ವೇಲಾಂಕಣ್ಣಿ ಚರ್ಚ್ ಅಥವಾ 'ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್', ವೇಲಾಂಕಣ್ಣಿಯೆಂಬ ಪವಿತ್ರ ಪಟ್ಟಣದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಹದಿನಾರನೆಯ ಶತಮಾನದಲ್ಲಿ ಒಂದು ಹುಲ್ಲು ಗುಡಿಸಲಿನ ಚಾಪೆಲ್ ಆಗಿ ಆರಂಭಗೊಂಡ ಈ ಚರ್ಚ್ ಮುಂದೆ 1771ರಲ್ಲಿ ಪಾರಿಶ್ ಚರ್ಚ್ ಆಗಿ ರೂಪಾಂತರಗೊಂಡಿತು. ನಂತರ 1962 ರಲ್ಲಿ 23ನೇ ಪೋಪ್ ಜಾನ್ರ್ವರಿಂದ ಮೈನರ್ ಬೆಸಿಲಿಕಾದ ಸ್ಥಾನಮಾನವನ್ನು ಪಡೆದುಕೊಂಡಿತು.
ಈ ಚರ್ಚ್ ಬೆಳಗ್ಗೆ ಐದರಿಂದ ರಾತ್ರಿ ಒಂಭತ್ತರವರೆಗೆ ತೆರೆದಿರುತ್ತದೆ. ಇಲ್ಲಿ ಪ್ರತಿದಿನವು ತಮಿಳು, ಮಲಯಾಳಂ ಮತ್ತು ಇಂಗ್ಲೀಷಿನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ನೊವೆನ ಪ್ರಾರ್ಥನೆಗಳು, ರೋಸರಿ ಮತ್ತು ಸಂಜೆ ಆರಕ್ಕೆ ಸಂಜೆ ಪ್ರಾರ್ಥನೆಗಳನ್ನು ಇಲ್ಲಿ ನಿರ್ವಹಿಸಲಾಗುತ್ತದೆ.
1974-75 ರಲ್ಲಿ ಈ ಬೆಸಿಲಿಕಾವನ್ನು ಫ್ರಾನ್ಸಿನ ಲೌರ್ಡ್ಸ್ ನಲ್ಲಿರುವ ಬೆಸಿಲಿಕಾದಂತೆ ವಿನ್ಯಾಸಗೊಳಿಸಿ ವಿಸ್ತರಿಸಲಾಯಿತು. ಹಾಗಾಗಿ ವೇಲಾಂಕಣ್ಣಿಯ ಚರ್ಚನ್ನು "ಪೂರ್ವದ ಲೌರ್ಡ್ಸ್" ಎಂದು ಕರೆಯಲಾಗುತ್ತದೆ. ಸೆಪ್ಟೆಂಬರ್ ಮತ್ತು ಕ್ರಿಸ್ಮಮಸ್ ಸಮಯದಲ್ಲಿ ನಡೆಯುವ ಫೀಸ್ಟ್(ಉತ್ಸವ) ಸಂದರ್ಭದಲ್ಲಿ ಯಾತ್ರಾರ್ಥಿಗಳು ಇಲ್ಲಿಗೆ ಸಾಮಾನ್ಯವಾಗಿ ಬರಲು ಇಚ್ಛಿಸುತ್ತಾರೆ.


Click it and Unblock the Notifications