ವಾರಂಗಲ್ ಕೋಟೆ ವಾರಂಗಲ್ ನ ಒಂದು ಅತ್ಯಾಕರ್ಷಕ ತಾಣವಾಗಿದೆ. ಇದು ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಸೌಂದರ್ಯಕ್ಕೆ ಒಂದು ಮನಸೆಳೆಯುವ ಉದಾಹರಣೆಯಾಗಿದೆ. ಗಣಪತಿ ದೇವ ಈ ಕೋಟೆಯನ್ನು ಕ್ರಿ.ಶ. 1199 ರಲ್ಲಿ ಆರಂಭಿಸಿದನು ಮತ್ತು ಆತನ ಮಗಳು ರಾಣಿ ರುದ್ರಮ್ಮ ದೇವಿಯ ಅವಧಿಯಲ್ಲಿ ಕ್ರಿ.ಶ 1261 ರಲ್ಲಿ ಸಂಪೂರ್ಣಗೊಂಡಿತು.
ಈಗ ಕೋಟೆ ನಶಿಸಿದ್ದರೂ ಆಗಮನ ದ್ವಾರದ ಬಳಿ ನಾಲ್ಕು ವೈಭವಯುತವಾದ ದ್ವಾರಗಳಿವೆ. ಇವುಗಳು ಸಂಚಿ ಶೈಲಿಯಲ್ಲಿದ್ದು ಇವುಗಳಲ್ಲಿ ಒಂದು ಈ ಶೈಲಿಯ ದೇಶದಲ್ಲೇ ದೊಡ್ಡ ದ್ವಾರವಾಗಿದೆ. ಇತಿಹಾಸ, ವಾಸ್ತುಶಿಲ್ಪ ಮತ್ತು ಪ್ರಾಚೀನ ಶಿಲ್ಪಗಳಲ್ಲಿ ಆಸಕ್ತಿ ಇರುವವರು ಈ ಕೋಟೆ ಮತ್ತು ಸುತ್ತಮುತ್ತಣ ಪ್ರದೇಶಗಳಲ್ಲಿ ಸಾಕಷ್ಟು ವಿವರಗಳನ್ನು ಮತ್ತು ವಸ್ತುಗಳನ್ನು ಕಾಣಬಹುದಾಗಿದೆ, ಹಾಗೂ ಇದೇ ಈ ಕೋಟೆಯ ಪ್ರಸಿದ್ಧಿಗೂ ಒಂದು ಪ್ರಮುಖ ಕಾರಣವಾಗಿದೆ. ಇಂದಿಗೂ ಸಿಂಹಗಳು, ಬಾತುಕೋಳಿಯಂತಹ ಹಕ್ಕಿಗಳ ಕೆತ್ತನೆಗಳು ಬಹಳ ನಾಜೂಕಿನಿಂದ ಕೂಡಿವೆ.