ಹಪೋಲಿ ನಗರದಿಂದ 4 ಕಿ.ಮೀ. ದೂರದಲ್ಲಿರುವ ಕರ್ಡೊ ಅರಣ್ಯದಲ್ಲಿರುವ ಸಿದ್ಧೇಶ್ವರನಾಥ ಮಂದಿರದಲ್ಲಿ 25 ಅಡಿ ಎತ್ತರದ 22 ಅಡಿ ಅಗಲದ ಶಿವಲಿಂಗವಿದೆ. ಹಿಂದೂಗಳು ಶಿವನನ್ನು ಪೂಜಿಸುವಂತಹ ಶ್ರಾವಣ ತಿಂಗಳಲ್ಲಿ ಈ ಬೃಹತ್ ಶಿವಲಿಂಗವನ್ನು ಪತ್ತೆಹಚ್ಚಲಾಗಿತ್ತು. ಜುಲೈ 2004ರಲ್ಲಿ ಇದು ಪತ್ತೆಯಾಗಿತ್ತು. ಮೂಲಗಳ ಪ್ರಕಾರ ನೇಪಾಳದವನೊಬ್ಬ ಇಲ್ಲಿ ಮರವೊಂದನ್ನು ಕಡಿಯುತ್ತಿದ್ದಾಗ ಈ ಲಿಂಗವು ಪತ್ತೆಯಾಗಿತ್ತು.
ವರ್ಷವಿಡೀ ಇಲ್ಲಿಗೆ ಭೇಟಿ ನೀಡುವ ಬೃಹತ್ ಸಂಖ್ಯೆಯ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸುತ್ತಾರೆ. ಸ್ಥಳೀಯರಿಗೆ ಶಿವಲಿಂಗದ ಬಗ್ಗೆ ಭಾರೀ ನಂಬಿಕೆಯಿದ್ದು, ಪ್ರತೀದಿನ ಪೂಜೆ ಸಲ್ಲಿಸುತ್ತಾರೆ. ಇದನ್ನು ವೀಕ್ಷಿಸಲು ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗಳು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications