Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಸರ್ದಾರ್ ಪಟೇಲ್ ವಸ್ತು ಸಂಗ್ರಹಾಲಯ

ಸರ್ದಾರ್ ಪಟೇಲ್ ವಸ್ತು ಸಂಗ್ರಹಾಲಯ, ಅಹಮದಾಬಾದ್

5

ಶಾಹಿಬಾಗ್‍ನಲ್ಲಿರುವ ಈ ರಾಷ್ಟ್ರೀಯ ವಸ್ತು ಸಂಗ್ರಹಾಲಯವು 1618 ರಿಂದ 1622ರ ಅವಧಿಯಲ್ಲಿ  ಶಹ ಜಹಾನ್‍ನಿಂದ ನಿರ್ಮಿತವಾದ ಮೋತಿ ಶಾಹಿ ಮಹಲ್ ಎಂಬ ಕಟ್ಟಡದಲ್ಲಿ ನೆಲೆಗೊಂಡಿದೆ. ಈ ಅರಮನೆಯು ಗುಜರಾತಿನ ರಾಜ್ಯಪಾಲರ ನಿವಾಸವಾಗಿ ಕಾರ್ಯ ನಿರ್ವಹಿಸುತ್ತಿದೆ. 1980ರಲ್ಲಿ ಇದರ ನೆಲಮಹಡಿಯನ್ನು ಸರ್ದಾರ್ ವಲ್ಲಭ ಭಾಯ್ ಪಟೇಲರ ಗೌರವಾರ್ಥವಾಗಿ ಪರಿವರ್ತಿಸಲಾಯಿತು. ಇಲ್ಲಿ ಪಟೇಲರಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು, ವೈಯುಕ್ತಿಕ ವಸ್ತುಗಳನ್ನು, ದಿನಪತ್ರಿಕೆಗಳ ಅಂಕಣಗಳನ್ನು, ಕಾರ್ಟೂನ್‍ಗಳನ್ನು ( ವ್ಯಂಗ್ಯ ಚಿತ್ರಗಳನ್ನು), ವ್ಯಕ್ತಿ ಚಿತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ.  

ಈ ವಸ್ತು ಸಂಗ್ರಹಾಲಯ ಮುಖ್ಯ ದ್ವಾರದಲ್ಲಿ  ಸರ್ದಾರ್ ಪಟೇಲರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇಲ್ಲಿನ ಒಂದು ಕೋಣೆಯನ್ನು ರವೀಂದ್ರನಾಥ್ ಟಾಗೂರರಿಗೆ ಸಮರ್ಪಿಸಲಾಗಿದೆ. ಅವರು ಹದಿನೇಳು ವರ್ಷದವರಾಗಿದ್ದಾಗ ಇಲ್ಲಿ ತಂಗಿದ್ದರಂತೆ. ಆಗ ಅವರು "ಖುದಿತೊ ಪಾಶನ್"( ಹಸಿದ ಕಲ್ಲುಗಳು) ಎಂಬ ಕತೆಯನ್ನು ಬರೆದಿದ್ದರಂತೆ. ಈ ಕೋಣೆಯಲ್ಲಿ ಟಾಗೂರರ ಪ್ರತಿಮೆ, ವ್ಯಕ್ತಿ ಚಿತ್ರ ಮತ್ತು ಬರವಣಿಗೆಗಳನ್ನು ಸಂಗ್ರಹಿಸಿ ಇಡಲಾಗಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed