Search
  • Follow NativePlanet
Share
ಮುಖಪುಟ » ಸ್ಥಳಗಳು » ಅಭನೇರಿ » ಆಕರ್ಷಣೆಗಳು » ಚಾಂದ್ ಬಾವರಿ

ಚಾಂದ್ ಬಾವರಿ, ಅಭನೇರಿ

4

ರಾಜಸ್ಥಾನದ ಅಭಾನೇರಿಯಲ್ಲಿರುವ ಚಾಂದ್ ಬಾವರಿ ಭಾರತದಲ್ಲಿ ಕಾಣಸಿಗುವ ಅತಿ ಸುಂದರ ಮೆಟ್ಟಿಲು ಬಾವಿಗಳಲ್ಲಿ ಒಂದಾಗಿದೆ. 9 ನೇ ಶತಮಾನದಲ್ಲಿ ನಿರ್ಮಿತವಾದ ಈ ಬಾವಿ, ಅಂದಿನ ಈ ಪ್ರದೇಶದ ಆಡಳಿತಗಾರನಾದ ರಾಜಾ ಚಾಂದ್ ನಿರ್ಮಿಸಿದ್ದನು. ಅಂದಿನ ಕಾಲದಲ್ಲಿ ಈ ಬಾವರಿಗಳು ಇಲ್ಲವೆ ಮೆಟ್ಟಿಲು ಬಾವಿಗಳು, ಬೇಸಿಗೆ ಅಥವಾ ನೀರಿನ ಅಭಾವದ ಪರಿಸ್ಥಿತಿಗಳಲ್ಲಿ ನೀರನ್ನು ಬಳಸುವ ಸದುದ್ದೇಶದಿಂದ ನಿರ್ಮಿತವಾಗಿದ್ದವು.ಚೌಕಾಕಾರದಲ್ಲಿ ನಿರ್ಮಿತವಾಗಿರುವ ಚಾಂದ್ ಬಾವರಿಯು 100 ಅಡಿ ಆಳವನ್ನು ಹೊಂದಿದ್ದು, ತನ್ನಲ್ಲಿಯ 13 ಮಹಡಿಗಳಲ್ಲಿ ಒಟ್ಟು 3500 ಕಿರಿದಾದ ಮೆಟ್ಟಿಲುಗಳನ್ನು ಹೊಂದಿದೆ. ಬಾವಿಯ ಸುತ್ತ ಮೂರು ಭಾಗಗಳಲ್ಲಿ ಮೆಟ್ಟಿಲುಗಳಿದ್ದು, ನಾಲ್ಕನೇ ಭಾಗ ಒಂದರ ಮೇಲೊಂದರಂತೆ ಮಂಟಪಗಳನ್ನು ಹೊಂದಿದೆ. ಈ ಮಂಟಪಗಳ ಭಾಗದಲ್ಲಿ ಸುಂದರವಾದ ಧಾರ್ಮಿಕ ಕೆತ್ತನೆಗಳಿರುವುದನ್ನು ಗಮನಿಸಬಹುದಾಗಿದೆ. ಪ್ರತ್ಯೇಕವಾದ ಒಂದು ಹಂತವಿದ್ದು ಅಲ್ಲಿ ರಾಜ ರಾಣಿಗೆ ಮೀಸಲಾದ ಕೊಠಡಿಗಳು, ಕಲಾ ಪ್ರದರ್ಶನಕ್ಕೆಂದು ಜಾಗವಿದೆ.ಚಾಂದ್ ಬಾವರಿಯು ಇಂದು ಭಾರತೀಯ ಪುರಾತತ್ವ ಇಲಾಖೆಯಡಿಯಲ್ಲಿದೆ. ಈ ಸ್ಮಾರಕಕ್ಕೆ ಭೇಟಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ. ಈ ಸ್ಥಳವನ್ನು ಹಾಲಿವುಡ್ ಚಿತ್ರಗಳಾದ 'ದಿ ಫಾಲ್' ಮತ್ತು 'ದಿ ಡಾರ್ಕ್ ನೈಟ್ ರೈಸಸ್' ನಲ್ಲಿ ತೋರಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed