Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಝೂಲ್ತಾ ಮಿನಾರ

ಝೂಲ್ತಾ ಮಿನಾರ, ಅಹಮದಾಬಾದ್

1

ಝೂಲ್ತಾ ಮಿನಾರವು ಅಲುಗಾಡುವ ಎರಡು ಮಿನಾರುಗಳಾಗಿವೆ. ಇದರಲ್ಲಿ ಒಂದು ಸಾರಂಗ್‍ಪುರ್ ದರ್ವಾಜಾದ ಎದುರುಗಡೆಯಿರುವ ಸಿಡಿ ಬಷಿರ್ ಮಸೀದಿಯಲ್ಲಿ ನೆಲೆಗೊಂಡಿದ್ದರೆ, ಮತ್ತೊಂದು ಅಹಮದಾಬಾದ್‍ ರೈಲು ನಿಲ್ದಾಣದ ಎದುರುಗಡೆಯಿರುವ ರಾಜ್ ಬಿಬಿ ಮಸೀದಿಯಲ್ಲಿ ನೆಲೆಗೊಂಡಿದೆ. ಈ ಮಿನಾರುಗಳ ವೈಶಿಷ್ಟ್ಯವೇನೆಂದರೆ ಈ ಮಿನಾರುಗಳಲ್ಲಿ ಒಂದನ್ನು ಅಲುಗಾಡಿಸಿದರೆ, ಮತ್ತೊಂದು ಸಹ ಕೆಲಹೊತ್ತಿನಲ್ಲಿಯೇ ಅಲುಗಾಡುತ್ತದೆ.

ಇವುಗಳನ್ನು ಸಂಪರ್ಕಿಸುವ ಒಂದು ವ್ಯವಸ್ಥೆಯನ್ನು ಇಂದಿಗು ಯಾವುದೇ ಅಡಚಣೆಯಿಲ್ಲದೆ ಇಡಲಾಗಿದೆ. ಸಿಡಿ ಬಷೀರ್ ಮಸೀದಿಯಲ್ಲಿರುವ ಮಿನಾರು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಅದರಲ್ಲಿರುವ ಮೊಗಸಾಲೆಗಳನ್ನು ಸುಂದರವಾದ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ಇದನ್ನು ಸುಲ್ತಾನ್ ಅಹಮದ್ ಶಾರವರ ಸೇವಕನಾದ ಸಿಡಿ ಬಷೀರ್ ರವರು ನಿರ್ಮಿಸಿದರು  ಎಂದು ನಂಬಲಾಗಿದೆ.

ಈ ಮಿನಾರುಗಳು ಹೇಗೆ ಅಲುಗಾಡುತ್ತವೆ ಎಂಬ ಅಂಶವು ಇಂದಿಗು ನಿಗೂಢವಾಗಿದೆ. ಇದನ್ನು ತಿಳಿಯುವ ಸಲುವಾಗಿ ಬ್ರಿಟೀಷರು ನಿಲ್ದಾಣದ ಬಳಿಯಿರುವ ಕೆಲವು ಭಾಗಗಳನ್ನು ತೆಗೆದು ನೋಡಲಾಯಿತು. ಆದರೆ ಅದನ್ನು ಮತ್ತೆ ಜೋಡಿಸಲು ಅವರಿಂದ ಸಾಧ್ಯವಾಗಲಿಲ್ಲ. ಪ್ರಸ್ತುತ ಈ ಮಿನಾರುಗಳನ್ನು ಏರಲು ಯಾರಿಗು ಬಿಡುವುದಿಲ್ಲ. ಆದರು ಇವು ಪ್ರವಾಸಿಗರ ಪಾಲಿಗೆ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun