ಉಖ್ರುಲ್ ಜಿಲ್ಲೆಯಲ್ಲಿ ಡಂಕನ್ ಉದ್ಯಾನವನ ಅತಿ ದೊಡ್ಡ ಉದ್ಯಾನವನವಾಗಿದೆ. ಉಖ್ರುಲ್ ಜಿಲ್ಲೆಯ ಕೇಂದ್ರ ಕಾರ್ಯಾಲಯವಾದ ಪುಂಗ್ರಯ್ ನಿಂದ 3 ಕಿ ಮೀ ದೂರದಲ್ಲಿದೆ. 1984 ರಲ್ಲಿ ಇದನ್ನು ತೆರೆಯಲಾಯಿತು. ಇದರ ಒಳಗಿರುವ ಮಕ್ಕಳ ಪಾರ್ಕ್ ಯಾವಾಗಲು ಜನರಿಂದ ತುಂಬಿರುತ್ತದೆ ಮತ್ತು ಸ್ಥಳೀಯರು ಜಾಗಕ್ಕಾಗಿ ಕಾಯುತ್ತಿರುತ್ತಾರೆ.
ಆದರೆ ಕೆಲವು ವರ್ಷಗಳಿಂದ ನಿರ್ವಹಣೆ ಸಾದ್ಯವಾಗದ್ದರಿಂದ ಉದ್ಯಾನವನ ಪೂರ್ಣವಾಗಿ ಹದಗೆಟ್ಟಿದೆ. ಸರ್ಕಾರ ಕೂಡ ಕ್ರಮ ಕೈಗೊಳ್ಳಲು ಮುಂದೆ ಬಂದಿರಲಿಲ್ಲ. ಈಗ ಮತ್ತೆ ಉದ್ಯಾನವನವನ್ನು ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯರು ಕ್ರಮ ಕೈಗೊಂಡು ಅಭಿವೃದ್ದಿ ಪಡಿಸುವಂತೆ ಕೇಳಿಕೊಳ್ಳುತ್ತಲೇ ಇದ್ದಾರೆ. ಉದ್ಯಾನವನದಲ್ಲಿ ಮರಗಳನ್ನು ನೆಡಬೇಕು ಎಂದು ಕೂಡ ಹಲವರು ಕೇಳಿಕೊಂಡಿದ್ದಾರೆ.


Click it and Unblock the Notifications