ವಿಶ್ವದಾದ್ಯಂತದ ಅತ್ಯಂತ ನಿಗೂಡತೆಗಳಿಂದ ಕೂಡಿದ ಸ್ಥಳಗಳ ಪಟ್ಟಿ ಈ ಕೆಳಗಿವೆ
ಜಗತ್ತು ಇನ್ನೂ ಪತ್ತೆಯಾಗದ ನಿಗೂಡತೆ ಮತ್ತು ರಹಸ್ಯಗಳಿಂದ ಕೂಡಿದೆ ಹಾಗೂ ವಿಶ್ವದ ಕೆಲವು ಸ್ಥಳಗಳಲ್ಲಿ ಹಲವಾರು ನಿಗೂಡ ದೃಶ್ಯಗಳನ್ನು ಕಾಣಬಹುದಾಗಿದೆ. ಜಗತ್ತಿನಲ್ಲಿ ಹಲವಾರು ರಹಸ್ಯಗಳನ್ನೊಳಗೊಂಡ ಪ್ರವಾಸಿ ಆಕರ್ಷಣೆಗಳಿದ್ದು ಇವುಗಳನ್ನು ಇತರ ಹೆಸರುವಾಸಿಯಾಗಿರುವ ಸ್ಥಳಗಳಿಗೆ ಹೋಲಿಕೆ ಮಾಡಲೂ ಸಾಧ್ಯವಿಲ್ಲ ಎನ್ನಬಹುದಾಗಿದೆ.
ಅಂತಹ ನಿಗೂಡತೆಯನ್ನು ಹೊಂದಿರುವಂತಹ ಸ್ಥಳಗಳು ನಮ್ಮ ಹಿಂದಿನ ಬೇರುಗಳನ್ನು ಸಂಪರ್ಕಿಸುತ್ತವೆ. ಇಂತಹ ಸ್ಥಳಗಳಿಗೆ ಭೇಟಿ ಕೊಡಲು ಜನರು ಹೆಚ್ಚು ಆಸಕ್ತರಾಗಿರುತ್ತಾರೆ ಇವುಗಳಲ್ಲಿ ಕೆಲವು ಸ್ಥಳಗಳು ಜನರು ತಮ್ಮ ಅಸ್ತಿತ್ವ ಹಲವಾರು ವ್ಯಾಕ್ಯಾನಗಳನ್ನು ನೀಡುತ್ತವೆ ಅಷ್ಟೇ ಅಲ್ಲದೆ ಅವುಗಳಲ್ಲಿ ಕೆಲವು ವೈಜ್ಞಾನಿಕವಾಗಿ ಸರಿಯಾಗಿದ್ದರೆ ಇನ್ನು ಕೆಲವು ನಂಬಿಕೆಗಳನ್ನು ಆಧರಿಸಿವೆ.

ಬರ್ಮುಡಾ ಟ್ರಯಾಂಗಲ್
ಡೆವಿಲ್ ಟ್ರಯಾಂಗಲ್ ಎಂದೂ ಕರೆಯಲ್ಪಡುವ ಈ ಬರ್ಮುಡಾ ಟ್ರಯಾಂಗಲ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿಯ ಒಂದು ಪ್ರದೇಶವಾಗಿದ್ದು, ಇಲ್ಲಿ ಹಲವಾರು ಹಡಗುಗಳು ಮತ್ತು ವಿಮಾನಗಳು ಯಾವುದೇ ಕುರುಹುಗಳಿಲ್ಲದೇ ಕಣ್ಮರೆಯಾಗಿವೆ. ಹಡಗುಗಳು ಅಥವಾ ವಿಮಾನಗಳ ಕೆಲವು ಸಿದ್ದಾಂತಗಳು ಹೇಳುವ ಪ್ರಕಾರ ಇವುಗಳು ಸುಳಿಯೊಳಗೆ ಸಿಲುಕಿ ಮಿಂಚಿನ ಕ್ಷಣದಲ್ಲಿ ಒಳಗೆ ಹೋಗುವುದರಿಂದ ಕಣ್ಮರೆಯಾಗುತ್ತವೆ ಎಂದೂ ಇನ್ನು ಕೆಲವು ಜನರ ನಂಬಿಕೆಯ ಪ್ರಕಾರ ಈ ಕಣ್ಮರೆಗೆ ಅನ್ಯಗ್ರಹ ಜೀವಿಗಳು ಕಾರಣವೆಂದೂ ಹೇಳಲಾಗುತ್ತದೆ.
ಬರ್ಮುಡಾ ಟ್ರಯಾಂಗಲ್ ತಮ್ಮ ರಾಡಾರ್ ಪರದೆಗಳಿಂದ ನಿಗೂಡವಾಗಿ ಕಣ್ಮರೆಯಾದಂತಹ ಹಲವಾರು ಹಡಗುಗಳು ಮತ್ತು ವಿಮಾನಗಳಿಗೆ ನೆಲೆಯಾಗಿದ್ದು, ನಂತರ ಯಾವುದೇ ತೊಂದರೆ ಅಥವಾ ಗಾಯದ ಚಿಹ್ನೆಗಳಿಲ್ಲದೆ ಕಂಡುಬರುತ್ತವೆ. ಭೂಮಿಯಲ್ಲಿ ಕಂಡು ಬರುವಂತಹ ಅತ್ಯಂತ ರಹಸ್ಯಮಯ ಸ್ಥಳಗಳಲ್ಲೊಂದಾಗಿರುವ ಇಲ್ಲಿ ಇದೇ ವಿಷಯಕ್ಕಾಗಿ ಹಲವಾರು ಅಧಿಕೃತವಾಗಿ ತನಿಖೆಗಳು ನಡೆದಿವೆ. ಆದರೆ ಈವರೆಗೆ ಇಲ್ಲಿ ಸಂಭವಿಸುವ ಅಸಾಮಾನ್ಯ ವಿಷಯಗಳನ್ನು ನಿರ್ಣಾಯಕವಾಗಿ ಸಾಬೀತು ಪಡಿಸಲು ಅಥವಾ ನಿರಾಕರಿಸಲು ಯಾರಿಂದಲೂ ಸಾಧ್ಯವಾಗಿಲ್ಲ.

ಈಜಿಪ್ಟ್ ನ ಗೀಜಾದ ದ ಗ್ರೇಟ್ ಪಿರಮಿಡ್
ಈಜಿಪ್ಟ್ ನ ಆಧುನಿಕ ಕೈರೋದ ಹೊರವಲಯದಲ್ಲಿರುವ ಗಿಜಾ ಪಿರಮಿಡ್ ಸಂಕೀರ್ಣದಲ್ಲಿನ ಮೂರು ಪಿರಮಿಡ್ ಗಳಲ್ಲಿ ಗೀಜಾದ ಗ್ರೇಟ್ ಪಿರಮಿಡ್ ಅತ್ಯಂತ ಹಳೆಯ ಮತ್ತು ದೊಡ್ಡದಾದ ಪಿರಮಿಡ್ ಆಗಿದ್ದು, ಇದು ಪ್ರಪಂಚದ ಪ್ರಾಚೀನ ಏಳು ಅದ್ಭುತಗಳಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಏಕೈಕ ಅದ್ಭುತವಾಗಿದೆ ಮತ್ತು ಗ್ರೇಟ್ ಪಿರಮಿಡ್ ಅನ್ನು ಮಾನವರು ಇದುವರೆಗೆ ನಿರ್ಮಿಸಿದ "ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ನ ಶ್ರೇಷ್ಠ ಕಲಾಕೃತಿ" ಎಂದು ಉಲ್ಲೇಖಿಸಲಾಗಿದೆ.
ಗ್ರೇಟ್ ಪಿರಮಿಡ್ ಈಜಿಪ್ಟ್ ನ ನಾಲ್ಕನೇ ರಾಜವಂಶದ ರಾಜನಾದ ಫೆರೋ ಖುಫು ಅವರ ಶವಾಗಾರ ಅಥವಾ ಸಮಾಧಿಯಾಗಿ ನಿರ್ಮಿಸಲಾಯಿತು. ಈ ಪಿರಮಿಡ್ ನ ನಿರ್ಮಾಣವು ಯಾವಾಗ ಪ್ರಾರಂಭವಾಯಿತು ಎನ್ನುವುದು ಇನ್ನೂ ತಿಳಿದಿಲ್ಲ. ವಿವಿಧ ಐತಿಹಾಸಿಕ ದಾಖಲೆಗಳು ಬೇರೆ ಬೇರೆ ದಿನಾಂಕಗಳನ್ನು ಉಲ್ಲೇಖಿಸುತ್ತವೆ. ಇಲ್ಲಿರುವಂತಹ ಉಪಕರಣಗಳು ಈಗಿನ ಆಧುನಿಕ ಯುಗದಲ್ಲಿಯೂ ಕಾಣಲು ಸಿಗುವುದಿಲ್ಲ ಇಂತಹ ಅದ್ಬುತವಾದ ಈ ಮೇರು ಕಲಾಕೃತಿಯನ್ನು ಹೇಗೆ ರಚಿಸಿದರು ಎಂಬುದು ಯಾರಿಗೂ ತಿಳಿದಿಲ್ಲ.

ಏರಿಯಾ 51, ಯುನೈಟೆಡ್ ಸ್ಟೇಟ್ಸ್
ನೆವಾಡದಲ್ಲಿರುವ ಏರಿಯಾ 51 ಎನ್ನುವ ಪ್ರದೇಶವು ಅತ್ಯಂತ ದೂರದ ಗುಪ್ತ ಪ್ರದೇಶವಾಗಿದ್ದು, ಇದು ಹಲವಾರು ವದಂತಿಗಳು ಮತ್ತು ಪಿತೂರಿ ಸಿದ್ದಾಂತಗಳ ನೆಲೆಯಾಗಿದೆ. ಈ ನೆಲೆಯನ್ನು ಮೊದಲ ಬಾರಿಗೆ ಎರಡನೇ ಮಹಾಯುದ್ಧದ ಸಮಯದಲ್ಲಿ ರಹಸ್ಯ ವಾಯುನೆಲೆಯಾಗಿ ನಿರ್ಮಿಸಲಾಯಿತು, ಇದನ್ನು ಯುಎಸ್ ಮಿಲಿಟರಿ ಪ್ರಾಯೋಗಿಕ ವಿಮಾನಗಳನ್ನು ಪರೀಕ್ಷಿಸಲು ಬಳಸಲಾಗಿತ್ತು. ಕೆಲವು ಮೂಲಗಳ ಪ್ರಕಾರ ಎರಿಯಾ 51, ಹಲವಾರು ವರ್ಷಗಳಿಂದ ಅಮೇರಿಕನ್ ಪಡೆಗಳಿಂದ ಸೆರೆಹಿಡಿಯಲ್ಪಟ್ಟ ಅಥವಾ ಇತರ ರೀತಿಯಲ್ಲಿ ನಿಷ್ಕ್ರಿಯಗೊಳಿಸಲ್ಪಟ್ಟ ಅನ್ಯಗ್ರಹದ ಬಾಹ್ಯಾಕಾಶ ನೌಕೆಗಳ ಸಮೂಹಕ್ಕೆ ನೆಲೆಯಾಗಿದೆ, ಇದು ಅನ್ಯಗ್ರಹ ಅನ್ವೇಷಲು ಇಚ್ಚೆ ಪಡುವ ಉತ್ಸಾಹಿಗಳಿಗೆ ಆಕರ್ಷಕ ತಾಣವಾಗಿದೆ. ಎರಿಯಾ 51, ಇದನ್ನು ಯು ಎಸ್ ವಾಯುಪಡೆಯು ಮೊದಲ ಬಾರಿಗೆ ತಮ್ಮ ಅತ್ಯಂತ ಉನ್ನತ ರಹಸ್ಯ ತಾಣವೆಂದು ಗುರುತಿಸಿತು. ವಿದೇಶಿ
ಬಾಹ್ಯಾಕಾಶ ನೌಕೆಗಳನ್ನು ವಶಪಡಿಸಿಕೊಂಡು ಅಧ್ಯಯನ ಮಾಡಿದ ಹಲವಾರು ಅಪಘಾತ ಸ್ಥಳಗಳಿವೆ ಎಂದು ಹೇಳಲಾಯಿತು. ಏರಿಯಾ 51 ಈಗ ಅನೇಕ ದಶಕಗಳಿಂದ ಪಿತೂರಿ ಸಿದ್ಧಾಂತಗಳ ವಿಷಯವಾಗಿದೆ. ಕೆಲವರು ಇದನ್ನು ಪರಕೀಯ ನೆಲೆ ಎಂದು ನಂಬಿದರೆ, ಇತರರು ಇದನ್ನು ಉನ್ನತ ರಹಸ್ಯ ಸಂಸ್ಥೆ ಎಂದು ನಂಬುತ್ತಾರೆ.

ಪೋಲ್ಯಾಂಡ್ ನ ಕ್ರೂಕ್ಡ್ ಫ಼ಾರೆಸ್ಟ್ (ವಕ್ರ ಅರಣ್ಯ)
ವಕ್ರ ಅರಣ್ಯವು ಪೋಲೆಂಡ್ ನ ಒಂದು ನಿಗೂಢ ಅರಣ್ಯವಾಗಿದ್ದು, ಅದು ತಲೆಕೆಳಗಾಗಿ ಮಾರ್ಪಟ್ಟಿದೆ ಎನ್ನುವಂತೆ ತೋರುತ್ತದೆ. ಇಲ್ಲಿ ಮರಗಳು ವಿರುದ್ದ ದಿಕ್ಕಿನಲ್ಲಿ ಬೆಳೆಯುತ್ತಾ ಅವುಗಳ ಬುಡದಲ್ಲಿ 90 ಡಿಗ್ರಿಯಲ್ಲಿ ತಿರುವು ಪಡೆದು ಬಹುತೇಕ ಪರಿಪೂರ್ಣ ವೃತ್ತವನ್ನು ರೂಪಿಸುತ್ತವೆ. ಬಹಳ ನಿರ್ದಿಷ್ಟ ಕ್ರಮದಲ್ಲಿ ನೆಡಲ್ಪಟ್ಟ ಸಸಿಗಳಿಂದ ಈ ಮರಗಳ ಅರಣ್ಯವು ರೂಪುಗೊಂಡಿತು, ಆದರೆ ಅನೇಕ ವರ್ಷಗಳ ನಂತರ ಅವುಗಳಲ್ಲಿ ಕೆಲವು ಮರಗಳು ತಮ್ಮ ಬೇರುಗಳನ್ನು ನೆಲದ ಕಡೆಗೆ ತಿರುಗಿಸುತ್ತಾ ಮತ್ತು ಈಗ ಅವು ಮೇಲಕ್ಕೆ ಅಥವಾ ಕೆಳಗೆ ಬೆಳೆಯುವ ಬದಲು ಪಕ್ಕಕ್ಕೆ ಬೆಳೆಯುತ್ತಿವೆ. ಇದು ಮೀನು ಹಿಡಿಯುವ ಕೊಕ್ಕೆಗಳ ಆಕಾರದಂತೆ ಕಾಣುತ್ತದೆ ಅಥವಾ ನೀವು ಅದನ್ನು ಇಂಗ್ಲೀಷ್ ಅಕ್ಷರ ಜೆ-ಆಕಾರದಲ್ಲಿದೆ ಎಂದು ಹೇಳಬಹುದಾಗಿದೆ.
ಕ್ರೂಕ್ಡ್ ಅರಣ್ಯಗಳು ಅತ್ಯಂತ ಹಳೆಯದಾದ ಅ ಪೈನ್ ಮರಗಳನ್ನೊಳಗೊಂಡ ಕಾಡುಗಳಾಗಿದ್ದು, ಶತಮಾನಗಳಿಂದ ಆಗುತ್ತಿರುವ ಭೂಕಂಪಗಳಿಗೆ ತುತ್ತಾಗಿ ಈ ಕಾಡುಗಳು ತಿರುಚಲ್ಪಟ್ಟಿವೆ. ಕ್ರೂಕ್ಡ್ ಅರಣ್ಯವು ಯುರೋಪಿನ ಅತ್ಯಂತ ನಿಗೂಡ ಸ್ಥಳವೆನ್ನಬಹುದು ಏಕೆಂದರೆ ಈ ಸ್ಥಳವು ಹಲವಾರು ಪ್ರಕೃತಿ ವಿಕೋಪಗಳನ್ನು ಅನುಭವಿಸಿವೆ ಅದಕ್ಕೆ ಸಾಕ್ಷಿ ಎನ್ನುವಂತೆ ಈ ಪ್ರಕೃತಿ ವಿಕೋಪದ ಛಾಪು ಇಲ್ಲಿಯ ಭೂದೃಶ್ಯಗಳಲ್ಲಿ ಕಾಣಬಹುದಾಗಿದೆ.

ಈಸ್ಟರ್ ಐಲ್ಯಾಂಡ್ (ದ್ವೀಪ) ಚಿಲಿ
ಈಸ್ಟರ್ ದ್ವೀಪವು ಆಗ್ನೇಯ ಪೆಸಿಫಿಕ್ ಸಾಗರದಲ್ಲಿ ಅಳಿದುಹೋದ ಚಿಲಿಯ ದ್ವೀಪವಾಗಿದೆ. ಈ ಸ್ಥಳವು ಅತ್ಯಂತ ದೊಡ್ಡದಾದ ಹಾಗೂ ನಿಗೂಡವೆನಿಸುವಂತಹ ಮೋವೈ ಪ್ರತಿಮೆಗೆ ಹೆಸರುವಾಸಿಯಾಗಿದೆ. ಈ ಪ್ರತಿಮೆಗಳನ್ನು ದ್ವೀಪದ ಜ್ವಾಲಾಮುಖಿಯಿಂದ ಸೃಷ್ಟಿಯಾದ ಬಂಡೆಯಲ್ಲಿ ರಾಪಾ ನುಯಿ ಜನರು ಕೆತ್ತಿದರು ಎಂದು ಹೇಳಲಾಗುತ್ತದೆ. ಈ ಪ್ರತಿಮೆಗಳು ಮೂಲತಃ ತಮ್ಮ ಪೂರ್ವಜರು ಮತ್ತು ದೇವತೆಗಳನ್ನು ಗೌರವಿಸುವ ಉದ್ದೇಶವನ್ನು ಹೊಂದಿದ್ದವು, ಆದರೆ ಕಾಲಾನಂತರದಲ್ಲಿ ಅವು ದ್ವೀಪವಾಸಿಗಳ ಸ್ವಂತ ಧಾರ್ಮಿಕ ನಂಬಿಕೆಗಳ ಪ್ರತೀಕವಾಗಿ ಮಾರ್ಪಾಡಾದವು. ಈ ಪ್ರತಿಮೆಗಳ ಮೂಲ ಇನ್ನೂ ಅಸ್ಪಷ್ಟವಾಗಿದ್ದು, ಆದರೆ ಕೆಲವು ಸಿದ್ದಾಂತಗಳ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಭೂಮಿಗೆ ಇಳಿದ ಅನ್ಯಗ್ರಹ ಜೀವಿಗಳಿಂದ ಇವುಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಲಾಗುತ್ತದೆ.
ಆದರೆ ಇವುಗಳ ಪರವಾಗಿ ಸಾಬೀತುಪಡಿಸುವ ಯಾವುದೇ ಪುರಾವೆಗಳಾಗಲಿ ಅಥವಾ ಸಿದ್ದಾಂತಗಳಾಗಲಿ ಇಲ್ಲ. ಅಲ್ಲದೆ ಕೆಲವು ಪುರಾತತ್ವಶಾಸ್ತ್ರಜ್ಞರ ಪ್ರಕಾರ ಇತಿಹಾಸದ ಯಾವುದೋ ಒಂದು ಘಟ್ಟದಲ್ಲಿ ಈ ದ್ವೀಪದಲ್ಲಿ ನೆಲೆಸುತ್ತಿದ್ದ ಮಾನವರಿಂದಲೇ ಈ ಪ್ರತಿಮೆಗಳು ನಿರ್ಮಿಸಲ್ಪಟ್ಟಿವೆ ಎಂದೂ ಹೇಳುತ್ತಾರೆ. ಈಸ್ಟರ್ ದ್ವೀಪವು ತನ್ನ ದೈತ್ಯ ಕಲ್ಲಿನ ಪ್ರತಿಮೆಗಳು ಮತ್ತು ಏಕಶಿಲಾ ವೇದಿಕೆಗಳಿಗೆ ಹೆಸರುವಾಸಿಯಾಗಿದೆ, ಆದರೆ ಅನೇಕ ಜನರಿಗೆ ತಿಳಿದಿಲ್ಲದ ವಿಷಯವೆಂದರೆ ಇದು ಭೂಮಿಯ ಮೇಲಿನ ಕೆಲವು ಅತ್ಯಂತ ನಿಗೂಢ ಸ್ಥಳಗಳಿಗೆ ನೆಲೆಯಾಗಿದೆ


Click it and Unblock the Notifications















