ವಾಲ್ಪಾರೈನಿಂದ ಕೇವಲ 10 ಕಿ.ಮೀ. ದೂರದಲ್ಲಿ ಬಾಲಾಜಿ ಮಂದಿರವಿದೆ. ಪೆರಿಯಾ ಕರ್ಮಲೈ ಟೀ ಇಂಡಸ್ಟ್ರೀಸ್ ನ ಮಾಲಕತ್ವದಲ್ಲಿರುವ ಟೀ ತೋಟದ ನಡುವೆ ಈ ದೇವಸ್ಥಾನವಿದೆ. ಪ್ರವಾಸಿಗಳು ಮಾತ್ರವಲ್ಲದೆ ಭಕ್ತಾದಿಗಳು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ವಾಲ್ಪಾರೈನಲ್ಲಿರುವ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಬಾಲಾಜಿ ಮಂದಿರವೂ ಒಂದು. ಕೊಯಮತ್ತೂರಿನಿಂದ 30 ಕಿ.ಮೀ. ದೂರದಲ್ಲಿ ಬಾಲಾಜಿ ಮಂದಿರವಿದೆ.
ಈ ಮಂದಿರದಲ್ಲಿ ಭಗವಾನ್ ವಿಷ್ಣುವನ್ನು ಬಾಲಾಜಿಯೆಂದು ಪೂಜಿಸಲಾಗುತ್ತದೆ. ಟೀ ತೋಟದ ನಡುವೆ ಈ ದೇವಸ್ಥಾನವೂ ಎದ್ದುಕಾಣುತ್ತದೆ. ದೇವಸ್ಥಾನದ ಒಳಗಡೆ ಫೋಟೊಗ್ರಾಪಿ ಮತ್ತು ಮೊಬೈಲ್ ಫೋನ್ ನಿಷಿದ್ಧ. ತಿರುಪತಿ ಬಾಲಾಜಿ ಮಂದಿರದಂತೆ ಇಲ್ಲಿ ಕೂಡ ತಪ್ಪದೆ ಪೂಜೆ ನಡೆಯುತ್ತಿರುತ್ತದೆ. ಮಂದಿರದ ಪ್ರವೇಶದ್ವಾರದ ಬಳಿಕ ವಾಹನಗಳಿಗೆ ಪ್ರವೇಶವಿಲ್ಲದ ಕಾರಣ ದೇವಸ್ಥಾನಕ್ಕೆ ಅರ್ಧ ಕಿ.ಮೀ. ಪಾದಯಾತ್ರೆ ಮಾಡಬೇಕಾಗುತ್ತದೆ.


Click it and Unblock the Notifications