಹೆಗಳು, ಸಹಜವಾದ ಅರಣ್ಯ ಪ್ರದೇಶ ಇವೆ. ಈ ಎಲ್ಲವನ್ನು ಮಿಜೋ ನಾಯಕರ ಕಾಲದಿಂದಲೂ ರಕ್ಷಿಸಲಾಗಿದೆ.

ಮಿಜೋರಾಮ್ ಪ್ರವಾಸೋದ್ಯಮ ಇಲಾಖೆ ವಿಭಿನ್ನ ಬಗೆಯ ಸಾಂಪ್ರದಾಯಿಕ ಜೋಪಡಿಗಳನ್ನು ಸೃಷ್ಟಿಸಿ ಅವುಗಳನ್ನು ನಿರ್ವಹಿಸಿಕೊಂಡು ಬಂದಿದೆ. ಒಂದೊಂದು ಜೋಪಡಿಯು ವಿವಿಧ ಬಗೆಯ ಮಿಜೋ ಬುಡಕಟ್ಟು ಜನಾಂಗವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಮಿಜೋ ನಾಯಕನ ಮನೆಯೂ ಇದೆ. ಇದರ ಜೊತೆಗೆ ಬ್ರಹ್ಮಚಾರಿಯ ಮಲಗುವ ಶಾಲೆ ಅಥವಾ ಶಯನ ಮಂದಿರ ಮತ್ತು ವಿಧವೆಯರ ಶಯನ ಮಂದಿರವೂ ಇದೆ. ಇವೆಲ್ಲವೂ ಮಿಜೋಗಳ ವೈಭವದ, ರೋಮಾಂಚಕ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ.

ವಾರ್ಷಿಕವಾಗಿ ಆಚರಿಸುವ ಆಂತುರಿಯಮ್ ಹಬ್ಬವನ್ನು ರೀಕ್ ನಲ್ಲಿ ಆಚರಿಸಲಾಗುತ್ತದೆ. ಹೂವನ್ನು ಬೆಳೆಯಲು ಮತ್ತು ಮಾರಾಟ ಮಾಡಲು ಪ್ರೋತ್ಸಾಹಪೂರ್ವಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದರಿಂದ ಸಾಕಷ್ಟು ಪ್ರವಾಸಿಗರು ಆಕರ್ಷಿತರಾಗಿ ಮಿಜೋರಾಮ್ ನ ನಿಸರ್ಗದತ್ತ ಸೌಂದರ್ಯವನ್ನು ಸವಿಯಲು ಪ್ರವಾಸ ಕೈಗೊಳ್ಳುತ್ತಾರೆ ಎಂಬ ಉದ್ದೇಶ. ವಿವಿಧ ಜನಾಂಗದ ಸಂಸ್ಕೃತಿ ಸಾರುವ ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ ಪ್ರದರ್ಶನ, ಸಂಗೀತ ಕಾರ್ಯಕ್ರಮ, ಆಟಗಳು, ಫ್ಯಾಷನ್ ಶೋಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ.

ರೀಕ್ ನಲ್ಲಿರುವ ಅರಣ್ಯ ಪ್ರದೇಶ ಪಕ್ಷಿ ಪ್ರೇಮಿಗಳಿಗೆ ಒಂದು ದೊಡ್ಡ ಆಕರ್ಷಣೆ. ಪೆರೆಗ್ರೈನ್ ಫಾಲ್ಕನ್ ನಂತಹ ಅನೇಕ ಅಪರೂಪದ ವಿವಿಧ ಜಾತಿಯ ಪಕ್ಷಿಗಳು ಈ ಬೆಟ್ಟದಲ್ಲಿ ನೋಡಲು ಸಿಗುತ್ತವೆ. ಇಂತಹ ಸೌಂದರ್ಯವನ್ನು ನೋಡುವುದು, ಸಂತೋಷಪಡುವುದರ ಜೊತೆಗೆ ಬೆಟ್ಟಕ್ಕೆ ಚಾರಣವನ್ನು ಕೈಗೊಂಡು ಪ್ರಕೃತಿಯ ಒಂದು ಭಾಗವಾಗಬಹುದು.

ಐಜಾಲ್ ನಿಂದ ಪ್ರವಾಸಿಗರ ವಾಹನ ಅಥವಾ ಟ್ಯಾಕ್ಸಿಯ ಮೂಲಕ ಈ ರೀಕ್ ಪರ್ವತವನ್ನು ತಲುಪಬಹುದು. ಬೆಟ್ಟಗಳ ಮೇಲೆ ಒಂದು ತಾಸಿನ ಪ್ರಯಾಣ ಸಾಂಸ್ಕೃತಿಕವಾಗಿ ಶ್ರೀಮಂತವಾದ ಹಳ್ಳಿಗೆ ಕರೆದೊಯ್ಯುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue