ಉನಾದ ಬಾಹಿ ಹಳ್ಳಿಯಲ್ಲಿದೆ ಈ ಪುರಾಣ ಪ್ರಸಿದ್ಧ ಧ್ಯೂನ್ಸರ್ ಮಹಾದೇವ ದೇವಾಲಯ. ಪುರಾಣದ ಪ್ರಕಾರ, ಮಹಾಭಾರತದಲ್ಲಿ ಬರುವ ಪಾಂಡವರ ಕುಟುಂಬದ ಪುರೋಹಿತರಾದ ಧೌಮ್ಯ ಋಷಿ ಇಲ್ಲಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿ ನಂತರ ಇಲ್ಲಿಯೇ ಕುಳಿತು ಹಿಂದು ದೇವರಾದ ಶಿವನ ಕುರಿತು ತಪಸ್ಸು ಮಾಡಿದರು. ಶಿವ ಇವರ ಪ್ರಾರ್ಥನೆಗೆ ಸಂತುಷ್ಟನಾಗಿ ಪ್ರತ್ಯಕ್ಷನಾಗಿ ಆಶೀರ್ವದಿಸಿದ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಅವರ ಭಕ್ತರು ಇಲ್ಲಿ ಋಷಿಯನ್ನು ಆರಾಧಿಸುತ್ತಾರೆ. ಅಲ್ಲದೆ ಇಲ್ಲಿ ಬೇಡಿಕೊಂಡ ಆಸೆ ಈಡೇರುತ್ತದೆ ಎಂದೂ ಕೂಡ ನಂಬಲಾಗುತ್ತದೆ. ಶಿವ ಆಶೀರ್ವದಿಸಿದ ದಿನದಿಂದ ಈ ತಾಣ 'ಧೌಮ್ಯೇಶ್ವರ ಸದಾಶಿವ ತೀರಥ್' ಎಂದು ಕರೆಸಿಕೊಂಡಿತು. ಇದೇ ಈಗ ಬದಲಾಗಿ ಧ್ಯೂನ್ಸರ್ ಮಹಾದೇವ ಅನ್ನಿಸಿಕೊಂಡಿದೆ.
ಈ ದೇವಾಲಯವನ್ನು 50 ವರ್ಷಗಳ ಹಿಂದೆ ನವೀಕರಿಸಲಾಗಿದೆ. ಈ ಕಾರ್ಯವನ್ನು ಉತ್ತರಕಾಶಿಯ ಸಂತ ಸ್ವಾಮಿ ಆನಂದ ಗಿರಿ ನೆರವೇರಿಸಿಕೊಟ್ಟಿದ್ದಾರೆ.ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ಹಿಂದುಗಳ ಆಚರಣೆ ಅದ್ದೂರಿಯಾಗಿ ನಡೆಯುತ್ತದೆ. ಭಕ್ತರು ದೇಗುಲಕ್ಕೆ ಭೇಟಿ ನೀಡಿ ಇಲ್ಲಿರುವ ಶಿವಲಿಂಗಕ್ಕೆ ಹಾಲು, ಬೆಣ್ಣೆ ಅರ್ಪಿಸುತ್ತಾರೆ. ಇದೆ ಸಂದರ್ಭ ಇಲ್ಲಿ ಜಾತ್ರೆಯೂ ನಡೆಯುತ್ತದೆ. ಇದು ಕೂಡ ಭಕ್ತರಲ್ಲಿ ಅಪಾರ ಜನಪ್ರಿಯತೆ ಪಡೆದಿದೆ. ಭಕ್ತರ ಅನುಕೂಲಕ್ಕಾಗಿ ಇಲ್ಲಿ ಸೇರಸ್ ಎಂಬ ವಿಶ್ರಾಂತಿ ತಾಣವೂ ಇದೆ. ಅಲ್ಲದೆ, ದೇಗುಲ ಆವರಣದಲ್ಲಿಯೆ ಭಕ್ತರ ಬಳಕೆಗಾಗಿ ನೀರಿನ ಟ್ಯಾಂಕ್ ಸಹ ಇದೆ.


Click it and Unblock the Notifications