Search
  • Follow NativePlanet
Share

ಶೋಘಿ - ಒಂದು ಆಹ್ಲಾದಕರ ರಜಾ ತಾಣ

7

ಹಿಮಾಚಲ ಪ್ರದೇಶದ 5700 ಅಡಿ ಎತ್ತರದಲ್ಲಿರುವ ಒಂದು ಪುಟ್ಟ ಪಟ್ಟಣವೇ ಶೋಘಿ. ರಾಜ್ಯದ ಗಿರಿಧಾಮಗಳಲ್ಲೊಂದಾಗಿರುವ ಈ ಪಟ್ಟಣವು ಶಿಮ್ಲಾ ಜಿಲ್ಲೆಯಿಂದ ಕೇವಲ 13 ಕಿಮೀ ದೂರದಲ್ಲಿದೆ. ಓಕ್ ಮರಗಳು ಮತ್ತು ರೊಡೊಡೆಂಡ್ರೋನ್ಸ್ ಗಳಿಂದ ಸುತ್ತುವರಿದಿರುವ ಶೋಘಿಯು ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಹೆಸರುವಾಸಿಯಾಗಿದೆ. ಅಲ್ಲದೆ ಸ್ಥಳೀಯ ಉತ್ಪನ್ನಗಳಾದ ಹಣ್ಣಿನ ರಸಗಳು, ಜೆಲ್ಲಿಗಳು, ಸಿರಪ್ ಗಳು ಮತ್ತು ಉಪ್ಪಿನಕಾಯಿಗಳಿಗೂ ಪ್ರಸಿದ್ಧವಾಗಿದೆ.

ಶೋಘಿಯ ಇತಿಹಾಸವು, 19 ನೇ ಶತಮಾನದಷ್ಟು ಹಿಂದಿನ ಆಂಗ್ಲೋ ಗೂರ್ಖಾ ಯುದ್ಧದ ಕಾಲದಿಂದಲೂ ಬೆಳೆದು ಬಂದಿದೆ. 15 ನೇ ಮೇ 1815 ರಂದು, ಗೂರ್ಖಾಗಳು ಮಲೌನ್ ಯುದ್ಧದಲ್ಲಿ ಚೀಫ್ಟನ್ ಗಳಿಂದ ಸೋಲು ಎದುರಿಸಬೇಕಾಯಿತು. ಈ ಸೋಲಿನ ಪರಿಣಾಮವಾಗಿ ಗೂರ್ಖಾಗಳ ಆಡಳಿತದಲ್ಲಿದ್ದ  ಪ್ರದೇಶಗಳು ಅವುಗಳ ಮೂಲ ಆಡಳಿತಗಾರರು ಹಿಂತಿರುಗಿಸುವಂತಹ ಕರಾರುಳ್ಳ, ಸಂಜೌಲಿ ಒಪ್ಪಂದಕ್ಕೆ  ಬ್ರಿಟಿಷ್ ಮತ್ತು ಚೀಫ್ಟನ್ ಗಳು ಒಗ್ಗೂಡಿ ಗೂರ್ಖಾಗಳಿಂದ  ಬಲವಂತವಾಗಿ ಸಹಿಹಾಕಿಸಿಕೊಂಡರು. ತದನಂತರ, ಶಿಮ್ಲಾ ಸೇರಿದಂತೆ ಇಡೀ ಪ್ರದೇಶವನ್ನು, ತಮಗೆ ನೀಡಿದ ಸೇವೆಗಳ ಪ್ರತಿಯಾಗಿ ಬ್ರಿಟಿಷರು ಪಟಿಯಾಲದ ಮಹಾರಾಜನಿಗೆ ಕೊಡುಗೆಯಾಗಿ ನೀಡಿದರು.

ಹಲವಾರು ಪುರಾತನ ದೇವಾಲಯಗಳ ನೆಲೆಯೂ ಆಗಿದ್ದರಿಂದ ಶೋಘಿಯನ್ನು ದೇವಸ್ಥಾನಗಳ ನಗರಿ ಎಂತಲೂ ಕರೆಯುವುದುಂಟು. ಇತ್ತೀಚೆಗೆ ನವೀಕರಿಸಲ್ಪಟ್ಟ ಹನುಮಾನ್ ದೇವಾಲಯ, ಕಾಳಿ ದೇವಾಲಯ ಮತ್ತು ತಾರಾ ದೇವಿ ದೇವಾಲಯಗಳು ಸ್ಥಳೀಯ ಜನಪ್ರಿಯ ಧಾರ್ಮಿಕ ಕೇಂದ್ರಗಳಾಗಿವೆ. ಶೋಘಿಗೆ ಭೇಟಿ ನೀಡುವ ಪ್ರವಾಸಿಗರು ಇದರ ಹತ್ತಿರದಲ್ಲೇ ಇರುವ, ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಝಾಕೂ ಬೆಟ್ಟಗಳಿಗೂ  ಭೇಟಿ ನೀಡಬಹುದು.

ವಾಯು, ರೈಲು ಹಾಗು ರಸ್ತೆ ಈ ಮೂರೂ ಮಾರ್ಗಗಳಿಂದಲೂ ಶೋಘಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಶೋಘಿಯ ಹತ್ತಿರದಲ್ಲಿರುವ ದೇಶೀ ವಿಮಾನ ನಿಲ್ದಾಣವೆಂದರೆ, 33 ಕಿಮೀ ದೂರದಲ್ಲಿ ಜುಬ್ಬರ್ಹಟ್ಟಿಯಲ್ಲಿರುವ ಶಿಮ್ಲಾ ವಿಮಾನನಿಲ್ದಾಣ ಹಾಗು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (IGI) ಶೋಘಿಯ ಹತ್ತಿರದ ಅಂತಾರಾಷ್ಟ್ರೀಯ ವಾಯುನೆಲೆಯಾಗಿದೆ.

ಕಲ್ಕಾವು ಶೊಘಿಯ ಹತ್ತಿರದ ಪ್ರಮುಖ ರೈಲು ನಿಲ್ದಾಣವಾಗಿದ್ದು, ಇದು ಪ್ರಮುಖ ಭಾರತೀಯ ನಗರಗಳಿಗೆ ಒಳ್ಳೆಯ ಸಂಪರ್ಕ ಹೊಂದಿದೆ. ಪ್ರಸ್ತುತ, ಈ ಗಮ್ಯಸ್ಥಾನಕ್ಕೆ ಹಿಮಾಚಲ ಪ್ರದೇಶದ ಇತರ ನಗರಗಳಿಂದ ನಿರಂತರವಾಗಿ ಬಸ್ ಗಳು  ಲಭ್ಯವಿವೆ.

ಶೋಘಿ ಪ್ರದೇಶವು ವರ್ಷವಿಡಿ ಆಹ್ಲಾದಕರ ಹವಾಗುಣವನ್ನು ಅನುಭವಿಸುತ್ತಿದ್ದು ಪ್ರಯಾಣಿಕರು ಯಾವ ಸಮಯದಲ್ಲಾದರೂ ಈ ಸ್ಥಳಕ್ಕೆ ಭೇಟಿ ನೀಡಬಹುದು.

ಶೋಘಿ ಪ್ರಸಿದ್ಧವಾಗಿದೆ

ಶೋಘಿ ಹವಾಮಾನ

ಉತ್ತಮ ಸಮಯ ಶೋಘಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶೋಘಿ

  • ರಸ್ತೆಯ ಮೂಲಕ
    ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (HRTC) ಬಸ್ ಗಳು ಶೋಘಿಯಿಂದ ಹಿಮಾಚಲ ಪ್ರದೇಶದ ಇತರೆ ಸ್ಥಳಗಳಿಗೆ ಸಂಪರ್ಕ ಬೆಸೆದಿವೆ. ಶೋಘಿಯು ಶಿಮ್ಲಾದೊಂದಿಗೆ ಡಿಲಕ್ಸ್ ಮತ್ತು ಸಾಮಾನ್ಯ ಬಸ್ಸುಗಳ ನಿಯಮಿತ ಸಂಪರ್ಕ ಹೊಂದಿದ್ದು ಇವು ದೆಹಲಿ ಮಾರ್ಗವಾಗಿ ಚಲಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮೀಟರ್ ಗೇಜ್ ಹೊಂದಿರುವ ಶಿಮ್ಲಾ ರೈಲು ನಿಲ್ದಾಣವೇ ಶೋಘಿಗೆ ಹತ್ತಿರದ ರೈಲು ಲಿಂಕ್ ಆಗಿದ್ದು, 90 ಕಿಮೀ ದೂರದಲ್ಲಿರುವ ಕಲ್ಕಾ ಶೋಘಿಗೆ ಹತ್ತಿರದಲ್ಲಿರುವ ಪ್ರಮುಖ/ದೊಡ್ಡ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತದ ಪ್ರಮುಖ ಸ್ಥಳಗಳಿಗೆ ಒಳ್ಳೆಯ ಸಂಪರ್ಕ ಕಲ್ಪಿಸುತ್ತದೆ. ಯಾತ್ರಿಕರು ಕಲ್ಕಾದಿಂದ ಶೋಘಿಗೆ ಟ್ಯಾಕ್ಸಿಗಳನ್ನು ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜುಬ್ಬರ್ಹಟ್ಟಿಯಲ್ಲಿರುವ ಶಿಮ್ಲಾ ವಿಮಾನ ನಿಲ್ದಾಣವು ಶೋಘಿ ನಿಂದ 33 ಕಿಮೀ ದೂರದಲ್ಲಿದ್ದು ಇದು ಶೋಘಿಗೆ ಹತ್ತಿರದಲ್ಲಿದ್ದ ದೇಶೀಯ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ದೆಹಲಿ, ಕುಲ್ಲು ಮುಂತಾದ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರು ನಿಲ್ದಾಣದ ಹೊರಗೆ ಲಭ್ಯವಿರುವ ಟ್ಯಾಕ್ಸಿಗಳನ್ನು ಪಡೆದು ಶೋಘಿ ತಲುಪಬಹುದು. ಸುಮಾರು 340 ಕಿಮೀ ದೂರದಲ್ಲಿರುವ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (IGI) ಶೋಘಿಗೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat