Search
  • Follow NativePlanet
Share
ಮುಖಪುಟ » ಸ್ಥಳಗಳು » ಅಭನೇರಿ » ಹವಾಮಾನ

ಅಭನೇರಿ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಅಭಾನೇರಿಗೆ ಭೇಟಿ ನೀಡಲು ಸೂಕ್ತವಾಗಿದೆ, ಏಕೆಂದರೆ ಈ ಸಮಯದಲ್ಲಿ ವಾತಾವರಣವು ಹಿತಕರವಾಗಿದ್ದು ಅನುಕೂಲಕರವಾಗಿರುತ್ತದೆ. ಇದಾಗ್ಯು, ಮಳೆಗಾಲದಲ್ಲಿ ಪ್ರಾಕೃತಿಕ ಸೊಬಗನ್ನು ಸವಿಯುತ್ತಾ ಸುತ್ತಾಡುವ ಬಯಕೆ ಇದ್ದಲ್ಲಿ ಜೂನ್ ನಿಂದ ಸೆಪ್ಟಂಬರ್ ಮಧ್ಯದ ಅವಧಿಯು ಪ್ರಶಸ್ತವಾಗಿರುತ್ತದೆ.

ಬೇಸಿಗೆಗಾಲ

 (ಎಪ್ರಿಲ್ ನಿಂದ ಜೂನ್): ಬೆಸಿಗೆಯ ತಾಪಮಾನವು ಸಾಮಾನ್ಯವಾಗಿ ಗರಿಷ್ಟ 45° C ಇದ್ದು ಕನಿಷ್ಟ 25.8° C ಇರುತ್ತದೆ. ಮೇ ವರ್ಷದ ಉಷ್ಣಮಯ ತಿಂಗಳಾಗಿದ್ದು, ಪ್ರವಾಸಿಗರು ಬೇಸಿಗೆಗಾಲದಲ್ಲಿ ಭೇಟಿ ನೀಡದೆ ಇದ್ದರೆ ಒಳಿತು.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಜೂನ್ ತಿಂಗಳಿನಲ್ಲಿ ಮಳೆಯು ವಿರಳವಾಗಿದ್ದು, ತದನಂತರ ಉತ್ತಮ ಎನ್ನಬಹುದಾದ ಮಳೆಯನ್ನು ಈ ಪ್ರದೇಶ ಪಡೆಯುತ್ತದೆ. ಅಗಸ್ಟ್ ವರ್ಷದ ಹೆಚ್ಚು ಮಳೆ ಪಡೆಯುವ ತಿಂಗಳಾಗಿದ್ದು, ಈ ಸಮಯದಲ್ಲಿ ಪ್ರಾಕೃತಿಕ ಸೊಬಗು ಸೊಗಸಾಗಿರುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರುವರಿ): ಈ ಪ್ರದೇಶವು ಅಹ್ಲಾದಕರವಾದ ಚಳಿಗಾಲವನ್ನು ಹೊಂದಿದ್ದು ತಾಪಮಾನವು ಸಾಮಾನ್ಯವಾಗಿ  ಗರಿಷ್ಟ 22 °C ಇದ್ದು ಕನಿಷ್ಟ 8.3 °C ಇರುತ್ತದೆ.