ಕೆರೆಯಿಂದ ಹೊರಬರುವ ಒಂದು ಸಣ್ಣ ತೊರೆಯೇ ಇಲ್ಲಿನ ಜಲಪಾತ. ಈ ಪ್ರವಾಹವು ದಟ್ಟ ಅರಣ್ಯವನ್ನು ಹೊಂದಿರುವ ಇಳಿಜಾರಿನಲ್ಲಿ ಹರಿದು ಪ್ರವಾಸಿಗರಿಗೆ ಸುಂದರವಾದ ನೋಟವನ್ನು ನೀಡುತ್ತದೆ. ಚಾರಣಿಗರಿಗೆ ಈ ದಾರಿಯು ಅತ್ಯಂತ ಇಷ್ಟವಾದದ್ದು. ಈ ಜಲಪಾತವು ತೀರಾ ಮೇಲಿನಿಂದ ಬೀಳುವಂಥದ್ದಲ್ಲ, ಆದರೆ ಇಲ್ಲಿನ ಸುಂದರವಾದ ಸನ್ನಿವೇಶವು ಕಣ್ಣಿಗೆ ಮುದಗೊಳಿಸುತ್ತದೆ. ನಿಮ್ಮ ಎಲ್ಲಾ ಚಿಂತೆಗಳನ್ನು ಮರೆತು ನಿರಾಳವಾಗುವುದಕ್ಕೆ ಇದು ಸೂಕ್ತ ತಾಣ. ವಾಗಮೋನಕ್ಕೆ ಭೇಟಿ ನೀಡುವಾಗ ವಾಗಮೋನ್ ಜಲಪಾತವನ್ನೂ ನೋಡಿಬಂದರೆ ನೆನಪು ಚಿರಾಯು.


Click it and Unblock the Notifications