ರಿಡ್ಜ್ (ಪ್ರಪಾತ) ಶಿಮ್ಲಾದಲ್ಲಿನ ಹೃದಯಭಾಗದಲ್ಲಿ ನೆಲೆಗೊಂಡಿದೆ. ಇದು ಪ್ರವಾಸಿಗರಿಗೆ ಮಂತ್ರ ಮುಗ್ಧಗೊಳಿಸುವಂತಹ ಪರ್ವತ ಶ್ರೇಣಿಗಳ ನೋಟವನ್ನು ಒದಗಿಸುತ್ತದೆ. ಇದೊಂದು ವಿಶಾಲವಾದ ಬಯಲಾಗಿದ್ದು, ಪಶ್ಚಿಮಕ್ಕೆ ಸ್ಕ್ಯಾಂಡಲ್ ಪಾಯಿಂಟ್ ಮತ್ತು ಪೂರ್ವಕ್ಕೆ ಲಕ್ಕರ್ ಬಜಾರ್ ಅನ್ನು ಹೊಂದಿದೆ. ಇಲ್ಲಿ ಪ್ರವಾಸಿಗರು ಅತ್ಯುತ್ತಮವಾದ ಮರದ ಕಲಾಕೃತಿಗಳನ್ನು ಕೊಳ್ಳಬಹುದು. ಈ ಸ್ಥಳದಲ್ಲಿ ಒಂದು ದೊಡ್ಡ ಜಲಾಶಯವಿದ್ದು, ಅದು ಶಿಮ್ಲಾಗೆ ನೀರಿನ ಅವಶ್ಯಕತೆಯನ್ನು ಪೂರೈಸುತ್ತದೆ. ಇಲ್ಲಿ ಬೇಸಿಗೆಯಲ್ಲಿ ಅಂದರೆ ಮೇ ತಿಂಗಳಿನಲ್ಲಿ ಬೇಸಿಗೆ ಉತ್ಸವವು ನಡೆಯುತ್ತದೆ. ಇದರೊಂದಿಗೆ ಹಲವಾರು ಸರ್ಕಾರಿ ಮತ್ತು ಸ್ಥಳೀಯ ಉತ್ಸವಗಳು ಹೊಸ ವರ್ಷದ ಹಿಂದಿನ ದಿನ ರಿಡ್ಜ್ ನಲ್ಲಿ ಜರುಗುತ್ತವೆ. ಈ ಸ್ಥಳವು ಪ್ರವಾಸಿಗರಿಗೆ ಧೀರ್ಘ ನಡಿಗೆ ನಡೆಯುತ್ತ ಸುತ್ತಲಿನ ಪ್ರಕೃತಿ ಸೊಬಗನ್ನು ಸವಿಯುವ ಅವಕಾಶವನ್ನು ಒದಗಿಸುತ್ತದೆ. ಒಂದು ಸುಂದರ ಚರ್ಚ್, ಗ್ರಂಥಾಲಯ ಮತ್ತು ಅಸಂಖ್ಯಾತ ಶಿಲ್ಪಗಳು ಈ ಸ್ಥಳದ ಸೊಬಗನ್ನು ಹೆಚ್ಚಿಸಿವೆ.