ಶಿಕಾರಿ ತಪ್ಪಲು ಇದಲ್ಲದೇ ಶಿಕಾರಿ ದೇವಿ ತಪ್ಪಲು ಅನ್ನುವ ಹೆಸರಿನಿಂದಲೂ ಜನಪ್ರಿಯವಾಗಿದೆ. ಸಮುದ್ರ ಮಟ್ಟದಿಂದ 11500 ಅಡಿ ಎತ್ತದದಲ್ಲಿದೆ. ಮಂಡಿ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಪ್ರದೇಶ ಜಿಲ್ಲೆಯ ಅತಿ ಎತ್ತರವಾದ ಸ್ಥಳ ಕೂಡ ಹೌದು. ಈ ತಪ್ಪಲಿನಲ್ಲಿ ಶಿಕಾರಿ ದೇವಿ ದೇಗುಲವೂ ಇದೆ. ಇದು ಇಲ್ಲಿನ ಪ್ರಮುಖ ಅಕರ್ಷಣೆ ಆಗಿದೆ.
ಪ್ರವಾಸಿಗರು ಹಾಗೂ ಭಕ್ತರು ಇಲ್ಲಿಗೆ ಟ್ರೆಕ್ಕಿಂಗ್ ಮೂಲಕವೂ ತೆರಳಬಹುದು. ಅಲ್ಲದೆ, ಬಾಹುಲ್ಲಾ ಮಾರ್ಗವಾಗಿ ರಸ್ತೆ ಸಂಪರ್ಕವೂ ಇದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಇಲ್ಲಿಗೆ ಪ್ರವೇಶ ಇರುವುದಿಲ್ಲ. ದೇವದಾರ್ ಮರಗಳಿಂದ ಆವೃತ್ತವಾದ ದಟ್ಟ ಕಾಡನ್ನು ಇದು ಒಳಗೊಂಡಿದೆ. ಇಲ್ಲಿ ಪ್ರವಾಸಿಗರು ಅಪರೂಪದ ಪಕ್ಷಿಗಳು, ಸಸ್ಯ, ಜೀವ ಸಂಕುಲಗಳನ್ನು ಕಾಣಬಹುದಾಗಿದೆ.