Search
  • Follow NativePlanet
Share
ಮುಖಪುಟ » ಸ್ಥಳಗಳು » ವಡೋದರಾ » ಆಕರ್ಷಣೆಗಳು » ಅರಮನೆಗಳು

ಅರಮನೆಗಳು, ವಡೋದರಾ

5

ಲಕ್ಷ್ಮೀ ವಿಲಾಸ ಅರಮನೆ

1890ರಲ್ಲಿ ಮಹಾರಾಜ ಸಯಜಿರಾವ್ ಆಡಳಿತಾವಧಿಯಲ್ಲಿ ಈ ಅರಮನೆ ನಿರ್ಮಿಸಲಾಗಿತ್ತು. ಅರಮನೆ ನಿರ್ಮಾಣಕ್ಕೆ ಆತ ಮೇಜರ್ ಚಾರ್ಲ್ಸ್ ಮಂತ್ ಎಂಬವರನ್ನು ನೇಮಿಸಿದ್ದ. ಆದರೆ ಇದರ ನಿರ್ಮಾಣವನ್ನು ಆರ್. ಎಫ್. ಚಿಸ್ಲೊಮ್ ಪೂರ್ಣಗೊಳಿಸಿದ. ಇಂಡೋ-ಸ್ಯಾರಸೆನಿಕ್ಶೈಲಿ ಸಂಪ್ರದಾಯದಂತೆ ನಿರ್ಮಾಣವಾಗಿರುವ ಇದರ ವಾಸ್ತುಶಿಲ್ಪವು ಭಾರತೀಯ, ಇಸ್ಲಾಮಿಕ್ ಮತ್ತು ಯುರೋಪಿಯನ್ ಅಂಶಗಳನ್ನು ಒಳಗೊಂಡಿದೆ.

ಮೊಸಾಯಿಕ್ ಟೈಲ್ಸ್, ವಿವಿಧ ಬಣ್ಣಗಳ ಮಾರ್ಬಲ್ ಗಳು, ಹಲವಾರು ವಿಧದ ಕಲಾಕೃತಿಗಳು, ಮರ ಹಾಗೂ ಕಾರಂಜಿಗಳನ್ನು ಒಳಗೊಂಡಿರುವ ಪ್ರವೇಶದ್ವಾರವು ಅರಮನೆಗೆ ಭೇಟಿ ನೀಡಿದಾಗ ಸಿಗುವ ವಾಸ್ತುಶಿಲ್ಪದ ಅದ್ಭುತ. ಅಂದಿನ ಕಾಲದಲ್ಲೂ ಈ ಅರಮನೆಯಲ್ಲಿ ಲಿಫ್ಟ್ ಗಳ ವ್ಯವಸ್ಥೆಯಿತ್ತು. ದರ್ಬಾರ್ ಹಾಲ್ ನಲ್ಲಿರುವ ಕಂಚಿನ ಪ್ರತಿಮೆಗಳು, ಫೆಲಿಸಿಯ ಮಾರ್ಬಲ್ ಮತ್ತು ಟೆರಾಕೋಟಾ, ವಿಲಿಯಮ್ ಗೋಲ್ಡರಿಂಗ್ ಮಾಡಿರುವಂತಹ ಉದ್ಯಾನ ಪ್ರತಿಯೊಬ್ಬ ಪ್ರವಾಸಿಗರಿಗೆ ಖುಷಿ ನೀಡಲಿದೆ.

ಅರಮನೆಯ ಆವರಣದಲ್ಲಿರುವ ಮೋತಿ ಬಾಗ್ ಅರಮನೆ ಮತ್ತು ಮಹಾರಾಜ ಫತೇಹ ಸಿಂಗ್ ಮ್ಯೂಸಿಯಂ ನೋಡಲು ಯೋಗ್ಯ. ಮೋತಿ ಬಾಗ್ ಅರಮನೆಗೆ ಹೊಂದಿಕೊಂಡು ಮೋತಿ ಬಾಗ್ ಕ್ರಿಕೆಟ್ ಮೈದಾನವಿದ್ದು, ಇದರಲ್ಲಿ ಅಪರೂಪದ ಒಳಾಂಗಣ ಟೆನಿಸ್ ಕೋರ್ಟ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ಇದೆ.

ಮಹಾರಾಜ ಫತೇಹ್ ಸಿಂಗ್ ಮ್ಯೂಸಿಯಂ ರಾಜಾ ರವಿ ವರ್ಮ ಅವರ ವರ್ಣಚಿತ್ರಗಳ ಅಗಾಧ ಸಂಗ್ರಹವನ್ನು ಹೊಂದಿದ್ದು, ಇದನ್ನು ಮಹಾರಾಜರೇ ನಿಯೋಜಿಸಿರುವುದು ವಿಶೇಷ. ಮ್ಯೂಸಿಯಂನಲ್ಲಿ ಮಾರ್ಬಲ್ ಮತ್ತು ಕಂಚಿನಿಂದ ಮಾಡಲ್ಪಟ್ಟಿರುವ ಜಪಾನ್, ಚೀನಾ ಮತ್ತು ಇಟಾಲಿಯನ್ ಮಾದರಿಯ ಶಿಲ್ಪಗಳಿವೆ. ಮಹಾರಾಜರೇ ನೆರೆಯ ರಾಷ್ಟ್ರಗಳಿಂದ ಸಂಗ್ರಹಿಸಿದ್ದ ಚೀನಾ ಮತ್ತು ಜಪಾನಿ ಶಿಲ್ಪಗಳಿವೆ.

ಇಟಾಲಿಯನ್ ಶಿಲ್ಪಗಳನ್ನು ಇಟಾಲಿಯನ್ ಶಿಲ್ಪಿ ಫೆಲಿಸಿ ಅವರು ನಿಯೋಜಿಸಿದ್ದರು. ಅರಮನೆಗೆ ಭೇಟಿ ನೀಡುವ ಮೊದಲು ಅರಮನೆ ಕಚೇರಿಯಲ್ಲಿರುವ ಮಹಾರಾಜದ ಕಾರ್ಯದರ್ಶಿಯಿಂದ ಅನುಮತಿ ಪಡೆಯಬೇಕು.

ನಝರ್ ಬಾಗ್ ಅರಮನೆ

ಬಿಳಿಗಾರೆಗಳಿಂದ ಮಾಡಲ್ಪಟ್ಟಿರುವ ನಝರ್ ಬಾಗ್ ಅರಮನೆಯು ರಾಜಕುಟುಂಬದ ಅತಿಥಿ ಗೃಹ. ರಾಜಕುಟುಂಬದ ವಂಶಸ್ಥರು ಈಗ ಈ ಮನೆಯಲ್ಲಿದ್ದಾರೆ. 1721ರಲ್ಲಿ ನಿರ್ಮಿಸಲಾಗಿರುವ  ಈ ಅರಮನೆಯಲ್ಲಿ ಸರ್ಣ ಮತ್ತು ಬೆಳ್ಳಿ ಖಚಿತ ಕೋವಿಗಳಿವೆ. ದಕ್ಷಿಣದ ವಜ್ರ ಖಚಿತ ನೆಕ್ಲೇಸ್ ನ್ನು ಒಳಗೊಂಡಿರುವ ಅರಮನೆಯು ಗಾಯಕ್ವಾಡ್ ರಾಜಕುಟುಂಬದ ರತ್ನವಿದ್ದಂತೆ. ಬೆಲೆಬಾಳುವ ಹರಳುಗಳು ಮತ್ತು ರತ್ನಗಳನ್ನು ಹೊಂದಿರುವ ವಸ್ತ್ರಾಭರಣಗಳನ್ನು ಇಲ್ಲಿ ಸಂಗ್ರಹಿಸಡಲಾಗಿದೆ.

ಮಕರ್ಪುರ ಅರಮನೆ

ಇಟಾಲಿಯನ್ ಮಾದರಿಯಲ್ಲಿ 1870ರಲ್ಲಿ ಮಹಾರಾಜ ಖೆಂಡೆ ರಾವ್ ನಿರ್ಮಿಸಿರುವ ಅರಮನೆ ರಾಜಕುಟುಂಬದ ಬೇಸಿಗೆಯ ಅರಮನೆ. ಮಹಾರಾಜ ಮೂರನೇ ಸಯಜಿರಾವ್ ಗಾಯಕ್ವಾಡ್ ಅರಮನೆಯನ್ನು ತನ್ನ ಆಳಿತಾವಧಿಯಲ್ಲಿ ನವೀಕರಿಸಿದ ಬಳಿಕ ಇಂದು ಇದನ್ನು ಭಾರತೀಯ ವಾಯು ಸೇನೆ ತರಬೇತಿ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ. ಅರಮನೆಗೆ ಈಗ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ ಮೂರು ಅಂತಸ್ತಿನ ಈ ಅರಮನೆಯನ್ನು ಹೊರಗಿನಿಂದ ನೋಡುವುದೇ ಕಣ್ಣಿಗೊಂದು ಆನಂದ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed