Search
  • Follow NativePlanet
Share
ಮುಖಪುಟ » ಸ್ಥಳಗಳು » ವಾಲ್ಪಾರೈ » ಹವಾಮಾನ

ವಾಲ್ಪಾರೈ ಹವಾಮಾನ

ಬೇಸಿಗೆಗಾಲ

ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶ 15-25 ಡಿಗ್ರಿತನಕವಿರುತ್ತದೆ. ಮಾರ್ಚ್ ನಿಂದ ಮೇ ತನಕ ಬೇಸಿಗೆ ಕಾಲವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಮನ್ಸೂನ್ ನಲ್ಲಿ ಅಧಿಕ ಮಳೆಯಾಗುವ ಕಾರಣ ಬೇಸಿಗೆ ಕಾಲ ಪ್ರಶಸ್ತವಾಗಿದೆ.

ಮಳೆಗಾಲ

ಮಳೆಗಾಲದಲ್ಲಿ ಇಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಈ ಸಮಯದಲ್ಲಿ ತಾಪಮಾನ 15 ಡಿಗ್ರಿಗಿಂತ ಕಡಿಮೆಯಿರುತ್ತದೆ. ಮಾನ್ಸೂನ್ ನಲ್ಲಿ 350-500 ಸೆ.ಮೀ.ತನಕ ಮಳೆಯಾಗುತ್ತದೆ. ಉತ್ಸಾಹಿ ಪ್ರವಾಸಿಗಳು ಈ ಸಮಯದಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಜಲಪಾತಗಳನ್ನು ಈ ಸಮಯದಲ್ಲಿ ನೋಡುವುದೇ ಕಣ್ಣೆಗೆ ಅಂದ.

ಚಳಿಗಾಲ

ಚಳಿಗಾಲದಲ್ಲಿ ತಾಪಮಾನ ಶೂನ್ಯ ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ. ಈ ಸಮಯದಲ್ಲಿ ತಾಪಮಾನ 0-10ತನಕ ಇರುತ್ತದೆ. ಚಳಿಗಾಲದಲ್ಲಿ ವಾಲ್ಪಾರೈಗೆ ಭೇಟಿ ನೀಡದಿರುವುದೇ ಒಳ್ಳೆಯದು. ಈ ವೇಳೆ ಪ್ರಯಾಣಿಸಿದರೆ ಚಳಿಯಿಂದಾಗಿ ಪ್ರವಾಸಿ ತಾಣಗಳನ್ನು ನೋಡುವುದು ಕಷ್ಟವಾಗಬಹುದು. ಮಾರ್ಚ್ ಮತ್ತು ಮೇ ಮಧ್ಯೆ ವಾಲ್ಪಾರೈಗೆ ಪ್ರಯಾಣಿಸಲು ಸೂಕ್ತ ಸಮಯ.