ವಿಕ್ಟೋರಿಯಾ ಜ್ಯುಬಲಿ ರೀಜನಲ್ (ಪ್ರಾದೇಶಿಕ) ಮ್ಯೂಸಿಯಂ ಪುರಾತತ್ವ ವಿಷಯದಲ್ಲಿ ಆಸಕ್ತಿ ಹೊಂದಿದವರಿಗೆ ಹೆಚ್ಚು ಆಕರ್ಷಣೀಯ ಸ್ಥಳ. ಈ ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಶಿಲ್ಪಗಳು, ವಿಗ್ರಹಗಳು, ವರ್ಣಚಿತ್ರಗಳು, ಶಸ್ತ್ರಾಸ್ತ್ರಗಳು, ಶಿಲಾಶಾಸನಗಳು ಹೀಗೆ ಇನ್ನೂ ಮೊದಲಾದ ಬೃಹತ್ ವಸ್ತುಗಳ ಸಂಗ್ರಹವಿದೆ. ಈ ವಿಕ್ಟೋರಿಯಾ ಜ್ಯುಬಲಿ ರೀಜನಲ್ (ಪ್ರಾದೇಶಿಕ) ವಸ್ತು ಸಂಗ್ರಹಾಲಯವು ವಿಜಯವಾಡದ ಪುರಾತತ್ವ ಇಲಾಖೆಯವರಿಂದ ನಿರ್ವಹಿಸಲ್ಪಡುತ್ತದೆ.