ವಾರಂಗಲ್ ನ ಸ್ಥಳಗಳನ್ನು ವೀಕ್ಷಿಸಿ ಸ್ವಲ್ಪ ವಿರಾಮ ಬೇಕು ಎಂದು ಬಯಸುವ ಪ್ರವಾಸಿಗಳಿಗೆ ಬಂಡೆ ಉದ್ಯಾನ ಅತೀ ಸೂಕ್ತ ಸ್ಥಳವಾಗಿದೆ. ಇದು ವಾರಂಗಲ್ ಕೋಟೆಯ ಸಮೀಪವಿದೆ. ಬಂಡೆಯಿಂದ ಮಾಡಲಾದ ಜಿಂಕೆ, ಸಾರಂಗ, ಜಿರಾಫೆ, ಸಿಂಹ ಹಾಗೂ ಹುಲಿಗಳನ್ನು ಇತರ ಪ್ರಾಣಿಗಳೊಂದಿಗೆ ಕಾಣಬಹುದಾಗಿದೆ. ಜೀವಂತ ಪ್ರಾಣಿಗಳಂತೆ ಕಾಣುವ ಈ ಎಲ್ಲಾ ಪ್ರಾಣಿಗಳು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ. ಇದರ ಜೊತೆಗೆ ಹಲವಾರು ಮರಗಳು, ಗುಲಾಬಿ, ಲಿಲ್ಲಿ ಮತ್ತಿತರ ಹುವುಗಳ ಗಿಡಗಳು ಕೂಡ ಈ ಉದ್ಯಾನವನದಲ್ಲಿವೆ.
ಇಲ್ಲಿ ಮಕ್ಕಳನ್ನು ಆಕರ್ಷಿಸುವ ಆಟದ ಮೈದಾನವೂ ಇದೆ. ಸಂಜೆಯ ವೇಳೆ ಇದು ಕಿಕ್ಕಿರಿದ ಜನಸಂದಣಿಯಿಂದ ಕೂಡಿರುತ್ತದೆ. ಪ್ರವಾಸಿಗರ ಜೊತೆಗೆ ಸ್ಥಳೀಯರೂ ಬಹಳ ಸಂಖ್ಯೆಯಲ್ಲಿ ಸೇರಿರುತ್ತಾರೆ. ನಿಸರ್ಗದ ಸೌಂದರ್ಯವನ್ನು ನೋಡಿ ಸವಿಯುವವರು ಈ ಸ್ಥಳವನ್ನು ಖಂಡಿತ ನೋಡದೇ ಇರಬಾರದು. ಹಾಗೂ ಇದನ್ನು ಅಷ್ಟೇ ಮುತುವರ್ಜಿಯಿಂದ ನೋಡಿಕೊಳ್ಳಲಾಗಿದ್ದು ಇದು ಆಕರ್ಷಣೆಗೆ ಮತ್ತೊಂದು ಕಾರಣವಾಗಿದೆ.