Search
  • Follow NativePlanet
Share
» »ಬಂಗಾರ ಮತ್ತು ಕಲೆಯ ಕಥೆಗಳನ್ನೊಳಗೊಂಡ ವೆಲ್ಲೂರಿನ ಗೋಲ್ಡನ್ ಟೆಂಪಲ್

ಬಂಗಾರ ಮತ್ತು ಕಲೆಯ ಕಥೆಗಳನ್ನೊಳಗೊಂಡ ವೆಲ್ಲೂರಿನ ಗೋಲ್ಡನ್ ಟೆಂಪಲ್

ಚಿನ್ನ ಹಾಗೂ ಕಲಾಕೌಶಲ್ಯತೆಯನ್ನು ಸಾರಿ ಹೇಳುವ ವೆಲ್ಲೂರಿನ "ಗೋಲ್ಡನ್ ಟೆಂಪಲ್"

ಭಾರತಕ್ಕೂ ಚಿನ್ನಕ್ಕೂ ಅವಿನಾಭಾವ ಸಂಬಂಧವಿದೆ. ಈ ಲೋಹವನ್ನು ದೇಶದ ಅಭಿವೃದ್ದಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಬಂಗಾರವನ್ನು ಆಭರಣಗಳಿಂದ ಹಿಡಿದು ಚಿನ್ನದ ಪ್ರತಿಮೆಗಳವರೆಗೆ ಆಕರ್ಷಣೀಯವಾಗಿ ಕಾಣಲು ಉಪಯೋಗಿಸಲಾಗುತ್ತದೆ. ಕೆಲವು ದೇವಾಲಯದ ದೇವರುಗಳ ಪ್ರತಿಮೆಗಳನ್ನು ಚಿನ್ನದಿಂದಲೇ ಮಾಡಲಾಗುತ್ತದೆ ಎಂಬ ವಿಷಯವು ಸೋಜಿಗವಲ್ಲವೆ? ಅಂದ ಹಾಗೆ ಇಲ್ಲಿ ಚಿನ್ನದ ವಿಷಯ ಏಕೆ ಮಾತಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿರುವಿರ?

ಹಾಗಿದ್ದಲ್ಲಿ ಬನ್ನಿ ವಿವರವಾಗಿ ತಿಳಿಸೋಣ : ಹೌದು ಬಂಗಾರವನ್ನು ಕೇವಲ ಆಭರಣಗಳಲ್ಲಿ ಮಾತ್ರ ಉಪಯೋಗಿಸುವದಲ್ಲದೆ ಕೆಲವು ವಾಸ್ತುಶಿಲ್ಪಗಳ ಸೌಂದರ್ಯತೆಗೆ ಇನ್ನಷ್ಟು ಮೆರುಗು ತರಲೂ ಉಪಯೋಗಿಸಲಾಗುತ್ತದೆ. ಅದಕ್ಕಾಗಿ ಹಲವಾರು ಉದಾಹರಣೆಗಳನ್ನು ನೀಡಬಹುದು. ಅವುಗಳಲ್ಲಿ ಗೋಲ್ಡನ್ ಟೆಂಪಲ್' ಎಂಬ ಹೆಸರು ಅಮೃತಸರದಲ್ಲಿರುವ ಹರ್ಮಂದಿರ್ ಸಾಹಿಬ್ (ಗೋಲ್ಡನ್ ಟೆಂಪಲ್) ಗೆ ಸಮಾನಾರ್ಥಕವಾಗಿರುವ ಇನ್ನೊಂದು ಮೇರುಕೃತಿ ವೆಲ್ಲೂರಿನಲ್ಲಿರುವ ಗೋಲ್ಡನ್ ಟೆಂಪಲ್.

sripuram-golden-temple-vellore1-1661159444-1663910593.jpg -Properties

ಗೋಲ್ಡನ್ ಟೆಂಪಲ್

ಶ್ರೀಪುರಂ ಗೋಲ್ಡನ್ ಟೆಂಪಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ಚಿನ್ನದಲ್ಲಿ ವಾಸ್ತುಶಿಲ್ಪವನ್ನು ಅತ್ಯದ್ಬುತವಾಗಿ ಕೆತ್ತಲಾಗಿದೆ. ಈ ದೇವಾಲಯವು ಲಕ್ಶ್ಮೀ ದೇವಿಗೆ ಅರ್ಪಿತವಾದುದಾಗಿದ್ದು, ಇದನ್ನು 'ಶ್ರೀ ಲಕ್ಷ್ಮೀ ನಾರಾಯಣಿ ದೇವಾಲಯ' ವೆಂದೂ ಕರೆಯಲ್ಪಡುತ್ತದೆ.

ವೆಲ್ಲೂರಿನಂತಹ ಐತಿಹಾಸಿಕ ನಗರವು ಹಲವಾರು ಪ್ರವಾಸಿ ಆಕರ್ಷಣೆಗಳನ್ನೊಳಗೊಂಡಿದೆ. ಬೆಂಗಳೂರಿನಿಂದ ಕೇವಲ 212 ಕಿ.ಮೀಪ್ರಯಾಣ ಮಾಡಿದಲ್ಲಿ ವೆಲ್ಲೂರು ತಲುಪುತ್ತದೆ. ವೆಲ್ಲೂರಿನ ಗೋಲ್ಡನ್ ಟೆಂಪಲ್ ವೆಲ್ಲೂರು ನಗರದಿಂದ 8 ಕಿ.ಮೀ ದೂರದಲ್ಲಿರುವ ತಿರುಮಲೈಕೋಡಿಯಲ್ಲಿ ನೆಲೆಸಿದೆ.

sripuram-golden-temple-vellore6-1661159946-1663910602.jpg -Properties

ದೂರದಲ್ಲಿ ಈ ದೇವಾಲಯದ ಪ್ರವೇಶದ್ವಾರ ಹೇಗೆ ಕಾಣುತ್ತದೆ.

ಶ್ರೀರಾಂಪುರಂ ದೇವಾಲಯ ಸಂಕೀರ್ಣವು ಶ್ರೀ ಲಕ್ಶ್ಮೀ ನಾರಾಯಣಿ ದೇವಾಲಯವು ಹಸಿರು ಬೆಟ್ಟಗಳ ಹಿನ್ನೆಲೆಯೊಂದಿಗೆ ವಿಸ್ತಾರವಾದ 100 ಎಕರೆ ಪ್ರದೇಶದಲ್ಲಿದೆ. ಈ ದೇವಾಲಯದ ಪ್ರಮುಖ ವೈಶಿಷ್ಟ್ಯತೆಯು ಅದ್ಬುತವಾದ ಚಿನ್ನದ ಲೇಪನೊಂದಿಗೆ ನಿರ್ಮಿತವಾಗಿದೆ. ಆಸಕ್ತಿದಾಯಕ ವಿಷಯವೆಂದರೆ ಇಲ್ಲಿರುವ ಪ್ರತಿಯೊಂದೂ ಶಿಲ್ಪಗಳೂ ಚಿನ್ನದಿಂದ ಮಾಡಲಾಗಿದ್ದು, ಕಲಾತ್ಮಕ ವಿನ್ಯಾಸಗಳೊಂದಿಗೆ ತಾಮ್ರದ ತಳದ ಮೇಲೆ ಚಿನ್ನದ ಲೇಪನದ ಹಲವಾರು ಪದರಗಳು ದೇವಾಲಯಕ್ಕೆ ಐಷಾರಾಮಿ ನೋಟವನ್ನು ನೀಡುತ್ತದೆ.

ಪ್ರವಾಸಿಗರು ಇಲ್ಲಿಯ ನಕ್ಷತ್ರ ಆಕಾರದ ಮಾರ್ಗದ ಮೂಲಕ ಹಾದು ಹೋಗಬೇಕಾಗುತ್ತದೆ ಈ ಆಕಾರವು ಚಕ್ರವನ್ನು ಪ್ರತಿಬಿಂಬಿಸುತ್ತದೆ. (ಚಕ್ರವು ಧಾರ್ಮಿಕ ಚಿಹ್ನೆಯಾಗಿದೆ) ಮುಖ್ಯ ದೇವಾಲಯವು ಹಸಿರಿನಿಂದ ಸುತ್ತುವರಿದಿದ್ದು, ವಿಸ್ತಾರವಾದ ದೇವಾಲಯದ ಸಂಕೀರ್ಣವು ಕಣ್ಣುಗಳಿಗೆ ಹಬ್ಬವನ್ನು ನೀಡುತ್ತದೆ.

ಸಂಪತ್ತು ಮತ್ತು ಸಮೃದ್ಧಿಯ ದೇವತೆಯೆನಿಸಿರುವ ಒಳಗಿನ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮಿ ದೇವಿಯು ನಿಮ್ಮ ಮನಸ್ಸನ್ನು ಸಂತೋಷ ಮತ್ತು ಆಧ್ಯಾತ್ಮಿಕತೆಯಿಂದ ತುಂಬುತ್ತಾಳೆ.

ಸಂಕೀರ್ಣಗಳು ಚಿನ್ನದಿಂದ ಕೆತ್ತಲ್ಪಟ್ಟಿವೆ.

ಈ ಸುಂದರ ದೇವಾಲಯದ ಅತ್ಯದ್ಬುತವಾದ ಐಷಾರಾಮಿ ವಾಸ್ತುಶಿಲ್ಪವು ನಿಮ್ಮನ್ನು ಬೆರಗುಗೊಳಿಸದೆ ಇರದು

ನೀವು ವೆಲ್ಲೂರಿನಲ್ಲಿರುವಾಗ ಇವುಗಳಿಗೂ ಭೇಟಿ ಕೊಡಿ

ಜಲಕಂದೇಶ್ವರರ್ ದೇವಸ್ಥಾನ, ವೆಲ್ಲೂರು ಕೋಟೆ, ಅರುಲ್ಮಿಗು ಬಾಲಮುರುಗನ್ ರತ್ನಗಿರಿ ತಿರುಕೋವಿಲ್, ಸ್ವಾಮಿಮಲೈ ಹಿಲ್ಸ್, ಯಳಗಿರಿ, ಅಮಿರ್ತಿ ಝೂಲಾಜಿಕಲ್ ಪಾರ್ಕ್ ವೆಲ್ಲೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.

sripuram-golden-temple-vellore5-1661159800-1663910610.jpg -Properties

ವೆಲ್ಲೂರು ಕೋಟೆ

ಗೋಲ್ಡನ್ ಟೆಂಪಲ್ ವೆಲ್ಲೂರಿಗೆ ಭೇಟಿ ಕೊಡುವಾಗ ಇಲ್ಲಿಯ ವೆಲ್ಲೂರು ಕೋಟೆ ಮತ್ತು ಇನ್ನಿತರ ಸುಂದರ ಸ್ಥಳಗಳಿಗೆ ಭೇಟಿ ಕೊಡಬಹುದಾಗಿದ್ದು ನಿಮ್ಮ ಪ್ರವಾಸವನ್ನು ಇನ್ನಷ್ಟು ಆನಂದಮಯವಾಗಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+