Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಇತಿಬರ್ ಖಾನ್ ಸಮಾಧಿ

ಇತಿಬರ್ ಖಾನ್ ಸಮಾಧಿ, ಆಗ್ರಾ

1

ಯುವರಾಜ ಶಹ ಜಹಾನ್ ಬಲವಂತವಾಗಿ ತನ್ನ ತಂದೆ ಜಹಾಂಗೀರನ ಸಿಂಹಾಸನವನ್ನು  ಪ್ರಯತ್ನ ಮಾಡಿದನು. 1622ರಲ್ಲಿ ಈತನು ತನ್ನ ತಂದೆಯ ಮೇಲೆ ದಂಗೆಯೆದ್ದನು. ಆದರೆ ಆ ಪ್ರಯತ್ನದಲ್ಲಿ ಅವನು ಸೋಲುಂಡನು. ಆದರೂ ಕೊನೆಗೆ 1627ರಲ್ಲಿ ಜಹಾಂಗೀರ್ ಮರಣದ ನಂತರ ಶಹ ಜಹಾನ್ ಚಕ್ರವರ್ತಿಯಾದನು.

ಇತಿಬರ್ ಖಾನ್ ಎಂದರೆ ನಂಬಿಕಸ್ತ ಎಂದರ್ಥ. ಈತನು ಜಹಾಂಗೀರನ ಹರಮ್ ಅಥವಾ ರಾಜಮನೆತನದ ಹೆಂಗಸರ ಅಂತಃಪುರದ ಮೇಲಧಿಕಾರಿಯಾಗಿದ್ದನು. ಒಮ್ಮೆ 1623ರಲ್ಲಿ ಈತನು ಶಹ ಜಹಾನನ ಕೋರಿಕೆಯಂತೆ ಆಗ್ರಾವನ್ನು ಬಲವಂತವಾಗಿ ಕೊಳ್ಳೆಯೊಡೆಯಲು ನಿರಾಕರಿಸಿದನಂತೆ. ಈತನ ಪ್ರಾಮಾಣಿಕತೆ ಮತ್ತು ಸ್ವಾಮಿ ನಿಷ್ಟೆಗೆ ಮನಸೋತ ಜಹಾಂಗೀರ್ ಈತನಿಗೆ ಮುಮ್ತಾಜ್ ಖಾನ್ ಎಂಬ ಬಿರುದನ್ನು ನೀಡಿ ಸನ್ಮಾನಿಸಿದನಂತೆ.

ಅಂದು ಚಾಲ್ತಿಯಲ್ಲಿದ್ದ ಸಂಪ್ರದಾಯದಂತೆ ಇತಿಬರ್ ಖಾನ್ ತಾನು ಆಗ್ರಾದ ಉಪನಗರದಲ್ಲಿ ವಾಸವಿರುವಾಗಲೇ ತನ್ನ ಸ್ವಂತ ಗೋರಿಯನ್ನು ನಿರ್ಮಿಸಿಕೊಂಡನಂತೆ. ಈ ಗೋರಿಯು ಇಲ್ಲಿನ ದೊಡ್ಡ ಜಲಾಶಯವಾದ ಗುರು ಕಾ ತಾಲ್‍ನಲ್ಲಿ ನೆಲೆಗೊಂಡಿದೆ.

ಈ ಸಮಾಧಿಯು ಒಂದು ಮಸೀದಿ ಮತ್ತು ಸರಾಯ್ ಅನ್ನು ಒಳಗೊಂಡಿದೆ. ಈ ಸ್ಮಾರಕದ ಪ್ರಧಾನ ಭಾಗಗಳು ಇಲ್ಲಿ ರೈಲು ಹಳಿ ಮತ್ತು ರಸ್ತೆಯನ್ನು ನಿರ್ಮಿಸುವ ಕಾರ್ಯದಲ್ಲಿ ನಾಶವಾಗಿ ಹೋಗಿವೆ. ಆದರೂ ಮಸೀದಿ ಮತ್ತು ಸಮಾಧಿ ಇಂದು ಉಳಿದುಕೊಂಡಿವೆ.

ಈ ಸಮಾಧಿಯನ್ನು ಬಾರಾ ಕಂಬ ಎಂದು ಸಹ ಕರೆಯುತ್ತಾರೆ. ಏಕೆಂದರೆ ಈ ಸಮಾಧಿಯ ಮೇಲಿನ ಉಪ್ಪರಿಗೆಯಲ್ಲಿ ಹನ್ನೆರಡು ಸ್ತಂಭಗಳನ್ನು ನಾವು ಕಾಣಬಹುದು. ಇತಿಬರ್ ಖಾನ್‍ನ ಗೋರಿಯನ್ನು ಚಚ್ಚೌಕವಾದ ಆಕಾರದಲ್ಲಿ ನಿರ್ಮಿಸಲಾಗಿದೆ. . ಒಂದು ಮರಳುಗಲ್ಲಿನ ಪ್ರವೇಶ ದ್ವಾರದ ಮೂಲಕ ನಾವು ಇಲ್ಲಿಗೆ ತಲುಪಬಹುದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun