• Follow NativePlanet
Share
» »ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ "ಕಪ್ಪೆಯ ದೇವಾಲಯ".....

ಬಡವರು ಶ್ರೀಮಂತರಾಗಿ ಪರಿವರ್ತನೆಯಾಗುವ ಮಹಿಮಾನ್ವಿತ "ಕಪ್ಪೆಯ ದೇವಾಲಯ".....

Written By:

ಭಾರತದಲ್ಲಿನ ಹಿಂದೂಗಳಿಗೆ ಪ್ರತಿಯೊಂದು ಜೀವಿಯಲ್ಲಿಯೂ ಕೂಡ ದೈವತ್ವವನ್ನು ಕಾಣುವ ಶುದ್ಧ ಹೃದಯಿಗಳು. ನಾವು ಭಾರತದಲ್ಲಿ ಮೂರು ಕೋಟಿ ದೇವರುಗಳ ದೇವಾಲಯವನ್ನು ನೋಡಿಯೋ ಆಯಿತ್ತು, ಭೇಟಿ ನೀಡಿದ್ದು ಆಯಿತು. ಇದನ್ನು ಹೊರತು ಪಡಿಸಿದರೆ ಇನ್ನಷ್ಟು ವಿಚಿತ್ರವಾದ ದೇವಾಲಯಗಳ ಬಗ್ಗೆಯು ಕೂಡ ನಮ್ಮ ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದು ಕೊಂಡಿದ್ದೀರಿ.

ಅವುಗಳೆಂದರೆ ಬುಲೆಟ್ ಬಾಬಾ, ಇಲಿಗಳ ದೇವಾಲಯ, ಇರುವೆಗಳ ದೇವಾಲಯ, ವಿಸಾ ದೇವಾಲಯ, ಸೆಲೆಬ್ರೆಟಿಗಳ ದೇವಾಲಯ, ಭಾರತಾಂಬೆಯ ದೇವಾಲಯ ಹೀಗೆ ಹಲವಾರು ವಿಭಿನ್ನವಾದ ದೇವಾಲಯಗಳ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದೀರಾ. ಹಾಗಾದರೆ ನಾನು ನಿಮಗಾಗಿ ಇನ್ನೊಂದು ವಿಚಿತ್ರವಾದ ದೇವಾಲಯ ಬಗ್ಗೆ ಮಾಹಿತಿ ನೀಡುತ್ತೇನೆ.

ಅದೇನಪ್ಪ ಎಂದರೆ ಅದೇ ಕಪ್ಪೆಗಳ ದೇವಾಲಯ. ಆಶ್ಚರ್ಯ ಪಡೆಬೇಡಿ ನಮಗೆ ನಿಮಗೆ ತಿಳಿದೇ ಇರುವ ಅದೇಷ್ಟು ವಿಚಿತ್ರವಾದ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ಇವೆ. ಅಶ್ಚರ್ಯ ಏನಪ್ಪ ಎಂದರೆ ಈ ದೇವಾಲಯಕ್ಕೆ ಭೇಟಿ ನೀಡಿದರೆ ಬಡವರು ಕೂಡ ಶ್ರೀಮಂತರಾಗುತ್ತಾರಂತೆ. ಹಾಗಾದರೆ ಈ ದೇವಾಲಯದ ಬಗ್ಗೆ ತಿಳಿದುಕೊಳ್ಳಲೇಬೇಕು ಅಲ್ಲವೇ?

ಪ್ರಸ್ತುತ ಲೇಖನದಲ್ಲಿ ಕಪ್ಪೆಗೆ ಮೀಸಲಾಗಿರುವ ದೇವಾಲಯ ಹಾಗು ಆ ದೇವಾಲಯದ ಮಹತ್ವದ ಬಗ್ಗೆ ತಿಳಿಯೋಣ.

ಕಪ್ಪೆಯ ದೇವಾಲಯ

ಕಪ್ಪೆಯ ದೇವಾಲಯ

ಈ ವಿಚಿತ್ರವಾದ ದೇವಾಲಯ ಇರುವುದು ಉತ್ತರ ಪ್ರದೇಶದಲ್ಲಿ. ಒಮ್ಮೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದಾಗ ಕಪ್ಪೆಗಳ ದೇವಾಲಯಕ್ಕೂ ಕೂಡ ಭೇಟಿ ಮಾಡಿ ಬನ್ನಿ. ಈ ದೇವಾಲಯಕ್ಕೆ ಯಕ್ಕೆ ಭೇಟಿ ನೀಡಿದರೆ ಬಡವರು ಕೂಡ ಶ್ರೀಮಂತರಾಗುತ್ತಾರಂತೆ.


Photo Courtesy: Abhi9211

 ಐಶ್ವರ್ಯ ಮತ್ತು ಸಿರಿ-ಸಂಪತ್ತಿಗೆ ರಾಯಭಾರಿ

ಐಶ್ವರ್ಯ ಮತ್ತು ಸಿರಿ-ಸಂಪತ್ತಿಗೆ ರಾಯಭಾರಿ

ಕೆಲವು ಪೌರಣಿಕ ಸಾಹಿತ್ಯದ ಪ್ರಕಾರ ಉಲ್ಲೇಖದಂತೆ ಮಂಡೂಕಗಳು ಅಂದರೆ ಕಪ್ಪೆಗಳು ಸಂತಾನೋತ್ಪತ್ತಿ ಶಕ್ತಿಗೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ ಕೆಲವು ಪಂಡಿತರ ಪ್ರಕಾರ ಐಶ್ವರ್ಯ ಮತ್ತು ಸಿರಿ-ಸಂಪತ್ತಿಗೆ ರಾಯಭಾರಿಯಾಗಿ ಕಪ್ಪೆಗಳನ್ನು ಉಲ್ಲೇಖಿಸಲಾಗುತ್ತದೆ.


Photo Courtesy: Abhi9211

ಹಲವಾರು ಭಕ್ತರು

ಹಲವಾರು ಭಕ್ತರು

ಸಿರಿ-ಸಂಪತ್ತು ವೃದ್ಧಿಯಾಗುತ್ತದೆ ಎಂಬ ಕಾರಣದಿಂದಲೇ ಇಲ್ಲಿಗೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಮುಖ್ಯವಾದ ವಿಷಯವೆನೆಂದರೆ ಎಲ್ಲಾ ಸಮಯದಲ್ಲಿಯೂ ಇಲ್ಲಿಗೆ ಭಕ್ತರು ಭೇಟಿ ನೀಡುವುದಿಲ್ಲ. ಬದಲಾಗಿ ನಿರ್ದಿಷ್ಟ ಸಮಯದಲ್ಲಿ ಮಾತ್ರ ದೇವಾಲಯಕ್ಕೆ ಭೇಟಿ ನೀಡುತ್ತಾರೆ.


Photo Courtesy: Abhi9211

ದೀಪಾವಳಿ ಹಬ್ಬ

ದೀಪಾವಳಿ ಹಬ್ಬ

ಅದು ಯಾವಾಗ ಎಂದರೆ ದೀಪಾವಳಿ ಹಬ್ಬದ, ಶಿವರಾತ್ರಿ ಹಾಗು ಶ್ರಾವಣ ಸೋಮವಾರಗಳಂದು ಈ ದೇವಾಲಯಕ್ಕೆ ಭಕ್ತರ ದಂಡೆ ಹರಿದು ಬರುತ್ತದೆ. ವಿಶೇಷವಾಗಿ ದೀಪಾವಳಿ ಹಬ್ಬದ ದಿನ ಮಾತ್ರ ಇಲ್ಲಿ ಜನರಿಂದ ತುಂಬಿ ತುಳುಕುತ್ತಿರುತ್ತದೆ.

ಬಡತನದಿಂದ ವಿಮುಕ್ತಿ

ಬಡತನದಿಂದ ವಿಮುಕ್ತಿ

ಈ ದೇವಾಲಯದಲ್ಲಿನ ಕಪ್ಪೆಗಳು ಕೆಲವು ವರಗಳನ್ನು ಪ್ರಸಾದಿಸುತ್ತವೆ. ಅವುಗಳೆಂದರೆ ಮಕ್ಕಳಿಲ್ಲದವರು ಈ ದೇವಾಲಯಕ್ಕೆ ಭೇಟಿ ನೀಡಿದರೆ ಮಕ್ಕಳು ಆಗುತ್ತದೆ ಎಂತೆ. ಹಾಗೆಯೇ ಬಡತನದಿಂದ ಮುಕ್ತಿ ಪಡೆಯಬಯಸುವವರು ಕೂಡ ಇಲ್ಲಿ ಅಪಾರ ಜನ ಸಾಗರ ಭೇಟಿ ನೀಡುತ್ತದೆ.

Photo Courtesy: toyin adepoju

ಬೇಡಿಕೆಗಳು

ಬೇಡಿಕೆಗಳು

ಅದು ಯಾವುದೇ ದೇವಾಲಯದಲ್ಲಿಯೇ ಆಗಲಿ ದೇವತೆಗೆ ಶ್ರದ್ಧೆ ಮತ್ತು ಭಕ್ತಿಗಳು ಇಲ್ಲದೇ ಯಾವುದೇ ಬೇಡಿಕೆಗಳು ಕೂಡ ದೇವತೆಗಳು ನೆರವೇರಿಸುವುದಿಲ್ಲ. ಇಲ್ಲಿಯೂ ಕೂಡ ಭಕ್ತಿ, ನಂಬಿಕೆ ಹಾಗು ಶ್ರದ್ಧೆಗಳಿಗೆ ಅನುಸಾರವಾಗಿ ಕಪ್ಪೆಯು ಆರ್ಶೀವಾದವನ್ನು ನೀಡಿ ಅವರ ಬೇಡಿಕೆಗಳನ್ನು ಈಡೇರಿಸುತ್ತದೆ ಎಂದು ಸ್ಥಳೀಯ ನಂಬಿಕೆಯಾಗಿದೆ.


Photo Courtesy: Himanshu Sharma

ಮಹಾಶಿವನ ದೇವಾಲಯ

ಮಹಾಶಿವನ ದೇವಾಲಯ

ಮೂಲತಃ ಇದು ಮಹಾ ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು, ಕಪ್ಪೆಯ ಬೆನ್ನಿನ ಮೇಲೆ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯವನ್ನು ಸ್ಥಳೀಯವಾಗಿ "ಮಂಡೂಕ ಮಂದಿರ" ಎಂದೂ ಸಹ ಕರೆಯುತ್ತಾರೆ. ಮಂಡೂಕ ವಿದ್ಯೆಯ ಪ್ರಕಾರವಾಗಿ ಕಪ್ಪೆಯ ಬೆನ್ನಿನ ಮೇಲೆ ಇಡಲಾದ ತಾಂತ್ರಿಕ ಚಕ್ರದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ದಾರಿದ್ರ್ಯ ನಿವಾರಣೆ

ದಾರಿದ್ರ್ಯ ನಿವಾರಣೆ

ಈ ದೇವಾಲಯವನ್ನು ಸುಮಾರು 200 ವರ್ಷಗಳ ಪುರಾತನವಾದ ದೇವಾಲಯ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಅವರ ದಾರಿದ್ರ್ಯ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಒಂದು ದಂತ ಕತೆಯೂ ಕೂಡ ಇದೆ.

Photo Courtesy: Abhi9211

ರಾಜ ಭಕತ್ ಸಿಂಗ್

ರಾಜ ಭಕತ್ ಸಿಂಗ್

ಹಿಂದೆ ರಜಪೂತ ದೊರೆಯಾದ ಭಕತ್ ಸಿಂಗ್ ಎಂಬಾತನಿಗೆ ಎಲ್ಲಿಲ್ಲದ ಕಷ್ಟಗಳು ಎದುರಾಯಿತಂತೆ. ಹೀಗೆ ಸಮಯ ಉರುಳುತ್ತಿದ್ದ ಸಂದರ್ಭದಲ್ಲಿ ಕಪ್ಪೆಯ ಆರ್ಶೀವಾದವು ರಾಜನಿಗೆ ಹಾಗು ಪ್ರಜೆಗಳಿಗೆ ಲಭಿಸಿತಂತೆ. ಅಂದಿನಿಂದ ರಾಜನ ಎಲ್ಲಾ ಕಷ್ಟಗಳು ದೂರವಾಗಿ ಸಕಲ ಸಂಪತ್ತು ದೊರೆಯಿತಂತೆ. ಇದು ಅಲ್ಲಿನ ಸ್ಥಳೀಯ ಕಥೆಯಾಗಿದೆ. ಹೀಗಾಗಿಯೇ ಆ ರಾಜನು ಕಪ್ಪೆಗೆ ದೇವಾಲಯವನ್ನು ನಿರ್ಮಾಣ ಮಾಡಿದನು ಎನ್ನಲಾಗಿದೆ.

ವಾಸ್ತುಶಿಲ್ಪ

ವಾಸ್ತುಶಿಲ್ಪ

ಈ ದೇವಾಲಯದ ಮುಖ್ಯವಾದ ಆಕರ್ಷಣೆ ಎಂದರೆ ಅದರ ವಾಸ್ತುಶಿಲ್ಪ. ಇಡೀ ರಚನೆಯು ಕಪ್ಪೆ ತನ್ನ ಹಿಂಭಾಗದಲ್ಲಿ ಸಾಗುತ್ತಿದೆ ಎಂಬಂತೆ ಕಾಣುತ್ತದೆ. ಮುಂಭಾಗದಲ್ಲಿ ಕಪ್ಪೆಯ ಒಂದು ಭವ್ಯವಾದ ಶಿಲ್ಪವು ಇದೆ. ಕಪ್ಪೆಯ ಹಿಂದೆ ಚೌಕ ಆಕಾರದಲ್ಲಿ ಗುಮ್ಮಟವನ್ನು ನಿರ್ಮಾಣ ಮಾಡಲಾಗಿದೆ.

Photo Courtesy: Himanshu Sharma

ತಾಂತ್ರಿಕ ಸಂಪ್ರದಾಯ ಎಂದರೆ ಏನು?

ತಾಂತ್ರಿಕ ಸಂಪ್ರದಾಯ ಎಂದರೆ ಏನು?

ತಾಂತ್ರಿಕ ಸಂಪ್ರದಾಯ ಎಂದರೆ ಪ್ರಾಚೀನ ಹಿಂದೂ ಧರ್ಮ ಮತ್ತು ಬೌದ್ಧಧರ್ಮದ ಪ್ರಭಾವವನ್ನು ಹೊಂದಿರುವ ಪ್ರಾಚೀನವಾದ ಭಾರತೀಯ ಸಂಸ್ಕøತಿಯಾಗಿದೆ. ಇದು ಮುಖ್ಯವಾಗಿ ಸ್ತ್ರೀ ಶಕ್ತಿಗೆ ಎತ್ತಿಹಿಡಿದ ಪೂರ್ವ ವೈದಿಕ ಸಂಪ್ರದಾಯವಾಗಿದೆ. ಈ ತಾಂತ್ರಿಕ ಸಂಪ್ರದಾಯವನ್ನು ದೇವತೆಗಳ ಉಗ್ರ ರೂಪಗಳಿಗೆ ಈ ಸಂಪ್ರದಾಯವನ್ನು ಪೂಜಿಸಲಾಗುತ್ತದೆ. ಕಪ್ಪೆ ದೇವಾಲಯವು ಕೂಡ ಈ ತಾಂತ್ರಿಕ ಪದ್ಧತಿಯನ್ನು ಅನುಸರಿಸುತ್ತಿದೆ.

Photo Courtesy: toyin adepoju

ಹೇಗೆ ಸಾಗಬೇಕು? ದೇವಾಲಯ ಎಲ್ಲಿದೆ?

ಹೇಗೆ ಸಾಗಬೇಕು? ದೇವಾಲಯ ಎಲ್ಲಿದೆ?

ಅಷ್ಟಕ್ಕೂ ಈ ದೇವಾಲಯ ಇರುವುದು ಎಲ್ಲಿ ಎಂದು ಯೋಚಿಸುತ್ತಿದೀರಾ? ಹಾಗಾದರೆ ಕೇಳಿ ಈ ವಿಚಿತ್ರವಾದ ದೇವಾಲಯವಿರುವುದು ಉತ್ತರ ಪ್ರದೇಶ ರಾಜ್ಯದ ಲಖಿಂಪುರ್ ಖೇರಿಯಿಂದ ಸೀತಾಪುರಕ್ಕೆ ಹೊರಡುವ ಮಾರ್ಗದಲ್ಲಿ.

ಲಿಖಿಂಪೂರದಿಂದ ಸುಮಾರು 12 ಕಿ.ಮೀ ದೂರದಲ್ಲಿ ಓಯಲ್ ಎಂಬ ಗ್ರಾಮದಲ್ಲಿ ಈ ವಿಚಿತ್ರವಾದ ಕಪ್ಪೆಗಳ ದೇವಾಲಯವಿದೆ. ಲಿಖಿಂಪುರ್ ಲಖನೌ ಪಟ್ಟಣದಿಂದ ಸುಮಾರು 135 ಕಿ.ಮೀ ದೂರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more