Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಪುಟಾಣಿ ರೈಲು ಪ್ರಯಾಣ

ಪುಟಾಣಿ ರೈಲು ಪ್ರಯಾಣ, ಶಿಮ್ಲಾ

3

ಪುಟಾಣಿ ರೈಲು ಪ್ರಯಾಣವು ಶಿಮ್ಲಾದ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದಾಗಿದೆ. ಇದನ್ನು ಲಾರ್ಡ್ ಕರ್ಜನ್ 1903ರಲ್ಲಿ ಪ್ರಾರಂಭಿಸಿದರು. ಈ ಪ್ರಸಿದ್ಧ ರೈಲು ಪ್ರಯಾಣದ ಮಾರ್ಗ ಮತ್ತು ರೈಲನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗಿದೆ. ಈ ಪ್ರಯಾಣವು ಕಲ್ಕದಿಂದ ಶಿಮ್ಲಾದವರೆಗಿನ 96 ಕಿ.ಮೀ ದೂರವನ್ನು ಒಳಗೊಂಡಿದೆ.

ಇದು ಸುಮಾರು 5 ಗಂಟೆಗಳ ಪ್ರಯಾಣವನ್ನು ಹೊಂದಿದೆ. ಈ ಪ್ರಯಾಣವು ನಯನ ಮನೋಹರವಾದ 103 ಸುರಂಗಗಳು ಮತ್ತು 800 ಸೇತುವೆಗಳನ್ನು ಹಾಗು ನಿಲುಗಡೆಗಳನ್ನು ಹಾದು ಹೋಗುತ್ತದೆ. ಪರ್ವತಗಳು,  ಹಚ್ಚ ಹಸಿರಾದ ಕಣಿವೆಗಳು ಮತ್ತು ಪೈನ್, ಪೀರ್ ಮತ್ತು ದೇವದಾರು ಕಾಡುಗಳ ನಡುವೆ ಹಾದು ಹೋಗುವ ರೈಲು ನಿಮ್ಮ ಪ್ರಯಾಣವನ್ನು ಮರೆಯಲಾಗದ ಅನುಭವವನ್ನಾಗಿಸುತ್ತದೆ. ಈ ರೈಲು ಪರ್ವತಗಳ ಪ್ರದೇಶದಲ್ಲಿ ಚಲಿಸುವಾಗ ಅಲ್ಲಲ್ಲಿ ನಿಂತು ಪ್ರವಾಸಿಗರಿಗೆ ಅದ್ಭುತವಾದ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಈ ರೈಲಿನ ವೇಗವು ತುಂಬಾ ನಿಧಾನವಾಗಿರುತ್ತದೆ.

ಹಾಗಾಗಿ ನೀವು ಯಾವುದೇ ಅಡ್ಡಿಯಿಲ್ಲದೆ ಇಳಿದು ಸುಲಭವಾಗಿ ಹತ್ತಬಹುದು. ಈ ರೈಲು ಡೀಲಕ್ಸ್ ( ಡೀಲಕ್ಸ್ ಮೋಟಾರ್ ರೈಲ್ ಕಾರ್ ಮತ್ತು ಶಿವಾಲಿಕ್ ಡೀಲಕ್ಸ್ ಎಕ್ಸ್ ಪ್ರೆಸ್), ಸೂಪರ್ ಡೀಲಕ್ಸ್ ( ಶಿವಾಲಿಕ್ ಕ್ವೀನ್ ಟೂರಿಸ್ಟ್ ಕೋಚ್, ಶಿವಾಲಿಕ್ ಪ್ಯಾಲೆಸ್ ಟೂರಿಸ್ಟ್ ಕೋಚ್) ,ಮತ್ತು ನಿರಂತರ ಪ್ರಯಾಣಿಕರ ರೈಲುಗಳು ( ಕಲ್ಕ ಶಿಮ್ಲಾ ಎಕ್ಸ್ ಪ್ರೆಸ್ ಮತ್ತು ಹಿಮಾಲಯನ್ ಕ್ವೀನ್ ) ಕಲ್ಕದಿಂದ ಬೆಳಗ್ಗೆ ಶಿಮ್ಲಾದಿಂದ ಮಧ್ಯಾಹ್ನ ಹೊರಡುತ್ತವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat