ಹಿಂದೆ ದರ್ಭಾವತಿ ಎಂದು ಕರೆಯಲ್ಪಡುತ್ತಿದ್ದ ದಾಭೊಯಿ ವಡೋದರದ ಒಂದು ನಗರ. ಪ್ರಾಚೀನ ಕೋಟೆಯ ಈ ಪಟ್ಟಣ ಜೈನರ ಗ್ರಂಥ ಗಿರ್ನಾರ್ ನಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದೆ. ದಾಭೊಯಿ ಕೋಟೆ ಹಿಂದೂ ಸೇನೆಯ ವಾಸ್ತುಶಿಲ್ಪಕ್ಕೆ ಜೀವಂತ ಸಾಕ್ಷಿಯಾಗಿದೆ.
ಪೂರ್ವದಲ್ಲಿ ಹಿರಾ ಭಾಗೊಲಾ, ಪಶ್ಚಿಮದಲ್ಲಿ ವಡೋದರಾ ಗೇಟ್, ಉತ್ತರದಲ್ಲಿ ಚಂಪನೇರ್ ಗೇಟ್ ಮತ್ತು ದಕ್ಷಿಣದಲ್ಲಿ ನಾನಡೊಡ್ ಗೇಟ್ ಸಹಿತ ನಗರಕ್ಕೆ ನಾಲ್ಕು ಗೇಟ್ ಗಳಿವೆ. ಜೈನ ಯಾತ್ರಾರ್ಥಿಗಳಿಗೆ ಪ್ರಮುಖ ಕೇಂದ್ರವಾಗಿರುವ ನಗರದಲ್ಲಿ ಆರು ಮಂದಿರಗಳಿವೆ. ಶ್ರೀ ಲೋಧನ್ ಪಾರ್ಶ್ವನಾಥ ಮಂದಿರ ಇಲ್ಲಿನ ಪ್ರಮುಖ ಆಕರ್ಷಣೆ.


Click it and Unblock the Notifications