Search
  • Follow NativePlanet
Share
» »ರಾಯಲ್ ಎನ್‌ಫೀಲ್ಡ್ ಬೈಕ್ ನಿಮಗಿಷ್ಟಾನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕು

ರಾಯಲ್ ಎನ್‌ಫೀಲ್ಡ್ ಬೈಕ್ ನಿಮಗಿಷ್ಟಾನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕು

ಬೈಕ್ ಬಿಡೋದಂದ್ರೆ ಹೆಚ್ಚಿನವರಿಗೆ ಇಷ್ಟವಿರುತ್ತದೆ. ಅದರಲ್ಲೂ ಯಾರು ಸ್ವತಂತ್ರರಾಗಿ ಬದುಕಲು ಇಷ್ಟಪಡುತ್ತಾರೋ ಅವರಿಗೆ ಬೈಕ್ ಹಿಡಿದುಕೊಂಡು ಲಾಂಗ್ ಡ್ರೈವ್‌ಗೆ ಹೋಗೋದು ಇಷ್ಟವಿರುತ್ತೆ. ಇನ್ನುಸಾಕಷ್ಟು ಹುಡುಗಿಯರಿಗೆ ಬೈಕ್ ಬಿಡೋ ಹುಡುಗರು ಅಂದ್ರೆ ಇಷ್ಟ ಇರುತ್ತದೆ. ಬೈಕ್ ಬಿಡುವವರು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಲೆದರ್ ಜಾಕೇಟ್ ಹಾಕಿಕೊಂಡು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಸ್ಟೈಲ್ ಆಗಿರುವ ವ್ಯಕ್ತಿ.

ರಾಯಲ್ ಎನ್‌ಫೀಲ್ಡ್ ಗ್ಯಾರೆಜ್ ಕೆಫೆ

ರಾಯಲ್ ಎನ್‌ಫೀಲ್ಡ್ ಗ್ಯಾರೆಜ್ ಕೆಫೆ

PC: Garage Cafe Goa

ನಾವಿಂದು ಹೇಳ ಹೊರಟಿರುವ ಈ ತಾಣವು ಬೈಕ್ ಇಷ್ಟಪಡುವವರಿಗೆ ಇಷ್ಟವಾಗುತ್ತೆ. ಅದರಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್ ಇಷ್ಟಪಡುವವರಿಗಂತೂ ಸಿಕ್ಕಾಪಟ್ಟೆ ಇಷ್ಟವಾಗುತ್ತೆ. ಗೋವಾದಲ್ಲಿ ಒಂದು ರಾಯಲ್ ಎನ್‌ಫೀಲ್ಡ್ ಗ್ಯಾರೆಜ್ ಕೆಫೆ ಇದೆ. ನೀವು ಗೋವಾಕ್ಕೆ ಭೇಟಿ ನೀಡಿದಾಗ ಒಮ್ಮೆಯಾದರೂಈ ಗ್ಯಾರೆಜ್ ಕೆಫೆಗೆ ಭೇಟಿ ನೀಡಲೇ ಬೇಕು. ನಿಮಗೆ ಖಂಡಿತಾ ಇಷ್ಟವಾಗುತ್ತದೆ. ಇಲ್ಲಿನ ಅಸ್ಥವ್ಯಸ್ಥವಾದ ಹಾಗೂ ಶಾಂತ ಸ್ಥಳವು ನಿಮಗೆ ಖುಷಿನೀಡುತ್ತದೆ.

ಪೋರ್ಚುಗೀಸ್ ಶೈಲಿ ಕೆಫೆ

ಪೋರ್ಚುಗೀಸ್ ಶೈಲಿ ಕೆಫೆ

PC: Garage Cafe Goa

ಅರ್ಧ ಎಕರೆ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ಕೆಫೆಯು ಪೋರ್ಚುಗೀಸ್ ಶೈಲಿಯನ್ನು ನೆನಪಿಸುತ್ತದೆ. ಈ ರಾಯಲ್ ಎನ್ಫೀಲ್ಡ್ ಕೆಫೆಯ ಪ್ರತಿಯೊಂದು ಸ್ವತಂತ್ರ ಮತ್ತು ಅಂತರ್ಸಂಪರ್ಕಿತ ರಚನೆಗಳು ತನ್ನ ಸ್ವಂತ ಕಥೆಯನ್ನು ನಿರೂಪಿಸುತ್ತವೆ. ಇಡೀ ಕಟ್ಟಡವು ಕಲಾಕೃತಿಯೊಂದಿಗೆ ವೈಭವೀಕರಿಸಲ್ಪಟ್ಟಿದೆ. ಇದು ಅವಾಲೆಜೊಸ್ ಕಲೆಗೆ ಗೌರವ ಸಲ್ಲಿಸಲು, ಕೈ-ಚಿತ್ರಣದ ಟೈಲ್ಸ್‌ಗಳನ್ನು ಗೋವಾ ಕುಶಲಕರ್ಮಿಗಳು ಹಾಕಿದ್ದಾರೆ.

ರಾಯಲ್ ಎನ್ಫೀಲ್ಡ್ ಮೋಟಾರ್ಸೈಕಲ್ ವಸ್ತುಸಂಗ್ರಹಾಲಯ

ರಾಯಲ್ ಎನ್ಫೀಲ್ಡ್ ಮೋಟಾರ್ಸೈಕಲ್ ವಸ್ತುಸಂಗ್ರಹಾಲಯ

PC: Garage Cafe Goa

ಇದು ರಾಯಲ್ ಎನ್ಫೀಲ್ಡ್ ಮೋಟಾರ್ಸೈಕಲ್ ವಸ್ತುಸಂಗ್ರಹಾಲಯವನ್ನು ಹೊಂದಿರುವ 120-ಆಸನಗಳ ಕೆಫೆಯಾಗಿದೆ. ಪ್ರದರ್ಶನ ಪ್ರದೇಶವು ನಿಮ್ಮ ಬೈಕುಗಳನ್ನು ನಿಲುಗಡೆ ಮಾಡಲು, ಅದ್ಭುತ ಆಹಾರವನ್ನು ಆನಂದಿಸಲು ಮತ್ತು ಈ ಉನ್ನತ ಶ್ರೇಣಿಯ ಬ್ರಾಂಡ್ನ ವಿವಿಧ ಆಯಾಮಗಳನ್ನು ಅನುಭವಿಸಲು ನಿಮಗೆ ಸ್ಥಳಾವಕಾಶ ನೀಡುತ್ತದೆ.

ವಿಭಿನ್ನ ಮಾದರಿಯ ಬೈಕ್

ವಿಭಿನ್ನ ಮಾದರಿಯ ಬೈಕ್

PC: Garage Cafe Goa

ಇಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಬೈಕ್‌ಗಳ ಮಾದರಿಯನ್ನು ಅನೇಕ ಗ್ರಾಹಕರು ಮಾಡಿಸಿದ್ದಾರೆ. ಇಲ್ಲಿ ಪ್ರದರ್ಶಿಸುವ ಅನೇಕ ದ್ವಿಚಕ್ರಗಳಲ್ಲಿ, ರೋಸ್ಟರ್ ಟ್ರಿಕ್ ಮತ್ತು ದಿ ಗುಡ್ ಟ್ರಿಪ್ ಬೈಕ್ಗಳಂತಹ ಬೈಕುಗಳನ್ನು ನೀವು ಕಾಣಬಹುದು. ಬೈಕರ್ಸ್‌ಗೆ ನಾನ್‌ ಬೈಕರ್ಸ್‌ಗೆ ಹಾಗೂ ಅವರ ಫ್ಯಾಮಿಲಿಗೆ ಜೊತೆಯಾಗಿ ಕುಳಿತುಕೊಂಡು ಆಹಾರದ ರುಚಿಯನ್ನು ಸವಿಯಲು ಈ ಗ್ಯಾರೆಜ್ ಕೆಫೆ ಅವಕಾಶ ನೀಡುತ್ತದೆ.

ಕೆಫೆಯ ಮೆನು

ಕೆಫೆಯ ಮೆನು

Garage Cafe Goa

ಇಲ್ಲಿಯ ಕೆಫೆಯ ಮೆನು ಬಹಳ ಸೀಮಿತವಾಗಿದೆ. ಆರೋಗ್ಯಕರ, ಸಮಗ್ರತೆಯ ಶೈಲಿಯಿಂದ ಗ್ರಾಹಕರಿಗೆ ಸೇವೆ ನೀಡುತ್ತದೆ. ಈ ಕೆಫೆಯು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಪ್ರವಾಸಿಗಳನ್ನು ಗಮನದಲ್ಲಿಟ್ಟುಕೊಂಡು ಮೆನುವನ್ನು ತಯಾರಿಸಿದೆ. ಚೋರಿಜೋ ಫಿಝಾ, ಕೀಮಾ ಪಾವ್‌ನಂತಹ ಫುಡ್ ಇಲ್ಲಿ ಸಿಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+