ಘಾಟ್ ಗಳು ತುಂಬಾ ಉದ್ದವಾಗಿದ್ದು, ಗಂಗಾ ನದಿಯ ನೀರಿಗೆ ಇಳಿಯಲು ಕಲ್ಲುಗಳಿಂದ ನಿರ್ಮಿಸಲಾಗಿರುವ ಮೆಟ್ಟಿಲುಗಳಾಗಿವೆ. ಈ ಘಾಟ್ ಹಲವಾರು ದೇವಾಲಯಗಳು ಮತ್ತು ತೀರ್ಥಯಾತ್ರ ಚಟುವಟಿಕೆಗಳ ಕೇಂದ್ರ.ವಾರಣಾಸಿ ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರ. ಹಿಂದೂ ಪುರಾಣಗಳಲ್ಲಿ ಹೇಳುವಂತೆ ಮತ್ತು ನಂಬಿಕೆಯಂತೆ ಗಂಗಾ ನದಿಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ತೊಳೆದುಹೋಗುತ್ತದೆಯೆಂದು ನಂಬಕೆಯಿದೆ.
ವರ್ಷದ ಯಾವುದೇ ಸಮಯದಲ್ಲೂ ವಾರಣಾಸಿಗೆ ಭೇಟಿ ನೀಡಿದರೂ ಗಂಗಾ ನದಿಯಲ್ಲಿ ಜನರು ಮಿಂದೇಳುವ ದೃಶ್ಯ ಸಾಮಾನ್ಯವಾಗಿರುತ್ತದೆ. ಅದರಲ್ಲೂ ಹಬ್ಬಹರಿದಿನಗಳ ವೇಳೆ ಜನಜಂಗುಳಿಯಿರುತ್ತದೆ.ಮಣಿಕಾರ್ಣಿಕ ಘಾಟ್ ವಾರಣಾಸಿಯ ಪ್ರಸಿದ್ಧ ಘಾಟ್ ಗಳಲ್ಲಿ ಒಂದಾಗಿದೆ. ವಾರಣಾಸಿಯಲ್ಲಿ ಸಾವನ್ನಪ್ಪುವುದು ಅಥವಾ ಮಣಿಕಾರ್ಣಿಕ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಸುವುದರಿಂದ ಮೋಕ್ಷ (ವ್ಯಕ್ತಿಯ ಹುಟ್ಟು ಮತ್ತು ಸಾವಿನ ಚಕ್ರದಿಂದ ಶಾಶ್ವತವಾಗಿ ವಿಮೋಚನೆ)ಸಿಗುತ್ತದೆ ಎನ್ನುವ ನಂಬಿಕೆಯಿದೆ.
ಇಲ್ಲಿ ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಆರತಿ(ಪ್ರಾರ್ಥನೆ) ಮಾಡಲಾಗುತ್ತದೆ. ಸಂಜೆ ಆರತಿ ವೇಳೆ ಭಕ್ತಾದಿಗಳು ದೀಪ ಹಚ್ಚುತ್ತಾರೆ ಮತ್ತು ಅದನ್ನು ಗಂಗಾ ನದಿಯ ನೀರಿನಲ್ಲಿ ತೇಳಿ ಬಿಡುತ್ತಾರೆ.


Click it and Unblock the Notifications