Search
  • Follow NativePlanet
Share
ಮುಖಪುಟ » ಸ್ಥಳಗಳು » ವರ್ಕಲಾ » ಆಕರ್ಷಣೆಗಳು » ಅಂಜೆಂಗೋ (Anjengo) ಕೋಟೆ

ಅಂಜೆಂಗೋ (Anjengo) ಕೋಟೆ, ವರ್ಕಲಾ

1

ಅಂಜೆಂಗೋ ಬಂದರು 1695 ರಲ್ಲಿ ಪೋರ್ಚುಗೀಸ್ ರಿಂದ ನಿರ್ಮಿಸಲಾದ ಬಂದರು. ಇದು ಅಂಜೆಂಗೋ ಎಂಬಲ್ಲಿ ನಿರ್ಮಿಸಲಾಗಿದೆ. ಈ ಬಂದರು ಅಬ್ಬರಿಸಿ ಹರಿಯುವ ಸಮುದ್ರ ಹಾಗೂ ಹಿನ್ನೀರಿನ ಪ್ರದೇಶದ ನಡುವೆ ಕಾಣಬಹುದು. ವರ್ಕಳಾದ ದಕ್ಷಿಣಕ್ಕೆ15 ಕೀ.ಮಿ ದೂರದಲ್ಲಿದೆ. ಈ ಬಂದರಿನ ಸುತ್ತ ಐತಿಹಾಸಿಕ ಪ್ರಾಮುಖ್ಯತೆಯನ್ನು ಕಾಣಬಹುದು. ಈ ಬಂದರು ಸರಕುಗಳನ್ನು ಸಂಗ್ರಹಿಸುವ ಉದ್ಧೇಶದಿಂದಲೇ ಸ್ಥಾಪಿಸಲಾಗಿದೆ. ನಂತರ ಬ್ರಿಟಿಷರು ಇದನ್ನು ಮಿಲಿಟ್ರಿ/ ಸೈನ್ಯ ಉದ್ಧೇಶಕ್ಕಾಗಿ ಬಳಸಿಕೊಳ್ಳಲಾರಂಭಿಸಿದರು. ಕೇರಳದ ಬೇರೆಲ್ಲ ಬಂದರುಗಳಷ್ಟು ಪ್ರಸಿದ್ಧವಾಗಿಲ್ಲ.

ಇಲ್ಲಿನ ಪ್ರಮುಖವಾದ ಆಕರ್ಷಣೆಯೆಂದರೆ ಇಲ್ಲಿನ ಕಲ್ಲಿನ ಕಾಲುವೆ. ಮಸೋನ್ರಿ ಕಾಲುವೆ ಇದನ್ನು ಈಗಲೂ ಕಾಣಬಹುದು ಆದರೆ ಅದು ಸುಸ್ಥಿತಿಯಲ್ಲಿಲ್ಲ. ಕೋಟೆಯ ಸುತ್ತಲೂ ಹಲವು ಸಮಾಧಿ ಶಿಲೆಗಳನ್ನು ನಾವು ಈಗಲೂ ಕಾಣಬಹುದು. ಅದರಲ್ಲಿ ಅತ್ಯಂತ ಹಳೆಯದಾದ ಸಮಾಧಿ ಕ್ರಿ.ಶ. 1704 ಕ್ಕೆ ಸೇರಿದ್ದಾಗಿದೆ. ಈ ಸಮಾಧಿಗಳು ಈ ಕೋಟೆಗೆ ಆಗಮಿಸಿದ ಹಳೆಯ ಜನಾಂಗಕ್ಕೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಈ ಬಂದರನ್ನು ನೋಡಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಂದರು ಭಾನುವಾರ ಹಾಗೂ ಸಾರ್ವಜನಿಕ ರಜೆಗಳನ್ನು ಹೊರತು ಪಡಿಸಿ ಬೇರೆಲ್ಲ ದಿನವೂ ತೆರೆದಿರುತ್ತದೆ. ಈ ಬಂದರಿನ ಮೂಲಕ ಸುತ್ತಲಿನ ಪ್ರದೇಶದ ಸುಂದರ ನೋಟವನ್ನು ವೀಕ್ಷಿಸಬಹುದು. ಮುಥಾಲಿಪುಜಾ ಕೆರೆ/ ಸರೋವರ ಈ ಬಂದರಿನ ಸುತ್ತಲು ಹರಿಯುತ್ತಿದ್ದು ಸುಂದರ ಪರಿಸರವನ್ನು ನಿರ್ಮಿಸಿದೆ. ಆದ್ದರಿಂದ ವರ್ಕಲಾಕ್ಕೆ ಪ್ರವಾಸಕ್ಕೆ ಬಂದರೆ ಇಲ್ಲಿಗೆ ಒಂದು ವಿಸಿಟ್  ಕೊಡಲೇ ಬೇಕು !

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed