Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಗುರು ಕಾ ತಾಲ್

ಗುರು ಕಾ ತಾಲ್, ಆಗ್ರಾ

2

ಗುರು ಕಾ ತಾಲ್ ಎಂಬುದು ಆಗ್ರಾದಲ್ಲಿರುವ ಸಿಕ್ ಗುರುದ್ವಾರವಾಗಿದೆ. ಇದು ಆಗ್ರಾದ ಹೊರಭಾಗದಲ್ಲಿರುವ ಬಲುಚ್‍ಪುರ ರೈಲು ನಿಲ್ದಾಣ ಮತ್ತು ಸಿಖಂದರಗೆ ಸಮೀಪದಲ್ಲಿ ನೆಲೆಗೊಂಡಿದೆ. ಸಂತ್ ಬಾಬಾ ಸಾಧು ಸಿಂಗ್‍ಜೀ ಮೌನಿಯವರ ನೇತೃತ್ವದಲ್ಲಿ 1970ರಲ್ಲಿ ನಿರ್ಮಾಣಗೊಂಡ ಇದನ್ನು ಸಿಖ್ ಸಮುದಾಯದವರ ಅಭ್ಯುದಯಕ್ಕಾಗಿ ಸಮರ್ಪಿಸಲಾಗಿದೆ.

ಇಲ್ಲಿನ ಬೃಂದಾವನವನ್ನು ಸಿಖ್ಖರ ಒಂಬತ್ತನೆಯ ಗುರು ಶ್ರೀ ಗುರು ತೇಜ್ ಬಹದ್ದೂರ್ ಜೀಯವರ ಸಂಸ್ಮರಣಾರ್ಥವಾಗಿ ನಿರ್ಮಿಸಿಲಾಗಿದೆ. ಇದು ಒಂದು ತಾಲ್ ಅನ್ನು ಒಳಗೊಂಡಿದೆ. ತಾಲ್ ಎಂದರೆ ಜಲಾಶಯವೆಂದರ್ಥ. ಈ ಸ್ಥಳವು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ ಸಿಖ್ಖರ್ ಗುರು ತಮ್ಮ ಆಯುಧಗಳನ್ನು ತ್ಯಜಿಸಿ, ಔರಂಗಜೇಬನ ಸೈನ್ಯಕ್ಕೆ ತನ್ನನ್ನೆ ತಾನು ಶರಣಾಗಿಸಿಕೊಂಡರೆಂದು ಹೇಳುತ್ತಾರೆ.

ಮೂಲತಃ ಈ ತಾಲ್‍ನಲ್ಲಿ ಹನ್ನೆರಡು ಗೋಪುರಗಳಿದ್ದವು. ಆದರೆ ಕಾಲದ ಹೊಡೆತಕ್ಕೆ ಸಿಲುಕಿ ಪ್ರಸ್ತುತ ಎಂಟು ಮಾತ್ರ ಉಳಿದಿವೆ. ಕೆಂಪು ಮರಳುಗಲ್ಲಿನಿಂದ ನಿರ್ಮಾಣಗೊಂಡಿರುವ  ಇದರಲ್ಲಿ ಸುಂದರವಾದ ಕೆತ್ತನೆಗಳ ಅಲಂಕಾರವನ್ನು ನಾವು ಗಮನಿಸಬಹುದು. ಈ ಗುರುದ್ವಾರವು ಮೊಘಲ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇದರ ಮುಂಭಾಗವು ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಯನ್ನು ಹೋಲುತ್ತದೆ. ಈ ಗುರುದ್ವಾರಕ್ಕೆ ಕೇವಲ ಆಗ್ರಾದಿಂದಷ್ಟೇ ಅಲ್ಲ ದೂರ ದೂರದ ಊರುಗಳಿಂದ ಸಹ ಇಲ್ಲಿಗೆ ಭಕ್ತಾಧಿಗಳು ಪ್ರತಿ ವರ್ಷ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu