ವಧವನ ಜವುಗು ಪ್ರದೇಶ ಮತ್ತು ಪರಿಸರ ಶಿಬಿರತಾಣವು ನೀರಾವರಿ ಜಲಾಶಯವಾಗಿದ್ದು, ಇದು ಸುತ್ತಲಿನ 25 ಗ್ರಾಮಗಳಿಗೆ ನೀರನ್ನು ಒದಗಿಸುತ್ತದೆ. ಜಲಾಶಯ ಮತ್ತು ಜವುಗು ಭೂಮಿ ದಾಭೊಯಿಯಿಂದ 10 ಕಿ.ಮೀ. ದೂರದಲ್ಲಿದೆ. ಸ್ಟಾಕ್, ಕಡಲಕಾಗೆ, ಐಬಿಸ್ ಮತ್ತು ಚಮಚಕೊಕ್ಕಿನ ಹಕ್ಕಿಗಳ ಸಹಿತ ಹಲವಾರು ವಿಧದ ಪ್ರಭೇದದ ಪಕ್ಷಿಗಳಿಂದ ಈ ತಾಣವು ಪಕ್ಷಿಪ್ರಿಯರ ಜನಪ್ರಿಯ ತಾಣವಾಗಿದೆ.
ಜವುಗು ಪ್ರದೇಶದೊಂದಿಗೆ ಇದು ಪರಿಸರ ಪ್ರವಾಸೋದ್ಯಮ ಬೀಡುತಾಣವಾಗಿದೆ. ವಿಶ್ವದೆಲ್ಲೆಡೆಯಿಂದ ಇಲ್ಲಿಗೆ ವಲಸೆ ಬರುವ ಪಕ್ಷಿಗಳನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications