Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಲಾಂಕಣ್ಣಿ » ಆಕರ್ಷಣೆಗಳು » ವೇಲಾಂಕಣ್ಣಿ ಬೀಚ್

ವೇಲಾಂಕಣ್ಣಿ ಬೀಚ್, ವೇಲಾಂಕಣ್ಣಿ

2

ವೇಲಾಂಕಣ್ಣಿ ಬೀಚ್, ನಗರದ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಸಾಲು ಸಾಲಾಗಿ ಅಸಂಖ್ಯಾತ ಅಂಗಡಿಗಳನ್ನು ಈ ಕಡಲ ತೀರದ ಕಿನಾರೆಯಲ್ಲಿ ನೋಡಬಹುದು. ಹೀಗಾಗಿ ಇದು ಪ್ರವಾಸಿಗರಿಗೆ ವ್ಯಾಪಾರ ವಹಿವಾಟು ನಡೆಸಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ವ್ಯಾಪಾರ ಮಾಡುವುದು ದೇಶದ ಇತರ ಭಾಗಗಳಿಗಿಂತ ವಿಭಿನ್ನವಾದ ಅನುಭವವನ್ನೊದಗಿಸುತ್ತದೆ. ಇಲ್ಲಿ ತತ್ ಕ್ಷಣವೆ ಫೋಟೊಗಳನ್ನು ತೆಗೆದುಕೊಡುವ ಅಂಗಡಿಗಳಿಂದ ಹಿಡಿದು, ಸಣ್ಣ ಸಣ್ಣ ಕುರುಕಲು ತಿಂಡಿಗಳನ್ನು ಮಾರುವ ಅಂಗಡಿಗಳು, ಸಿ ಡಿಗಳು / ಡಿವಿಡಿಗಳನ್ನು ಮಾರುವ ಅಂಗಡಿಗಳವರೆಗೆ ಎಲ್ಲಾ ರೀತಿಯ ಆಧುನಿಕ ವಸ್ತುಗಳನ್ನು ಪ್ರಾಚೀನ ಫ್ಯಾಷನ್ನನ ಮಿಳಿತದೊಂದಿಗೆ ಸೇರಿಸಿ ಇಲ್ಲಿ ಮಾರಲಾಗುತ್ತದೆ.

ಇವುಗಳ ಜೊತೆಗೆ ದೇಹದ ಅಂಗಾಂಗಗಳನ್ನು ಹೋಲುವ ಮೇಣದ ಪಡಿಯಚ್ಚುಗಳನ್ನು ಮಾರಲಾಗುತ್ತದೆ. ಏಕೆಂದರೆ ಹಾನಿಗೊಳಗಾದ ಅಂಗಾಂಗಗಳ ಪ್ರತಿರೂಪಗಳನ್ನು ಚರ್ಚಿನಲ್ಲಿ ಅರ್ಪಿಸುವುದರಿಂದ ಗುಣಮುಖ ಹೊಂದುವುದೆಂಬ ಗಾಢವಾದ ನಂಬಿಕೆ ಇಲ್ಲಿನ ಜನರದ್ದು. ಇದಕ್ಕಾಗಿ ಪ್ರವಾಸಿಗರು ಇಲ್ಲಿಗೆ ಭೇಟೀಕೊಡುತ್ತಿರುತ್ತಾರೆ. ಈ ಬೀಚಿನಲ್ಲಿ ಈಜಾಡಲು ಅವಕಾಶವಿದೆ. ಆದರೆ ಸಮುದ್ರವು ಯಾವಾಗಲು ಏಕರೂಪದಲ್ಲಿರುವುದಿಲ್ಲ. ಅಲ್ಲದೆ ಇಲ್ಲಿ ಸಮುದ್ರವು ಸ್ವಲ್ಪ ಆಳವಾಗಿದೆ. ನೀವು ಇಲ್ಲಿಗೆ ಭೇಟಿಕೊಟ್ಟಾಗ ಬೆಳಗಿನಿಂದ ಸಂಜೆಯವರೆಗು ಜನರು ಯಾರಾದರು ಇಲ್ಲಿ ನೀರಿನಲ್ಲಿ ಮುಳುಗೇಳುತ್ತಿರುವುದನ್ನು ಕಂಡೇ ಕಾಣುತ್ತೀರಿ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue