ವಾರಣಾಸಿ ದೇವಸ್ಥಾನಗಳ ನಗರ. ಹಿಂದೂ, ಬೌದ್ಧ, ಜೈನ ಮತ್ತು ಇಸ್ಲಾಂ ಸಹಿತ ರಾಷ್ಟ್ರದ ಪ್ರಮುಖ ಧರ್ಮ ಮತ್ತು ಸಂಸ್ಕೃತಿಗಳನ್ನು ಈ ನಗರ ಪ್ರತಿನಿಧಿಸುತ್ತದೆ. ನಗರ ಮತ್ತು ಇದರ ಸುತ್ತಮುತ್ತಲಿನ ಪ್ರದೇಶ ಐದು ಮಂದಿ ಜೈನ ತೀರ್ಥಂಕರರು ಮತ್ತು ಧರ್ಮ ಪ್ರಚಾರಕರಾದ ಸುಪ್ರಶವ್, ಚಂದ್ರಪ್ರಭು, ಪರ್ಶವಂತ್, ಶ್ರೇಯಸ್ ಮತ್ತು ಪರ್ಶ್ವ ಅವರ ಹುಟ್ಟೂರಾಗಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಮೂರು ಕಿ.ಮೀ. ಮತ್ತು ವಾರಣಾಸಿ ಬೇಲಾಪುರದ ಬನಾರಸ್ ಕಂಟೊನ್ಮೆಂಟ್ ನಲ್ಲಿರುವ ಶ್ರೀ ಪಾರ್ಶನಾಥ ದಿಗಂಬರ ಜೈನ ತೀರ್ಥ ಕ್ಷೇತ್ರದಿಂದ ನಾಲ್ಕು ಕಿ.ಮೀ. ದೂರದಲ್ಲಿದೆ.ಈ ಮಂದಿರವು ಜೈನರ 23ನೇ ತೀರ್ಥಂಕರ ಭಗವಾನ್ ಪಾರ್ಶ್ವನಾಥ ಅವರಿಗೆ ಸಮರ್ಪಿಸಲಾಗಿದೆ. ಪಾರ್ಶ್ಚನಾಥ ಅವರು ಕ್ರಿ.ಶ. 800ರಲ್ಲಿ ವಾರಣಾಸಿಯಲ್ಲಿ ಜನಿಸಿದ್ದರು. ಮಂದಿರಕ್ಕೆ ಭೇಟಿ ನೀಡಿದರೆ ಕಣ್ಣಿಗೆ ಹಬ್ಬ. ಅಲ್ಲಿನ ಪ್ರಕಾಶಮಾನವಾದ ಚಿನ್ನ ಲೇಪಿತ ಗೋಪುರಗಳು ದೂರದಿಂದಲೇ ಎಲ್ಲರ ಗಮನಸೆಳೆಯುತ್ತದೆ.
ಮಂದಿರ ಒಳಗೆ ಪ್ರವೇಶಿಸುತ್ತಿರುವಂತೆ ಮನಸ್ಸಿಗೆ ಶಾಂತಿ ಹಾಗೂ ಪ್ರಶಾಂತತೆ ಸಿಕ್ಕಿದಂತಾಗುತ್ತದೆ. ವರ್ಷದ ಯಾವುದೇ ಸಮಯದಲ್ಲೂ ಈ ಮಂದಿರಕ್ಕೆ ಭೇಟಿ ನೀಡಬಹುದು. ಆದಾಗ್ಯೂ ಜನವರಿ ಮೊದಲ ವಾರದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಉತ್ತಮ.


Click it and Unblock the Notifications