Search
  • Follow NativePlanet
Share
ಮುಖಪುಟ » ಸ್ಥಳಗಳು» ಪರ್ವಾನೂ

ಪರ್ವಾನೂ - ಔದ್ಯಮಿಕ ಸುಂದರ ಪಟ್ಟಣ

13

ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯಲ್ಲಿರುವ ಪರ್ವಾನೂ ಒಂದು ಸುಂದರ ಗುಡ್ಡಪ್ರದೇಶ. ಹಲವು ಗುಡ್ಡಗಳು ಮತ್ತು ಉದ್ಯಾನಗಳನ್ನು ಹೊಂದಿರುವ ಈ ಪ್ರದೇಶವು ಜನಪ್ರಿಯ ಪ್ರವಾಸಿ ತಾಣ. ಹರ್ಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಗಡಿ ಊರು ಇದು.

ಪರ್ವಾನೂ ಕೇವಲ ಸುಂದರ ಪ್ರವಾಸಿ ತಾಣ ಮಾತ್ರವಲ್ಲ, ಬದಲಿಗೆ ಔದ್ಯಮಿಕ ಪಟ್ಟಣವೂ ಹೌದು. ಹಲವು ಫ್ಯಾಕ್ಟರಿಗಳು ಮತ್ತು ಇಂಡಸ್ಟ್ರಿಗಳಿವೆ. ಹಣ್ಣು ಸಂಸ್ಕರಣಾ ಕೇಂದ್ರ ಎಚ್‌ಪಿಎಮ್‌ಸಿ ಇಲ್ಲಿದೆ. ಪಟ್ಟಣದ ಸುಮಾರು 80 ರಷ್ಟು ಜನರು ವಿವಿಧ ಫ್ಯಾಕ್ಟರಿಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಫ್ಯಾಕ್ಟರಿಗಳಲ್ಲಿ ಮೋಟಾರು ವಾಹನದ ಬಿಡಿಭಾಗಗಳು, ಪ್ಲಾಸ್ಟಿಕ್‌ಗಳು ಮತ್ತು ಹಣ್ಣು ಸಂಸ್ಕರಣಾ ಘಟಕಗಳು ಸೇರಿವೆ. ಪರ್ವಾನೂದಲ್ಲಿರುವ ಹಣ್ಣಿನ ತೋಟಗಳಿಂದ ಹಣ್ಣುಗಳನ್ನು ಸಂಗ್ರಹಿಸಿ ಜೆಲ್ಲಿ, ಜಾಮ್‌ ಮತ್ತು ಜ್ಯೂಸ್‌ಗಳನ್ನು ಮಾಡಲಾಗುತ್ತದೆ.

ಪರ್ವಾನೂದಲ್ಲಿ ಹಲವು ಧಾರ್ಮಿಕ ಕೇಂದ್ರಗಳು, ಉದ್ಯಾನಗಳು ಮತ್ತು ಹಿಲ್‌ ರೆಸಾರ್ಟ್‌ಗಳು ಇವೆ. ಪಿನ್‌ಜೋರಿನ ಮುಘಲ್‌ ಗಾರ್ಡನ್‌, ಇಲ್ಲಿಂದ 10 ಕಿ.ಮೀ ದೂರದಲ್ಲಿದೆ. ಇದೊಂದು ಅತ್ಯಂತ ಜನಪ್ರಿಯ ಪ್ರವಾಸಿ ಕೇಂದ್ರ. ಇನ್ನೊಂದು ಜನಪ್ರಿಯ ಉದ್ಯಾನವೆಂದರೆ ಕ್ಯಾಕ್ಟಸ್‌ ಗಾರ್ಡನ್‌. ಇದು 1987ರಲ್ಲಿ ನಿರ್ಮಾಣವಾಗಿದ್ದು, ಸುಮಾರು 7 ಎಕರೆ ಪ್ರದೇಶವನ್ನು ವ್ಯಾಪಿಸಿರುವ ಈ ಉದ್ಯಾನವು ಏಷ್ಯಾದಲ್ಲೇ ಅತಿದೊಡ್ಡ ಕ್ಯಾಕ್ಟಸ್‌ ಉದ್ಯಾನವೆಂದು ಪರಿಗಣಿಸಲ್ಪಟ್ಟಿದೆ.

ಟಿಂಬರ್ ಟ್ರಯಲ್‌, ಇದೊಂದು ಜನಪ್ರಿಯ ಹಿಲ್‌ ರೆಸಾರ್ಟ್‌ ಆಗಿದ್ದು ಕೇಬಲ್‌ ಕಾರಿನ ಮೂಲಕ ಹೋಗಬಹುದು. ವರ್ಷಪೂರ್ತಿ ಇಲ್ಲಿಗೆ ಅಪಾರ ಪ್ರಮಾಣದ ಪ್ರವಾಸಿಗರು ಆಗಮಿಸುತ್ತಾರೆ. ಕೇಬಲ್‌ ಕಾರಿನಲ್ಲಿ 10 ರಿಂದ 12 ಜನರು ಒಮ್ಮೆ ಹೋಗಬಹುದು ಮತ್ತು ಈ ಕೇಬಲ್ ಕಾರ್ ಆಳ ಪ್ರಪಾತದ ಮೇಲಿನಿಂದ ಪ್ರವಾಸಿಗರನ್ನು ರೆಸಾರ್ಟ್‌ಗೆ ಕರೆದೊಯ್ಯುತ್ತದೆ. ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿ ಈ ಪ್ರದೇಶವಿದೆ. ದಟ್ಟ ಪೈನ್‌ಮರಗಳ ಅರಣ್ಯದಿಂದ ಈ ಪ್ರದೇಶ ವ್ಯಾಪಿಸಿಕೊಂಡಿದೆ.

ಪರ್ವಾನೂಗೆ ಪ್ರಯಾಣ ಮಾಡುವ ಪ್ರವಾಸಿಗರು ದಗ್‌ಶೈಗೆ ಒಮ್ಮೆ ಭೇಟಿ ನೀಡಬೇಕು. ಇದು ದೇಶದ ಬ್ರಿಟಿಷ್‌ ಕಂಟೋನ್ಮೆಂಟ್‌ಗಳಲ್ಲಿ ಒಂದಾಗಿದೆ. 1846 ರಲ್ಲಿ ಈ ಪ್ರದೇಶದಲ್ಲಿ ಹಲವು ಯುದ್ಧಗಳು ನಡೆದಿತ್ತು. ಯುದ್ಧದ ಕೈದಿಗಳನ್ನು ಇಡಲು ಇಲ್ಲಿ ಒಂದು ದೊಡ್ಡ ಜೈಲನ್ನು ನಿರ್ಮಿಸಲಾಗಿದೆ. ಶಿಕ್ಷೆಯ ಅಂಗವಾಗಿ ಸಿಕ್ಕಿಕೊಂಡವರಿಗೆ ಖಾಯಂ ಹಚ್ಚೆಯನ್ನು ಹಾಕಲಾಗುತ್ತಿತ್ತು.

ಇನ್ನೊಂದು ಜನಪ್ರಿಯ ಕಂಟೋನ್ಮೆಂಟ್‌ ಪ್ರದೇಶವೆಂದರೆ ಸುಬತು ಪಟ್ಟಣ. ಇದು ಪರ್ವಾನೂದಿಂದ 16 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 4500 ಅಡಿ ಎತ್ತರದಲ್ಲಿದೆ. ವೈಸೆರೆಗಲ್‌ ಲಾಡ್ಜ್‌ನಲ್ಲಿ ಉನ್ನತ ಮಟ್ಟದ ಮಿಲಿಟರಿ ಅಧಿಕಾರಿಗಳು, ದೂರದ ಊರಿಗೆ ಪ್ರಯಾಣ ಮಾಡುತ್ತಿದ್ದರೆ ಇಲ್ಲಿ ಉಳಿದುಕೊಳ್ಳುತ್ತಿದ್ದರು. ದಟ್ಟ ಅರಣ್ಯದಿಂದ ಕೂಡಿದ್ದರಿಂದ ಚಾರಣಕ್ಕೆ ಸೂಕ್ತ ತಾಣವಿದು.

ರೈಲು, ವಿಮಾನ ಮತ್ತು ರಸ್ತೆ ಸಾರಿಗೆಯ ಮೂಲಕ ಪ್ರವಾಸಿಗರು ಇಲ್ಲಿಗೆ ಪ್ರಯಾಣಿಸಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಚಂಡೀಗಢದಲ್ಲಿದೆ. ಪರ್ವಾನೂದಿಂದ 25 ಕಿ.ಮೀ ಅಂತರದಲ್ಲಿ ಈ ವಿಮಾನ ನಿಲ್ದಾಣವಿದೆ. ಕೋಲ್ಕತ್ತಾ, ಶ್ರೀನಗರ, ದೆಹಲಿ, ಜೈಪುರ ಮತ್ತು ಮುಂಬೈನಂತಹ ಪ್ರಮುಖ ನಗರಗಳಿಗೆ ಇಲ್ಲಿಂದ ಸಂಪರ್ಕವಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿಯಲ್ಲಿದ್ದು, ಪರ್ವಾನೂಗೆ ಪ್ರಯಾಣಿಸುವ ವಿದೇಶಿ ಪ್ರವಾಸಿಗರಿಗೆ ಇಲ್ಲಿಂದ ಸೇವೆಯನ್ನು ಪಡೆಯಬಹುದು.

ಪರ್ವಾನೂಗೆ ಸಮೀಪದ ರೈಲು ನಿಲ್ದಾಣ ಕಲ್ಕಾದಲ್ಲಿದೆ. ಇಲ್ಲಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಈ ರೈಲು ನಿಲ್ದಾಣಕ್ಕೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಅಮೃತಸರಕ್ಕೆ ನೇರ ಸಂಪರ್ಕವನ್ನು ಹೊಂದಿದೆ. ಪರ್ವಾನೂದಿಂದ ಚಂಡೀಗಢ ಮತ್ತು ಕಲ್ಕಾಗೆ ನೇರವಾಗಿ ಬಸ್‌ ಸೌಲಭ್ಯವಿದೆ.

ಪರ್ವಾನೂದಲ್ಲಿನ ವಾತಾವರಣವು ವರ್ಷಪೂರ್ತಿ ಪ್ರಶಾಂತವಾಗಿರುತ್ತದೆ. ಆದರೆ ಮೇ ತಿಂಗಳು ಮಾತ್ರ ಅತ್ಯಂತ ಹೆಚ್ಚು ತಾಪಮಾನ ಇರುತ್ತದೆ. ಮಳೆಗಾಲದಲ್ಲಿ ಗಮನಾರ್ಹ ಪ್ರಮಾಣದ ಮಳೆ ಬೀಳುತ್ತದೆ. ಹಾಗೆಯೇ ಚಳಿಗಾಲದಲ್ಲಿ ವಿಪರೀತಿ ಚಳಿ ಇದ್ದು, -8 ಡಿಗ್ರಿಯ ತನಕವೂ ಇಳಿಯುತ್ತದೆ.

ಪರ್ವಾನೂ ಪ್ರಸಿದ್ಧವಾಗಿದೆ

ಪರ್ವಾನೂ ಹವಾಮಾನ

ಉತ್ತಮ ಸಮಯ ಪರ್ವಾನೂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪರ್ವಾನೂ

  • ರಸ್ತೆಯ ಮೂಲಕ
    ಚಂಡೀಗಢ ಮತ್ತು ಕಲ್ಕಾದಿಂದ ಪರ್ವಾನೂಗೆ ರಾಜ್ಯ ಸಾರಿಗೆ ಬಸ್‌ಗಳು ಓಡಾಡುತ್ತವೆ. ಪ್ರವಾಸಿಗರು ಕಡಿಮೆ ಖರ್ಚಿನಲ್ಲಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    4ಕಿ.ಮೀ ದೂರದಲ್ಲಿರುವ ಕಲ್ಕಾ ರೈಲ್ವೆ ಸ್ಟೇಷನ್‌ ಹೊರತಾಗಿ ಇನ್ನೊಂದು ರೈಲ್ವೆ ಸ್ಟೇಷನ್‌ ಇಲ್ಲಿಗೆ ಸಮೀಪದಲ್ಲಿಲ್ಲ. ಕೋಲ್ಕತ್ತಾ, ಮುಂಬೈ, ದೆಹಲಿ ಮತ್ತು ಅಮೃತಸರದಿಂದ ಕಲ್ಕಾಗೆ ನೇರ ರೈಲು ಸಂಪರ್ಕವಿದೆ. ಪ್ರವಾಸಿಗರು ರೈಲ್ವೆ ನಿಲ್ದಾಣದ ಹೊರಗಡೆಯಿಂದ ಪರ್ವಾನೂಗೆ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪರ್ವಾನೂಗೆ 25 ಕಿ.ಮೀ ದೂರದಲ್ಲಿರುವ ಚಂಡೀಗಢ ವಿಮಾನ ನಿಲ್ದಾಣವು ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಜೈಪುರ, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಶ್ರೀನಗರಕ್ಕೆ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಟ್ಯಾಕ್ಸಿಗಳನ್ನು ವಿಮಾನ ನಿಲ್ದಾಣದ ಹೊರಗಡೆಯಿಂದ ಪಡೆದು ಪರ್ವಾನೂಗೆ ತಲುಪಬಹುದು. ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪರ್ವಾನೂಗೆ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri