ಇಲ್ಲಿಗೆ ಭೇಟಿ ಕೊಡುವಂತಹ ಸಸ್ಯಪ್ರೇಮಿಗಳ ಪಾಲಿಗೆ ವರದಾನವಾಗಿರುವುದು ಇಲ್ಲಿರುವ ಜೈವಿಕ ಉದ್ಯಾನವನ. ಸಸ್ಯ ಹಾಗೂ ಪ್ರಾಣಿಗಳೊಂದಿಗೆ ನೈಸರ್ಗಿಕ ತಾಣಗಳನ್ನು ಇಷ್ಟಪಡುವ ಮಂದಿಗೆ ಇದೊಂದು ಸ್ವರ್ಗಧಾಮ. ಉತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಹಸಿರುಮನೆಯೊಂದಿಗೆ ಇಲ್ಲಿರುವ ಆರ್ಕಿಡೇರಿಯಮ್‌ಗಳು ನೂರಾರು ಆರ್ಕಿಡ್‌ಗಳ ಸಂಗ್ರಹವನ್ನು ಹೊಂದಿವೆ. ’ಕುರಿಂಜಿ’ ಎನ್ನುವುದು ಇಲ್ಲಿನ ಪ್ರಸಿದ್ಧ ಹೂವು. ವರ್ಷದಲ್ಲೆರಡು ಬಾರಿ ಈ ಹೂವುಗಳು ಅರಳಿ ನಿಂತಾಗ ಅದರ ಸೌಂದರ್ಯವನ್ನು ಸವಿಯುವುದೇ ಚಂದ. ಇದರ ಜೊತೆಗೆ ’ಲೇಡಿಸ್ ಸ್ಲಿಪ್ಪರ್’, ’ವರ್ನೋನಿಯಾ ಶಿವರಾಯೊನ್‌ಸಿಸ್’ ಎನ್ನುವ ಆರ್ಕಿಡ್ ಸಸ್ಯಗಳು ಕೂಡಾ ಇಲ್ಲಿನ ಸೌಂದರ್ಯವರ್ಧನೆಯಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿವೆ. ಇಲ್ಲಿರುವ ಆರ್ಕೇಡಿಯಂ ದೊಡ್ಡ ಸರೋವರದಿಂದ 2 ಕಿಮೀ ದೂರದಲ್ಲಿದ್ದು, ಸುಮಾರು 30 ಬಗೆಯ ವಿವಿಧ ಜಾತಿಯ ಆರ್ಕಿಡ್ ಸಸ್ಯಗಳ ಸಂಗ್ರಹ ಇಲ್ಲಿದೆ. ಈ ಆರ್ಕಿಡೇರಿಯಂ ದೇಶದ 3 ನೇ ದೊಡ್ಡ ಆರ್ಕಿಡೇರಿಯಂ ಆಗಿರುವುದು ಇದರ ಇನ್ನೊಂದು ದೊಡ್ಡ ವಿಶೇಷ.


Click it and Unblock the Notifications