Search
  • Follow NativePlanet
Share
» »ದೈತ್ಯ ಏಕಶಿಲಾ ನಂದಿ ವಿಗ್ರಹಗಳು

ದೈತ್ಯ ಏಕಶಿಲಾ ನಂದಿ ವಿಗ್ರಹಗಳು

By Vijay

ಹಿಂದು ಸಂಸ್ಕೃತಿಯಲ್ಲಿ ನಂದಿ ಅಥವಾ ಎತ್ತಿಗೆ ವಿಶೇಷ ಸ್ಥಾನಮಾನವಿದೆ. ಶಿವ ಪಾರ್ವತಿಯರು ವಾಸವಿರುವ ಕೈಲಾಸ ಪರ್ವತದ ದ್ವಾರಪಾಲಕನಾಗಿ ನಂದಿಯು ಪಾತ್ರ ನಿರ್ವಹಿಸುತ್ತಾನೆ ಎಂದು ಪುರಾಣವು ಹೇಳುತ್ತದೆ. ಸರ್ವಶಕ್ತನಾದ ಶಿವನ ಆಶ್ರಯದಲ್ಲಿರುವುದರಿಂದ ನಂದಿಗೂ ಕೂಡ ಪೂಜೆಯನ್ನು ಸಲ್ಲಿಸಲಾಗುತ್ತದೆ ನಮ್ಮ ಭಾರತದಲ್ಲಿ. ಶಿವನಿಗೆ ಸಮರ್ಪಿತವಾದ ದೇವಸ್ಥಾನಗಳಲ್ಲಿ ನಂದಿಯ ವಿಗ್ರಹವಿರುವುದು ಸರ್ವೇಸಾಮಾನ್ಯ. ನಂದಿಯ ಕೋಡುಗಳ ಮೂಲಕ ಶಿವಲಿಂಗದ ದರುಶನ ಮಾಡಿದರೆ ಫಲವು ಶೀಘ್ರವಾಗಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯು ಹಲವರಲ್ಲಿದೆ.

ಭಾರತದಲ್ಲಿ ನಂದಿಗೆಂದೆ ಸಮರ್ಪಿತವಾದ ಹಲವು ದೇವಾಲಯಗಳೂ ಸಹ ಇವೆ. ಕೆಲವು ದೇವಸ್ಥಾನಗಳು ಬೃಹತ್ತಾದ ನಂದಿಯ ಏಕಶಿಲಾ ವಿಗ್ರಹಗಳಿಂದ ಪ್ರೇಕ್ಷಣೀಯ ಸ್ಥಳಗಳಾಗಿವೆ. ಈ ಲೇಖನದಲ್ಲಿ ಏಕಶಿಲೆಯಲ್ಲಿ ಕೆತ್ತಲಾದ ದೊಡ್ಡ ಗಾತ್ರದ ನಂದಿ ವಿಗ್ರಹಗಳ ಪರಿಚಯ ಮಾಡಲಾಗಿದೆ.

ಲೇಪಾಕ್ಷಿ:

ಲೇಪಾಕ್ಷಿ:

ಆಂಧ್ರ ಪ್ರದೇಶದ ಲೇಪಾಕ್ಷಿಯಲ್ಲಿರುವ ಬೃಹತ್ ನಂದಿ ವಿಗ್ರಹವು ಭಾರತದ ಅತಿ ದೊಡ್ಡ ನಂದಿ ವಿಗ್ರಹವಾಗಿದ್ದು ಬಹು ಪ್ರಖ್ಯಾತಿಯನ್ನು ಪಡೆದಿದೆ. 15 ಅಡಿ ಎತ್ತರವಿರುವ ಈ ವಿಗ್ರಹವು 27 ಅಡಿಗಳಷ್ಟು ಉದ್ದವಿದೆ.

ಚಿತ್ರಕೃಪೆ: Neaheg

ಬೃಹದೀಶ್ವರ ದೇವಾಲಯ:

ಬೃಹದೀಶ್ವರ ದೇವಾಲಯ:

ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿರುವ ಯುನೆಸ್ಕೊ ಮಾನ್ಯತೆ ಪಡೆದ ಬೃಹದೀಶ್ವರ ದೇವಾಲಯ ಆವರಣದಲ್ಲಿರುವ ದೊಡ್ಡ ಏಕಶಿಲಾ ನಂದಿ ವಿಗ್ರಹವು ಗಮನ ಸೆಳೆಯುತ್ತದೆ. 13 ಅಡಿ ಎತ್ತರ ಹಾಗು 16 ಅಡಿಗಳಷ್ಟು ಉದ್ದದ ರಚನೆ ಇದಾಗಿದೆ.

ಚಿತ್ರಕೃಪೆ: Hari Shankar05

ಚಾಮುಂಡಿ ಬೆಟ್ಟ:

ಚಾಮುಂಡಿ ಬೆಟ್ಟ:

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಈ ಪ್ರಖ್ಯಾತ ನಂದಿ ವಿಗ್ರಹವು 15 ಅಡಿ ಎತ್ತರ ಹಾಗು 24 ಅಡಿಗಳಷ್ಟು ಉದ್ದವಿದೆ. 1664 ರಲ್ಲಿ ದೊಡ್ಡ ರಾಜ ವಡೇಯರ್ ಅವರಿಂದ ಈ ಏಕಶಿಲಾ ವಿಗ್ರಹವು ಪ್ರತಿಷ್ಠಾಪಿಸಲಪಟ್ಟಿದೆ.

ಚಿತ್ರಕೃಪೆ: Sanjay Acharya

ಬಸವನಗುಡಿ:

ಬಸವನಗುಡಿ:

ಐಟಿ ನಗರಿ ಬೆಂಗಳೂರಿನಲ್ಲಿರುವ ಇದೆ ಹೆಸರಿನ ಪ್ರದೇಶವಾದ ಬಸವನಗುಡಿಯಲ್ಲಿ ನಂದಿಗೆಂದೆ ಸಮರ್ಪಿತವಾದ ದೇವಾಲಯದಲ್ಲಿ ಈ ಆಕರ್ಷಕ ವಿಗ್ರಹವಿದೆ. 15 ಅಡಿ ಎತ್ತರ ಹಾಗು 20 ಅಡಿಗಳಷ್ಟು ಉದ್ದವಾಗಿದೆ ಈ ರಚನೆ. ಈ ದೇಗುಲಕ್ಕೆ ಸಂಬಂಧಿಸಿದ ಕಡಲೆಕಾಯಿ ಪರಿಶೆ ಎಂಬ ಉತ್ಸವವನ್ನು ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತದೆ.

ಚಿತ್ರಕೃಪೆ: Visdaviva

ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇಗುಲಗಳು:

ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇಗುಲಗಳು:

ಸುಮಾರು 11 ಶತಮಾನದಲ್ಲಿ ನಿರ್ಮಿಸಲಾದ ಹಳೇಬೀಡುವಿನಲ್ಲಿರುವ ಈ ದೇಗುಲಗಳ ಆವರಣದ ಪ್ರವೇಶ ಸ್ಥಳಗಳಲ್ಲಿ ಯಥಾವತ್ತಾದ ಆದರೆ ಆಕರದಲ್ಲಿ ವ್ಯತ್ಯಾಸವಿರುವ ಈ ನಂದಿ ವಿಗ್ರಹಗಳನ್ನು ಕಾಣಬಹುದು.

ಚಿತ್ರಕೃಪೆ: Ramanathan.k.i

ವಿರೂಪಾಕ್ಷ ದೇವಾಲಯ:

ವಿರೂಪಾಕ್ಷ ದೇವಾಲಯ:

ಯುನೆಸ್ಕೊ ಮಾನ್ಯತೆ ಪಡೆದ ಕರ್ನಾಟಕದ ಹೆಮ್ಮೆಯ ವಿಜಯ ನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ಹಂಪಿ ನಗರದಲ್ಲಿರುವ ಪ್ರಖ್ಯಾತ ವಿರೂಪಾಕ್ಷ ದೇವಸ್ಥಾನದಲ್ಲಿ ಈ ಆಕರ್ಷಕ ನಂದಿ ವಿಗ್ರಹವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Mukul Banerjee

ನಂದಿ ದೇವಸ್ಥಾನ:

ನಂದಿ ದೇವಸ್ಥಾನ:

ಮಧ್ಯ ಪ್ರದೇಶ ರಾಜ್ಯದ ಶೃಂಗಾರ ರಸ ಉಕ್ಕಿಸುವ ಖಜುರಾಹೊ ನಲ್ಲಿದೆ ನಂದಿಗೆ ಸಮರ್ಪಿತವಾದ ಈ ದೇವಸ್ಥಾನ. ಶಿವನ ಅವತಾರವಾದ ವಿಶ್ವನಾಥ ದೇವಸ್ಥಾನದ ಎದುರಿನಲ್ಲೆ ಈ ನಂದಿಯ ದೇವಾಲಯವಿದೆ. ಖಜುರಾಹೊ ಸ್ಮಾರಕಗಳ ಸಮೂಹದಲ್ಲಿ ಈ ರಚನೆಯೂ ಒಂದಾಗಿದೆ.

ಚಿತ್ರಕೃಪೆ: Rajenver

More News

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+