Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಪಡುಬಿದ್ರಿ – ಮಹಾಗಣಪತಿ ದೇವಸ್ಥಾನ

ಪಡುಬಿದ್ರಿ – ಮಹಾಗಣಪತಿ ದೇವಸ್ಥಾನ, ಉಡುಪಿ

0

ಪಡುಬಿದ್ರಿಯು ಉಡುಪಿಯಲ್ಲೇ ಸಣ್ಣದಾದ ಹಾಗೂ ಸುಂದರವಾದ ಪಟ್ಟಣ. ಈ ಪ್ರದೇಶವು ಹಲವಾರು ಐತಿಹಾಸಿಕ ದೇವಸ್ಥಾನಗಳಿಂದ ಪ್ರಸಿದ್ಧಿ ಪಡೆದಿದೆ. ಮಹಾಗಣಪತಿ ದೇಗುಲವು ಇಂತಹ ಹಲವು ದೇಗುಲಗಳಲ್ಲಿ ಒಂದು. ಪ್ರತಿವರ್ಷ ಇಲ್ಲಿ ಬಹುದೊಡ್ಡ ಪ್ರಮಾಣದ ಭಕ್ತರು ಆಗಮಿಸುತ್ತಾರೆ. ಕಲ್ಲಿನಿಂದ ಕೆತ್ತಲಾದ ಗಣಪತಿಯ ಸುಮಾರು 2.5 ಅಡಿ ಎತ್ತರದ ಮೂರ್ತಿಯು ಇಲ್ಲಿದೆ. ಈ ಮೂರ್ತಿಯು ಸುಮಾರು 11ನೇ ಶತಮಾನದಷ್ಟು ಹಳೆಯದು ಎಂದು ಸಂಶೋಧಕರು ಹೇಳುತ್ತಾರೆ.ಈ ಕ್ಷೇತ್ರಕ್ಕೆ ರೈಲು, ರಸ್ತೆ ಮತ್ತು ವಿಮಾನ ದಾರಿಯಿಂದ ಸೂಕ್ತ ಸಂಪರ್ಕವಿದೆ. ಉಡುಪಿಯಿಂದ ಕೇವಲ 24 ಕಿ.ಮೀ ದೂರದಲ್ಲಿದೆ ಈ ಪ್ರದೇಶ. ಬೆಂಗಳೂರು, ಪುಣೆ ಇತ್ಯಾದಿ ದೊಡ್ಡ ನಗರಗಳಿಂದ ಹೊರಡುವ ಹಲವು ಐಷಾರಾಮಿ ಪ್ರವಾಸಿ ಬಸ್‌ಗಳು ಇಲ್ಲಿಗೆ ಸಂಪರ್ಕವನ್ನು ಹೊಂದಿವೆ. ಪಡುಬಿದ್ರಿಯ ಮೂಲಕ ಎನ್‌ಎಚ್‌17 ಹಾದುಹೋಗುತ್ತದೆ.ರೈಲಿನ ಮೂಲಕ ಪ್ರಯಾಣಿಸಲು ಇಷ್ಟಪಡುತ್ತೀರಾದರೆ ಇಲ್ಲಿಗೆ ಕೊಂಕಣ ರೈಲು ಮಾರ್ಗ ಇಲ್ಲಿಗೆ ಸಂಪರ್ಕವನ್ನು ಹೊಂದಿದೆ. ಮಂಗಳೂರು ಏರ್‌ಪೋರ್ಟ್ ಸಮೀಪದ ವಿಮಾನ ನಿಲ್ದಾಣವಾಗಿದೆ ಮತ್ತು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮಾನಗಳು ಇಲ್ಲಿಗೆ ಸಂಪರ್ಕವನ್ನು ಹೊಂದಿವೆ. ಪ್ರವಾಸಿಗರಿಗೆ ಈ ತಾಣವನ್ನು ತಲುಪುವುದು ಕಷ್ಟವೇನೂ ಆಗಲಾರದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu