Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಲಾಂಕಣ್ಣಿ » ಹವಾಮಾನ

ವೇಲಾಂಕಣ್ಣಿ ಹವಾಮಾನ

ವೇಲಾಂಕಣ್ಣಿಗೆ ಭೇಟಿಕೊಡಲು ಅಕ್ಟೋಬರಿನಿಂದ ಮಾರ್ಚ್ ನಡುವಿನ ಅವಧಿಯು ಅತ್ಯುತ್ತಮ ಕಾಲವಾಗಿದೆ. ಬೇಸಿಗೆಯ ಸಮಯವು ಇಲ್ಲಿ ಬಿಸಿಲು ಮತ್ತು ಒಣ ಹವೆಯಿಂದ ಕೂಡಿರುತ್ತವೆ. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯವು ಸೆಖೆಯಿಂದ ಕೂಡಿರುತ್ತವೆಯಾದರು ಮಿತವಾದ ಉಷ್ಣಾಂಶವು ಕಿರು ಅವಧಿಯ ಪ್ರವಾಸಕ್ಕೆ ಹೇಳಿ ಮಾಡಿಸಿದ ಸಮಯವಾಗಿದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಚರ್ಚ್ ಉತ್ಸವಗಳಿಂದ ರಂಗೇರಿರುತ್ತದೆ. ಇದಕ್ಕೆ ಹವಾಮಾನವು ಸಹ ಬೆಂಬಲ ವ್ಯಕ್ತಪಡಿಸಿರುತ್ತದೆ. ಹಾಗಾಗಿ ಇದು ಇಲ್ಲಿಗೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಬೇಸಿಗೆಗಾಲ

ವೇಲಾಂಕಣ್ಣಿಯಲ್ಲಿ ಬೇಸಿಗೆಯು ಸುಡುವ ಬಿಸಿಲಿನಿಂದ ಕೂಡಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು 28 °ಸೆಲ್ಶಿಯಸ್ನಿಂದ 38° ಸೆಲ್ಶಿಯಸ್ ವರೆಗೆ ಇರುತ್ತದೆ. ಸಮುದ್ರದ ಸಾಮೀಪ್ಯದಿಂದ ಸಂಜೆಯ ಹೊತ್ತು ತಂಗಾಳಿ ಬೀಸುವುದರಿಂದ ಇಲ್ಲಿನ ಸಂಜೆಗಳು ಆಹ್ಲಾದಕರವಾಗಿರುತ್ತವೆ. ಪ್ರವಾಸಿಗರು ಬೇಸಿಗೆಯ ದಿನಗಳಲ್ಲಿ ಇಲ್ಲಿಗೆ ಭೇಟಿಕೊಡುವುದನ್ನು ಮುಂದೂಡುವುದು ಉತ್ತಮ. ಅದರಲ್ಲಿಯು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇಲ್ಲಿಗೆ ಭೇಟಿಕೊಡದೆ ಇರುವುದು ಉತ್ತಮ.

ಮಳೆಗಾಲ

ಮಳೆಗಾಲದಲ್ಲಿ ಸಾಧಾರಣವಾದ ಮಳೆಯನ್ನು ನಾವು ಇಲ್ಲಿ ಕಾಣಬಹುದು. ಆಹ್ಲಾದಕರವಾದ ಮತ್ತು ನಿಶ್ಕಲ್ಮಷವಾದ ಪರಿಸರವು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರನ್ನು ಮುದಗೊಳಿಸುತ್ತವೆ. ಮಳೆಗಾಲದಲ್ಲಿ ಇಲ್ಲಿನ ಬೀಚ್ ಬಹುತೇಕ ಜನರಹಿತವಾಗಿರುತ್ತದೆ. ಆದರು ವೇಲಾಂಕಣ್ಣಿಗೆ ಮಳೆಗಾಲದಲ್ಲಿಯು ಸಹ ಪ್ರವಾಸಿಗರು ಬರುತ್ತಿರುತ್ತಾರೆ.

ಚಳಿಗಾಲ

ಈ ಅವಧಿಯಲ್ಲಿ ವೇಲಾಂಕಣ್ಣಿಯಲ್ಲಿ ಆಹ್ಲಾದಕರವಾದ ಹವಾಮಾನವಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿಯವೆರೆಗೆ ಇಲ್ಲಿನ ಉಷ್ಣಾಂಶವು 21°ಸೆಲ್ಶಿಯಸ್ನಿಂದ 30° ಸೆಲ್ಶಿಯಸ್ ವರೆಗೆ ಇರುತ್ತದೆ. ಕ್ರಿಸ್ಮಸ್ ಸಮಯದಲ್ಲಿ ಇಲ್ಲಿ ಭಾರೀ ಜನಸಾಗರವೇ ಸೇರುತ್ತದೆ. ಅಲ್ಲದೆ ಈ ಸಮಯವು ವೇಲಾಂಕಣ್ಣಿಗೆ ಭೇಟಿಕೊಡಲು ಇರುವ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ.