ಇಂದಿರಾ ಗಾಂಧಿ ಅಭಯಾರಣ್ಯ ಪ್ರದೇಶದಲ್ಲಿ ಈ ಗ್ರಾಸ್ ಹಿಲ್ಸ್ ಇದೆ ಮತ್ತು ವಾಲ್ಪಾರೈನಿಂದ ಸುಮಾರು 15 ಕಿ.ಮೀ. ಪ್ರಯಾಣಿಸಿದರೆ ಇಲ್ಲಿಗೆ ತಲುಪಬಹುದು. ಅಭಯಾರಣ್ಯದ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯದೆ ಗ್ರಾಸ್ ಹಿಲ್ಸ್ ಗೆ ಪ್ರವೇಶಿಸುವಂತಿಲ್ಲ. ವಾಲ್ಪಾರೈಗೆ ಭೇಟಿ ನೀಡಿದರೆ ಇಲ್ಲಿಗೆ ಭೇಟಿ ನೀಡಲೇ ಬೇಕು. ರಕ್ಷಿತಾರಣ್ಯವಾಗಿರುವ ಇಲ್ಲಿ ಪ್ರಾಣಿ ಹಾಗೂ ಸಸ್ಯಗಳನ್ನು ಪ್ರಕೃತಿ ಸಹಜವಾಗಿ ರಕ್ಷಿಸಲಾಗುತ್ತಿದೆ.
ಇಲ್ಲಿನ ಹಸಿರು ಪರಿಸರ ಮತ್ತು ಬೆಟ್ಟ ಮತ್ತು ದಟ್ಟ ಕಾನನದ ಸೊಬಗನ್ನು ನೋಡಬಹುದು. ಜನವರಿ ಮತ್ತು ಮೇ ಮಧ್ಯೆ ಇಲ್ಲಿಗೆ ಭೇಟಿ ನೀಡಬೇಕು. ಈ ಗ್ರಾಸ್ ಹಿಲ್ ಸಮುದ್ರ ಮಟ್ಟಕ್ಕಿಂತ ಸುಮಾರು 2400 ಕಿ.ಮೀ. ಎತ್ತರದಲ್ಲಿದೆ.


Click it and Unblock the Notifications