ಪದ್ಮಾಕ್ಷಿ ದೇವಾಲಯ 12 ನೆಯ ಶತಮಾನದ ಮೊದಲಾರ್ಧದ ಕಟ್ಟಡ ಎಂದು ನಂಬಲಾಗಿದ್ದು ಅತೀ ಹಳೆಯ ಕಟ್ಟಡವಾಗಿದೆ. ಇಲ್ಲಿ ಪದ್ಮಾಕ್ಷಿ ದೇವಿಯನ್ನು ಪೂಜಿಸಲಾಗುತ್ತದೆ. ಇಲ್ಲಿನ ಧಾರ್ಮಿಕ ನಂಬಿಕೆಯೊಂದಿಗೆ ಇಲ್ಲಿರುವ ಶಿಲ್ಪಕಲೆಯ ಸೌಂದರ್ಯಕ್ಕಾಗಿ ಇದು ಸ್ಥಳೀಯರು ಹಾಗೂ ಪ್ರವಾಸಿಗಳನ್ನು ಆಕರ್ಷಿಸುತ್ತದೆ.
ದ್ವಾರದ ಬಳಿ ಕಪ್ಪು ಗ್ರೆನೈಟ್ ಕಲ್ಲಿನಿಂದ ಕಟ್ಟಲಾದ ಚತುರ್ಭುಜೀಯ ಸ್ತಂಭವಿದೆ. ಇದನ್ನು ಅನ್ನಕೊಂಡ ಸ್ತಂಭ ಎಂದು ಕರೆಯಲಾಗುತ್ತದೆ. ಶಿಲ್ಪಕಲೆ ಮತ್ತು ಸೂಕ್ಷ್ಮ ಕೆತ್ತನೆಗಳು ಇದನ್ನು ಮೂಲ ಜೈನ ದೇವಾಲಯವಾಗಿದ್ದು ಜೈನ ಧರ್ಮೀಯರಿಗೆ ಕೊಡುಗೆ ನೀಡಿರುವ ಕಟ್ಟಡವಾಗಿದೆ ಎಂದು ನಂಬಲಾಗಿದೆ. ಸ್ತಂಭದ ಮೇಲ್ಮೈ ನೋಡಲು ಬಹಳ ಆಕರ್ಷಕವಾಗಿದೆ. ಕೇವಲ ಈ ಕೆತ್ತನೆಗಳನ್ನು ನೋಡಲೆಂದೇ ಬಂದ ಅದೆಷ್ಟೋ ಪ್ರವಾಸಿಗರನ್ನು ನೀವಿಲ್ಲಿ ವರ್ಷಪೂರ್ತಿ ಕಾಣಬಹುದಾಗಿದೆ.