ಕಲ್ಸುಬಾಯಿ ಹರಿಶ್ಚಂದ್ರಘಾಟ ವನ್ಯಜೀವಿಗಳ ಅಭಯಾರಣ್ಯವು ಸಹ್ಯಾದ್ರಿ ಬೆಟ್ಟಗಳಿಂದ ಸುತ್ತುವರೆದಿವೆ. ಇದು ಅಹ್ಮದ್ನಗರ್ ಜಿಲ್ಲೆಯ ಅಕೊಲೆ ಟೆಹ್ಸಿಲ್ನಲ್ಲಿ ನೆಲೆಗೊಂಡಿದೆ.
ಈ ಅಭಯಾರಣ್ಯವು ಪ್ರಾಣಿ ಹಾಗು ಸಸ್ಯಗಳ ಅಸಂಖ್ಯ ಪ್ರಭೇಧಗಳಿಂದ ತುಂಬಿದ್ದು, ಮರಗಳು ಮತ್ತು ಸಸ್ಯರಾಶಿಗಳಲ್ಲಿ ಚಂದವ, ಬೆಹೆಡ, ಅವಲಿ, ಗುಲ್ಚವಿ, ಖರ್ವೆಲ್, ಸಿರಸ್, ಆಶಿಂದ್, ಪರ್ಜಂಭುಲ್, ಹಿರದ ಮತ್ತು ಲೊಖಂಡಿ ಇವೇ ಮೊದಲಾದವು ಸೇರಿವೆ. ವನ್ಯಜೀವಿ ಪ್ರಿಯರು ಬಾರ್ಕಿಂಗ್ ಜಿಂಕೆ, ಪಾಮ್ ಸಿವೆಟ್, ಭಾರತೀಯ ದೈತ್ಯ ಅಳಿಲು, ನರಿ, ಕತ್ತೆಕಿರುಬ, ಮುಂಗುಸಿ, ಕಾಡು ಬೆಕ್ಕುಗಳಂತಹ ಅನೇಕ ಸಸ್ತನಿಗಳು ಮತ್ತು ಹಕ್ಕಿಗಳನ್ನು ಕಂಡು ಆನಂದಿಸಬಹುದು.
ಕಲಸುಬಾಯಿ ಶಿಖರವೂ ಇಲ್ಲೇ ಕಂಡುಬರುತ್ತದೆ. ಇದು ಸುಮಾರು 1,650 ಮೀಟರ್ ಎತ್ತರದಲ್ಲಿದ್ದು ಪಶ್ಚಿಮ ಘಟ್ಟಗಳ ಅತ್ಯುನ್ನತ ಶಿಖರಗಳಲ್ಲಿ ಇದೂ ಒಂದಾಗಿದೆ.


Click it and Unblock the Notifications