ಪೊನ್ನುಂ ತುರುತು ದ್ವೀಪ ವರ್ಕಲಾದ 12 ಕೀ.ಮಿ ದೂರದಲ್ಲಿದೆ. ಇದೊಂದು ಆಸಕ್ತಿ ಹುಟ್ಟುಸುವಂತಹ ಪ್ರವಾಸಿ ತಾಣವಾಗಿದ್ದು ಬೋಟ್ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ಪೊನ್ನುಂತುರುಥು ಐಸ್ ಲ್ಯಾಂಡ್ ಗೋಲ್ಡನ್ ಐಸ್ ಲ್ಯಾಂಡ್ ಎಂದೂ ಕೂಡಾ ಹೆಸರುವಾಸಿಯಾಗಿದೆ.
’ತುರುಥು ಕ್ಷೇತ್ರಂ’ ಎಂದು ಕರೆಯಲ್ಪಡುವ ನೂರು ವರ್ಷ ಹಳೆಯದಾದ ಶಿವ – ಪಾರ್ವತಿ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆ. ಸಂಪೂರ್ಣವಾದ ಐಸ್ ಲ್ಯಾಂಡ್ ಈ ದೇವಾಲಯಕ್ಕೆ ಸೇರಿದ ಆಸ್ತಿಯಾಗಿದೆ. ಈ ಐಸ್ ಲ್ಯಾಂಡ್ ಹೆಸರಿನ ಹಿಂದೆ ಆಸಕ್ತಿದಾಯಕ ಪೌರಾಣಿಕ ಕಥೆಯಿದೆ. ಅದೆನೆಂದರೆ, ತಿರುವಾಂಕೂರಿನ ಕುಟುಂಬವು ಆಗಾಗ ಈ ದೇವಾಲಯಕ್ಕೆ ಆಗಮಿಸುತ್ತಿದ್ದರು. ಈ ದೇವಾಲಯಕ್ಕೆ ಬಂದ ನಂತರ ತಮ್ಮ ಆಭರಣಗಳನ್ನು ತೆಗೆದು ಈ ಐಸ್ ಲ್ಯಾಂಡ್ ನಲ್ಲಿ ಅಡಗಿಸಿಡುತ್ತಿದ್ದರಂತೆ. ಆಗಿನಿಂದ ಪೊನ್ನುಂತುರುಥು ಎಂಬ ಹೆಸರು ಪ್ರಖ್ಯಾತಿಯಾಗಿದ್ದು ಸ್ಥಳೀಯರ ಪ್ರಕಾರ ’ಚಿನ್ನದಿಂದ ಮಾಡಿದ ಐಸ್ ಲ್ಯಾಂಡ್ ’ ಎಂದು ಹೇಳಲಾಗುತ್ತದೆ. ಇಲ್ಲಿನ ತೆಂಗಿನ ಕುರುಚಲು ಕಾಡು ನೈಸರ್ಗಿಕ ಸೌಂದರ್ಯಕ್ಕೆ ಸಾಕ್ಷಿಯಾಗಿದ್ದು, ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ತಾಣ.


Click it and Unblock the Notifications