ಪಾಪಸ್ನಾನಂ ಬೀಚ್ ತಿರುವನಂತಪುರಂ ನಿಂದ 45 ಕೀ.ಮಿ ದೂರದಲ್ಲಿ ಕಾಣಬಹುದು. ಇಲ್ಲಿನ ಸ್ವಚ್ಚ ನೀರಿನಲ್ಲಿ ಸ್ನಾನ ಮಾಡಿದರೆ ಶಾಂತಿ ಸಿಗುತ್ತದೆ ಹಾಗೂ ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆಯಿದೆ. ಪಾಪಸ್ನಾನಂ ಎಂಬುದರ ಅರ್ಥ “ಪಾಪಗಳು ನಾಶಹೊಂದುವುದು’ ಎಂಬುದು. ತಮ್ಮ ಬಂಧುಗಳು ಸತ್ತುಹೋದರೆ ಅವರ ದೇಹ ಭೂದಿಯನ್ನು ಇಲ್ಲಿನ ನೀರಿನಲ್ಲಿ ಬಿಡುವುದಕ್ಕಾಗಿ ಅನೇಕ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಭೂದಿಯನ್ನು ಇಲ್ಲಿನ ನೀರಿನಲ್ಲಿ ಬಿಟ್ಟು ಈ ನೀರಿನಲ್ಲಿ ಮುಳುಗೆದ್ದರೆ ದೇವರ ಆಶೀರ್ವಾದ ಸಿಗುತ್ತದೆ, ಸತ್ತವರ ಆತ್ಮಕ್ಕೆ ಶಾಂತಿ ಎನ್ನುವುದು ಭಕ್ತರ ನಂಬಿಕೆ.
ಪುರಾಣದ ಪ್ರಕಾರ, ನಾರದ ಭಕ್ತರ ಗುಂಪಿನ ಎದುರು ಪ್ರತ್ಯಕ್ಶನಾಗುತ್ತಾನೆ. ಭಕ್ತರು ತಮ್ಮ ಪಾಪ ನಾಶಕ್ಕಾಗಿ ಪರಿಹಾರವನ್ನು ಅವನಲ್ಲಿ ಕೇಳಿತ್ತಾರೆ. ನಂತರ ಅವರನ್ನು ಸಮಾಧಾನ ಪಡಿಸಿದ ನಾರದ ತನ್ನ ’ವಲ್ಕಲಂ’ ನ್ನು ಗಾಳಿಯಲ್ಲಿ ಬೀಸಿದನಂತೆ. ವಲ್ಕಲಂ ಯಾವ ಸ್ಥಳದಲ್ಲಿ ಬಿತ್ತೋ ಆ ಸ್ಥಳವೇ ವರ್ಕಲಾ ಸ್ಥಳ. ನಾರದನು ಭಕ್ತಾದಿಗಳನ್ನು ಬೀಚ್ ಗೆ ಹೋಗಿ ಪಾಪ ನಾಶಕ್ಕಾಗಿ ಭಗವಂತನನ್ನು ಪ್ರಾರ್ಥಿಸುವಂತೆ ಹೇಳುತ್ತಾನೆ. ನಂತರ ಈ ಬೀಚ್ ಪಾಪಸ್ನಾನಂ ಅಥವಾ ಪಾಪನಾಶಂ ಎಂದು ಹೆಸರಾಯಿತು.
ಸೂರ್ಯ ಅಸ್ತಂಗತವಾಗುವ ಅದ್ಭುತ ದೃಶ್ಯವನ್ನು ಈ ಸ್ಥಳದಲ್ಲಿಯೇ ನೋಡಬೇಕು. ಅಲ್ಲದೇ ಬೀಚ್ ತೆಂಗಿನ ಮರಗಳಿಂದ ಆವರಿಸಿದ್ದು ಇಲ್ಲಿನ ನೈಸರ್ಗಿಕ ವಾತಾವರಣದ ಸೊಬಗು ವರ್ಣಿಸಲಸಾಧ್ಯ.


Click it and Unblock the Notifications