ಶನಿ ದೇವಾಲಯವು ಉತ್ತರಕಾಶಿಯ ಕರಸಲಿ ಹಳ್ಳಿಯಲ್ಲಿದೆ. ಇದು ಶನಿ ದೇವರಿಗೆ ಮೀಸಲಾಗಿರುವ ದೇಗುಲ. ಪುರಾಣಗಳ ಪ್ರಕಾರ, ಈ ಶನಿದೇವರು, ದೇವಿ ಯಮುನೆಯ ಸಹೋದರ. ಈ ದೇವಾಲಯವು ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿದೆ. ಕಲ್ಲು ಹಾಗೂ ಮರವನ್ನು ಬಳಸಿ ಐದು ಮಹಡಿಯ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಷ್ಟು ಎತ್ತರ ಹಾಗೂ ಅಪಾಯಕಾರಿ ಸ್ಥಳದಲ್ಲಿ ದೇವಾಲಯಕ್ಕೆ ನೆರೆ ಬಂದು ಯಾವುದೇ ಹಾನಿ ಆಗದಿರಲಿ ಅನ್ನುವ ಕಾರಣಕ್ಕೆ ಮರದ ಆಧಾರ ನೀಡಲಾಗಿದೆ. ಶನಿ ದೇವರ ಕಂಚಿನ ಪ್ರತಿಮೆ ಐದನೇ ಮಹಡಿಯಲ್ಲಿ ಸ್ಥಾಪಿತವಾಗಿದೆ.


Click it and Unblock the Notifications