ಯುಮ್ಥಾಂಗ್ ಚಿಕಿತ್ಸಾತ್ಮಕ ಗುಣವುಳ್ಳ ಬಿಸಿನೀರಿನ ಬುಗ್ಗೆಗಳಿಂದ ಹೆಸರುವಾಸಿಯಾಗಿದೆ ಮತ್ತು ಹೆಸರಾಂತ ಪ್ರವಾಸಿ ತಾಣವಾಗಿದೆ. ಈ ಬಿಸಿನೀರಿನ ಬುಗ್ಗೆಯು ಯುಮ್ಥಾಂಗ್ ಹಳ್ಳಿಯ ಸಮೀಪದಲ್ಲಿದೆ ಮತ್ತು ಅಲ್ಲಿನ ಬಿಸಿನೀರು ಸಮೃದ್ಧ ಗ್ರಂಧಕಾಂಶವನ್ನು ಹೊಂದಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಒಂದು ಜೋಪಡಿಯೊಳಗೆ ಎರಡು ಬಿಸಿನೀರಿನಬುಗ್ಗೆಗಳಿವೆ. ಈ ನಿರ್ದಿಷ್ಟವಾದ ಬಿಸಿನೀರಿನ ಬುಗ್ಗೆ ಲಾಚುಂಗ್(Lachung) ನದಿಯ ಪಾದಚಾರಿ ಸೇತುವೆಯ ಸನಿಹದಲ್ಲಿದೆ.
ಯುಮ್ಥಾಂಗ್ನಿಂದ 25 ಕಿ.ಮೀ. ದೂರದಲ್ಲಿ ಯುಮೆ ಸಾಂಡೊಂಗ್ (Yume Samdong) ಎಂಬ ಮತ್ತೊಂದು ಬಿಸಿನೀರಿನ ಬುಗ್ಗೆಯಿದೆ. ಇದು ಡೊಂಕಿಯ ಲಾ ಪಾಸ್(Donkia La Pass) ಅಡಿಯಲ್ಲಿದೆ.


Click it and Unblock the Notifications