ಅನ್ನನ್ಡೇಲ್ ಎಂಬುದು ಒಂದು ಸುಂದರವಾದ ವಿಹಾರ ತಾಣವಾಗಿದ್ದು, ಹಚ್ಚ ಹಸಿರಾದ ದೇವದಾರು ಕಾಡಿನ ನಡುವೆ ನೆಲೆಗೊಂಡಿದೆ. ಈ ಬಯಲನ್ನು ಬ್ರಿಟೀಷರ ಕಾಲದಲ್ಲಿ ರೇಸಿಗೆ, ಪೋಲೊ ಮತ್ತು ಕ್ರಿಕೇಟ್ ಆಡಲು ಬಳಸಲಾಗುತ್ತಿತ್ತು. ವಿಹಾರಿಗಳ ಸ್ವರ್ಗವೆಂದು ಪರಿಗಣಿಸಲಾಗಿರುವ ಈ ಸ್ಥಳವು ಸಮುದ್ರ ಮಟ್ಟದಿಂದ 6227 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದು, ಪ್ರವಾಸಿಗರಿಗೆ ಸಮ್ಮೋಹನಗೊಳಿಸುವಂತಹ ದೃಶ್ಯಗಳನ್ನು ನೋಡುವ ಭಾಗ್ಯವನ್ನು ಒದಗಿಸುತ್ತದೆ.