ತಾಂಬೇಕರ್ ವಾಡ
ಈ ಕಟ್ಟಡವು ಒಂದು ಕಾಲದಲ್ಲಿ ವಡೋದರದ ದಿವಾನರ ಮನೆಯಾಗಿತ್ತು. ಇಂದು ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಈ ಕಟ್ಟಡದಲ್ಲಿ 19ನೇ ಶತಮಾನದಲ್ಲಿ ಮಾರಾಠ ಶೈಲಿಯಲ್ಲಿ ಮಾಡಿದಂತಹ ವರ್ಣಚಿತ್ರಗಳಿವೆ. ಇದರಲ್ಲಿರುವ ವರ್ಣಚಿತ್ರಗಳು ಮಹಾರಾಷ್ಟ್ರ, ಶ್ರೀಕೃಷ್ಣನ ಜೀವನ ಮತ್ತು ಆಂಗ್ಲೋ ಮರಾಠ ಯುದ್ಧದ ಬಗ್ಗೆ ಇದೆ.
ಕೀರ್ತಿ ಮಂದಿರ
1936ರಲ್ಲಿ ಮಹಾರಾಜ ಸಯಜಿರಾವ್ ತನ್ನ 75ನೇ ಹುಟ್ಟುಹಬ್ಬದ ವೇಳೆ ತನ್ನ ಪೂರ್ವಿಕರನ್ನು ವೈಭವೀಕರಿಸುವ ಸಲುವಾಗಿ ಕಟ್ಟಿದ ರಾಜ ಸಮಾಧಿಯೇ ಈ ಕೀರ್ತಿ ಮಂದಿರ. ಅವಿಭಜಿತ ಭಾರತದ ನಕ್ಷೆಯೊಂದಿಗೆ ಕಟ್ಟಡದ ಮೇಲ್ಭಾಗವನ್ನು ಸೂರ್ಯ, ಚಂದ್ರ ಮತ್ತು ಭೂಮಿಯ ಕಂಚಿನ ಫಲಕಗಳಿಂದ ಶೃಂಗರಿಸಲಾಗಿದೆ. ಪ್ರಸಿದ್ಧ ಚಿತ್ರಕಲಾವಿದರಾದ ಶಾಂತಿನಿಕೇತನ, ನಂದಲಾಲ ಬೋಸ್ ಅವರು ಮಾಡಿದಂತಹ ಭಿತ್ರಿಚಿತ್ರಗಳು ಕಟ್ಟಡದಲ್ಲಿದೆ. ಈ ಭಿತ್ತಿಚಿತ್ರಗಳು ಮಹಾಭಾರತ ಮತ್ತು ಮಿರಾಬಾಯಿಯ ಜೀವನದ ಬಗ್ಗೆ ಇದೆ.
ಖುತ್ಬುದ್ದೀನ್ ಹಾಜಿರಾ
ಖುತ್ಬುದ್ದೀನ್ ಹಾಜಿರಾವು ಖುತ್ಬುದ್ದೀನ್ ಮುಹಮ್ಮದ್ ಖಾನ್ ಮತ್ತು ಆತನ ಮಗ ನೌರಂಗ್ ಖಾನ್ ನ ಸಮಾಧಿ. ಅವರು ಮುಘಲ್ ದೊರೆ ಅಕ್ಬರ್ ನ ಜನರಲ್ ಗಳು ಮತ್ತು ಸ್ಥಳೀಯ ಗವರ್ನರ್ ಗಳಾಗಿದ್ದರು. ಈ ಸಮಾಧಿಯನ್ನು 1586ರಲ್ಲಿ ನಿರ್ಮಿಸಲಾಗಿತ್ತು. ಕಟ್ಟಡದೊಳಗೆ ಸುಂದರ ಕೆತ್ತನೆಗಳಿರುವ ಕಲ್ಲಿನ ಕಿಟಕಿಗಳು ಮತ್ತು ಮೆಟ್ಟಿಲುಗಳಿಗರುವ ಬಾವಿಯಿದೆ. ಇದು ವಡೋದರ ನಗರದಲ್ಲಿರುವ ಅತ್ಯಂತ ಪ್ರಾಚೀನ ಮುಘಲ್ ವಾಸ್ತುಶಿಲ್ಪ ಹೊಂದಿರುವ ಕಟ್ಟಡ.
ನ್ಯಾಯ ಮಂದಿರ
ನ್ಯಾಯ ಮಂದಿರ ಅಥವಾ `ನ್ಯಾಯಾಧೀಶರ ದೇವಾಲಯ'ವು ವಡೋದರ ನಗರದ ಜಿಲ್ಲಾ ಸೆಷನ್ ಕೋರ್ಟ್ ನ್ನು ಹೊಂದಿದೆ. ಬೈಜಂಟೈನ್ ವಾಸ್ತುಶಿಲ್ಪ ಮಾದರಿಯಲ್ಲಿರುವ ಈ ಕಟ್ಟಡವನ್ನು ಮಹಾರಾಜ ಮೂರನೇ ಸಯಜಿರಾವ್ ಗಾಯಕ್ವಾಡ್ ನ ಪತ್ನಿ ಚಿಮ್ನಾಬಾಯಿ ನೆನಪಿಗಾಗಿ ಕಟ್ಟಲಾಗಿದೆ. ಹಾಲ್ ನ ಮಧ್ಯಭಾಗದಲ್ಲಿರುವ ಮಹಾರಾಣಿಯ ಮೂರ್ತಿಯನ್ನು ಬೈಜಂಟೈನ್ ಶೈಲಿಯ ಮೊಸಾಯಿಕ್ ಟೈಲ್ಸ್ ನಿಂದ ಶೃಂಗರಿಸಲಾಗಿದೆ.


Click it and Unblock the Notifications