ವಗಮೋನ್‌ನಲ್ಲಿರುವ ಇನ್ನೊಂದು ಆಕರ್ಷಕ ತಾಣ ಥಂಗಲ್ ಪಾರಾ. ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಇದೊಂದು ಪ್ರಮುಖ ಧಾರ್ಮಿಕ ಕೇಂದ್ರ. ಇಲ್ಲೊಂದು ದೊಡ್ಡ ಗೋಲಾಕಾರದ ಕಲ್ಲಿದ್ದು, ಇದರ ಮೇಲೆ ಶೇಖ್ ಫರೀದುದ್ದೀನ್‌ರ ಸಮಾಧಿಯಿದೆ. ಉರುಸ್ ಆಚರಣೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯ ನಂಬಿಕೆಯ ಪ್ರಕಾರ ಅಫಘಾನ್‌ದ ಸೂಫಿ ಸಂತ ನೂರಾರು ವರ್ಷಗಳ ಹಿಂದೆ ಇಲ್ಲಿದ್ದ ಎಂದು ನಂಬಲಾಗಿದೆ. ಇದಕ್ಕೆ ಸಮೀಪದಲ್ಲೇ ಒಂದು ಪುರಾತನ ಗುಹೆಯಿದೆ. ಪುರಾತನ ಕಾಲದಲ್ಲಿ ಇಲ್ಲಿ ಜನರು ವಾಸಿಸುತ್ತಿದ್ದರು ಎಂದು ಹೇಳಲಾಗಿದೆ. ಥಂಗಲ್ ಪಾರಾಗೆ ಭೇಟಿ ನೀಡಿ, ಇಲ್ಲಿನ ಗುಹೆಯಲ್ಲಿ ಹೊಕ್ಕು ಹೊರಬಂದರೆ ನೀವು ಒಂದು ಅದ್ಭುತ ಜಗತ್ತಿನಿಂದ ಹೊರಬಂದಂತೆ ಭಾವಿಸುತ್ತೀರಿ.


Click it and Unblock the Notifications